ಶಾಂತಿನಿಕೇತನ ಶಾಲೆಯ 23ನೇ ಸಂಸ್ಥಾಪನಾ ದಿನ ಆಚರಣೆ
ವಿಜಯಪುರ,ಸೆ.22:ನಗರದ ಶಾಂತಿನಿಕೇತನ ಪ್ರಾಥಮಿಕ ಮತ್ತು ಪ್ರೌಢಶಾಲೆಯಲ್ಲಿ 23 ನೇ ಸಂಸ್ಥಾಪನಾ ದಿನವನ್ನು ಆಚರಿಸಲಾಯಿತು. ಈ ಸಂದರ್ಭದಲ್ಲಿ ಸಂಸ್ಥೆಯ ನಿರ್ದೇಶಕಿ ದಿವ್ಯಾ ಬಿರಾದಾರ ಅವರು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಡಾ. ಸುರೇಶ ಬಿರಾದಾರ ಅವರು 23 ವರ್ಷಗಳ ಹಿಂದೆ ಪ್ರಾರಂಭ ಮಾಡಿದ ಈ ಶಾಲೆ ಇಂದು ಜಿಲ್ಲೆಯಲ್ಲಿಯೇ ದೊಡ್ಡ ಹೆಸರನ್ನು ಮಾಡಿದೆ. ಇಂದು ಈ ಶಾಲೆಯಲ್ಲಿ ಸುಮಾರು 3 ಸಾವಿರ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿದ್ದಾರೆ. ಈ ಮಟ್ಟಕ್ಕೆ ಬೆಳೆಯಲು ಸಹಕರಿಸಿದ ಪಾಲಕರಿಗೆ, ಶಿಕ್ಷಕರಿಗೆ ಮತ್ತು ವಿದ್ಯಾರ್ಥಿಗಳಿಗೆ ಧನ್ಯವಾದಗಳು ಎಂದು ನುಡಿದರು.
ಇದೇ ಸಂದರ್ಭದಲ್ಲಿ ವಿದ್ಯಾರ್ಥಿಗಳಾದ ಕರಣ ಜೈನ, ಸಂಜನಾ ಪಾಟೀಲ ಮತ್ತು ವಿಕ್ರಮ ಸುತಾರ ತಮ್ಮ ಶಾಲಾ ಅನುಭವಗಳನ್ನು ಹಂಚಿಕೊಂಡರು. ಶಿಕ್ಷಕಿ ಮಧುಮತಿ ಪಡತಾರೆ ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳು ಕಿರು ನಾಟಕ ಮಾಡಿದರು. ನಂತರ ವಿದ್ಯಾರ್ಥಿಗಳಿಗೆ ಸಿಹಿ ಹಂಚಲಾಯಿತು. ಪ್ರಾಚಾರ್ಯ ಶ್ರೀಧರ ಕುರಬೆಟ ಸ್ವಾಗತಿಸಿದರು. ಶಿಕ್ಷಕಿ ದೀಪಾ ತಿಳಗೂಳ ನಿರೂಪಿಸಿದರು. ನಂದಾ ಅಳ್ಳಿಚಂಡಿ ವಂದಿಸಿದರು.
ಶಿಕ್ಷಕರಾದ ಪ್ರವೀಣ ಗೆಣ್ಣೂರ, ಎ.ಎಚ್. ಸಗರ ಅನೀಲ ಬಾಗೇವಾಡಿ, ಅಶ್ವಿನ ವಗದರಗಿ, ಶಶಿಧರ ಲೋನಾರಮಠ, ಶ್ವೇತಾ ಪಾಟೀಲ, ಹೀನಾ ಕೌಸರ, ತಬಸುಮ, ಮಧುಮತಿ, ರೇಣುಕಾ ಕಡೇಮನಿ, ಶ್ರೀದೇವಿ ಜೋಳದ, ಸರೋಜಾ ಕರ್ಕಳ್ಳಿ, ದೀಪಾ, ಅಪ್ಸರಾ, ಯುನುಸ್, ಕಿರಣ ಮತ್ತಿತರು ಉಪಸ್ಥಿತರಿದ್ದರು.