ಕೆರೆಯ ನೀರನ್ನು ಕೆರೆಗೆ ಚೆಲ್ಲಿ ವರವ ಪಡೆಯಿರಿ:ಶಾಸ್ತ್ರೀ
ತಾಳಿಕೋಟೆ:ಸೆ.22: ಸದ್ಗುರುವಿನನ್ನು ಕಾಣಬೇಕು ಗುರುವಿನ ವಲುಮೆಯಾದ ನಂತರ ಪರಮಾತ್ಮನ ವಲುಮೆಯಾಗುತ್ತದೆ ಶ್ರೀ ಖಾಸ್ಗತರ, ವಿರಕ್ತ ಮಹಾಸ್ವಾಮಿಗಳವರ ಹೆಸರು ಸದಾ ನಮ್ಮೇಲ್ಲರ ಮನದಲ್ಲಿ ಅಡಗಿವೆ ಮೊದಲು ಗುರುವಿನ ಗುಲಾಮನಾಗುವತನಕ ದೊರೆಯದೆಣ್ಣ ಮುಕುತಿ ನಿಜಗುಣ ಶಿವಯೋಗಿಗಳು ಹೇಳಿದಂತೆ ಭಗವಂತನ ಅಂತಃಕರುಣೆಗೆ ಕೃಪೆಯಾಗಬೇಕೆಂದು ಪುರಾಣ ಪ್ರವಚನಕಾರರಾದ ಪ್ರವಚನ ರತ್ನ ಕಲ್ಬುರ್ಗಿ ಜಿಲ್ಲೆಯ ಸುಂಟನೂರ ಸಂಸ್ಥಾನ ಹಿರೇಮಠದ ಶ್ರೀ ಬಂಡಯ್ಯ ಶಾಸ್ತ್ರೀಗಳು ನುಡಿದರು.
ಶನಿವಾರರಂದು ಶ್ರೀ ಖಾಸ್ಗತೇಶ್ವರರ 128ನೇ ಹಾಗೂ ಶ್ರೀ ವೀರಕ್ತ ಮಹಾಸ್ವಾಮಿಗಳವರ 10ನೇ ಪುಣ್ಯಸ್ಮರಣೋತ್ಸವ ಕುರಿತು ಏರ್ಪಡಿಸಲಾದ ಆಧ್ಯಾತ್ಮೀಕ ಪ್ರವಚನದ 5ನೇ ದಿನದಂದು ಮಾತನಾಡುತ್ತಿದ್ದ ಶಾಸ್ತ್ರೀಗಳು ಭಗವಂತನ ವಲುಮೆ ಪಡೆದುಕೊಂಡ ವಿಠ್ಠಲ ದೇವನ ಭಕ್ತನಾದ ನಾಮದೇವನಿಗೆ ವಿಠ್ಠಲ ದೇವನು ಪ್ರತ್ಯಕ್ಷನಾಗಿ ಶಿಷ್ಯನನ್ನು ಪರಿಕ್ಷೀಸಿದ್ದರ ಕುರಿತು ವಿವರಿಸಿದ ಶಾಸ್ತ್ರೀಗಳು ಗುರುವಿನ ಗುಲಾಮನಾಗುವ ತನಕ ದೊರೆಯದೆಣ್ಣ ಮುಕುತಿ ಎಂದರು. ಎಲ್ಲಿಯವರೆಗೂ ಗುರು ಪಾತ್ರರಾಗುವದಿಲ್ಲಾ ಅಲ್ಲಿಯವರೆಗೆ ಗುರುವಿನ ವಲುಮೆ ಪಡೆಯಲು ಸಾದ್ಯವಿಲ್ಲಾ ಗುರುವಿನ ಗುಲಾಮನಾದಾಗ ಮಾತ್ರ ಮೋಕ್ಷ ಸಿಗಲು ಸಾದ್ಯವೆಂದರು. ದೇಹ ಅನ್ನುವದು ದೇವಾಲಯವಿದ್ದಂತೆ ಇದನ್ನು ಪರಮಾತ್ಮನು ಮಾಡಿದ್ದಾನೆ ಕಾರಣ ಅರಿತು ನಡೆಯಬೇಕೆಂದರು. ಬಸವ ನಾಡಿನಲ್ಲಿಯ ಭಕ್ತಿಯ ವಿಚಾರ ಇತಿಹಾಸ ಪುಟಗಳಲ್ಲಿದೆ ಶ್ರೀ ಖಾಸ್ಗತ ಮಠದಲ್ಲಿ ಭಕ್ತರಾಗಿ ಮುನ್ನಡೆದವರೂ ಸಹ ಮುಂದೆ ಶರಣರಾಗುತ್ತೀರಿ ಎಂದರು. ಯಾವುದೇ ಆದ್ಯಾತ್ಮದ ವಿಚಾರವಾಗಲಿ ಕೇಳುವದು ಬೇರೆ ಕೇಳಿದ್ದನ್ನು ಅರ್ಥಮಾಡಿಕೊಳ್ಳುವದು ಬೇರೆ ಏನೇ ಇರಲಿ ಆದ್ಯಾತ್ಮ ಅನ್ನುವದರಲ್ಲಿ ದೊಡ್ಡ ಶಕ್ತಿ ಇದೆ ಎಂದರು. ಅನುಭವದ ಶರಣರು ಜಗತ್ತಿನಲ್ಲಿ ದೊಡ್ಡವರಾಗಿದ್ದು ನಿಜವಾದ ದೊಡ್ಡವರು ಯಾರಾಗುತ್ತಾರೆಂದರೆ ಈಗೀನ ಸಂಶೋಧನೆಯನ್ನು 800 ವರ್ಷಗಳ ಹಿಂದೆಯೇ ವಚನ ಸಾಹಿತ್ಯದಲ್ಲಿ ತಿಳಿಸಿಕೊಟ್ಟಿದ್ದಾರೆಂದು ಹೇಳಿದ ಶಾಸ್ತ್ರೀಗಳು ಅಂತರಂಗದಲ್ಲಿ ತಿಳಿದು ಬರುವದೇ ವಚನ ಸಾಹಿತ್ಯವಾಗಿದೆ ಎಂದರು. ಮಾತಿಗೂ ವಚನಕ್ಕೂ ಬಹಳೇ ವ್ಯತ್ಯಾಸವಿದೆ ಎಂದು ತಿಳಿ ಹೇಳಿದ ಶಾಸ್ತ್ರೀಗಳು ನುಡಿದಂತೆ ನಡೆ ಇದೇ ಜನ್ಮ ಕಡೆ ಎಂದಿದ್ದಾರೆ. ಜಗತ್ತಿನಲ್ಲಿ ಯಾರು ದೊಡ್ಡವರು ಎಂಬುದರ ಕುರಿತು ಬಸವಣ್ಣನವರ ವಚನ ಪ್ರಸ್ಥಾಪಿಸಿ ತಿಳಿ ಹೇಳಿದ ಶಾಸ್ತ್ರೀಗಳು ಭೂಮಿಯಲ್ಲಿ ಸಮುದ್ರ ದೊಡ್ಡದು ಸಮುದ್ರ ಎನ್ನುವದು ನಿಂತಿರುವದು ಭೂಮಿಯ ಮೇಲಿದೆ ಸಮುದ್ರ ಆಳಕ್ಕೆ ಹೋದರೂ ಸಿಗುವದು ಭೂಮಿಯೇ ಆದರೆ ಭೂಮಿ ನಿಂತಿರುವದು ಆದಿಶೇಷ ಎನ್ನುವ ಭೂಮಿಯನ್ನು ಹೊತ್ತುಕೊಂಡು ನಿಂತಿದ್ದಾನೆ ಆದಿಶೇಷ ಎಲ್ಲಿದ್ದಾನೆಂದರೆ ಪಾರ್ವತಿಯ ಕೈಯಲ್ಲಿನ ಕಿರು ಬೆರಳಿನಲ್ಲಿ ಉಂಗೂರವನ್ನಾಗಿ ಹಾಕಿಕೊಂಡಿದ್ದಾಳೆ ಪಾರ್ವತಿಯೂ ಪರಶಿವನ ಅರ್ದಾಂಗಿಯಾಗಿದ್ದಾಳೆ ಕಾರಣ ಪತ್ನಿಕ್ಕಿಂತ ಪತಿ ದೊಡ್ಡವ ಎನ್ನುವ ವಿಚಾರ ಬಂದಾಗ ಪರಮೇಶ್ವರ ದೊಡ್ಡವನಾಗುತ್ತಾನೆ ಇದರಿಂದಲೇ ದೇವರು ಬಹಳ ದೊಡ್ಡವನೆಂದು ಹೇಳಲಾಗುತ್ತದೆ ಎಂದರು. ದೇವರು ಹಿಮಾಲಯದ ಪರ್ವತದಲ್ಲಿಲ್ಲಾ ಕೂಡಲ ಸಂಗನ ಶರಣರ ಮನದಲ್ಲಿ ಅಡಗಿದ್ದಾನೆ ಮೊದಲು ದೇವಾಲಯದಲ್ಲಿ ಭಕ್ತರು ದೇವರನ್ನು ತಿಳಿದುಕೊಳ್ಳಬೇಕಾದರೆ ಇಂತಹ ಆದ್ಯಾತ್ಮದ ಪ್ರವಚನದಲ್ಲಿ ಪಾಲ್ಗೊಳ್ಳಬೇಕೆಂದರು. ಬಸವಣ್ಣನವರು ಹೇಳಿದಂತೆ ಪರಮಾತ್ಮ ನಮ್ಮೊಳಗೆ ಇದ್ದಾನೆಂದು ಹೇಳಿದ ಶಾಸ್ತ್ರೀಗಳು, ಪರಮಾತ್ಮ ಮನಸ್ಸಿನಲ್ಲಿದ್ದಾನೆ ಬೇರೆಯವರಿಗೆ ಉಪಕಾರ ಮಾಡು ಅನ್ನುವದೇ ಪರಮಾತ್ಮನ ಮನಸ್ಸಾಗಿದೆ ಕಾರಣ ನಮ್ಮೋಳಗಿನ ಪರಮಾತ್ಮನನ್ನು ಕಾಣಲು ಗುರುವಿನ ದಾರಿ ಹಿಡಿಯಬೇಕೆಂದರು.
ಈ ಸಮಯದಲ್ಲಿ ಶ್ರೀ ಖಾಸ್ಗತೇಶ್ವರ ಮಠದ ಉಸ್ತುವಾರಿ ವೇ.ಮುರುಘೇಶ ವಿರಕ್ತಮಠ, ಶ್ರೀ ಚಂದ್ರಶೇಖರ ಶಾಸ್ತ್ರೀಗಳು ಹಿರೇಮಠ(ಯಕ್ತಾಪೂರ), ವೇ.ವಿಶ್ವನಾಥ ವಿರಕ್ತಮಠ, ವೇ.ಮಹಾಂತಯ್ಯ ವಿರಕ್ತಮಠ, ಗವಾಯಿಗಳಾದ ರಾಜಶೇಖರ ಗುಬ್ಬೇವಾಡ, ಬಸನಗೌಡ ಬಿರಾದಾರ, ಯಲ್ಲಪ್ಪ ಗುಂಡಳ್ಳಿ, ಶಶಿಕುಮಾರ, ಅಡವೇಶ, ಮೊದಲಾದವರು ಉಪಸ್ಥಿತರಿದ್ದರು.