ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನ ಬಿಡುಗಡೆ
ತಾಳಿಕೋಟೆ:ಸೆ.22: ಪಟ್ಟಣದಲ್ಲಿ ಅಕ್ಟೋಬರ್ 1 ರಂದು ಜರುಗಲಿರುವ ತಾಳಿಕೋಟೆ ತಾಲೂಕಾ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನದ ಲಾಂಛನವನ್ನು ತಾಲೂಕಾ ತಹಶಿಲ್ದಾರರಾದ ಶ್ರೀಮತಿ ಕೀರ್ತಿ ಚಾಲಕ್ ಅವರು ಶುಕ್ರವಾರರಂದು ಬಿಡುಗಡೆಗೊಳಿಸಿದರು.
ಈ ಸಮಯದಲ್ಲಿ ಮಾತನಾಡಿದ ತಹಶಿಲ್ದಾರ ಶ್ರೀಮತಿ ಕೀರ್ತಿ ಚಾಲಕ್ ಅವರು ತಾಳಿಕೋಟೆ ಐತಿಹಾಸಿಕ ನಗರಿ ತಾಲೂಕಾ ಕೇಂದ್ರವಾದ ಬಳಿಕ ಮೊದಲನೇಯ ತಾಲೂಕಾ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವದು ಅತ್ಯಂತ ಖುಷಿ ತರುವಂತಹದ್ದಾಗಿದೆ ಕನ್ನಡಾಂಭೆಯ ತೇರನ್ನು ಎಲ್ಲರೂ ಒಗ್ಗಟ್ಟಿನಿಂದ ಎಳೆಯಬೇಕಾಗಿದೆ ತಮ್ಮ ನಾಡಿನ ಕನ್ನಡ ಭಾಷೆಯಲ್ಲಿ ಪ್ರೀತಿ ತುಂಬಿದೆ ಇಂತಹ ಭಾಷೆಯನ್ನು ಎಲ್ಲರೂ ಹೊತ್ತುಕೊಂಡು ಮೇರೆಸುವಂತಹ ಸಂದರ್ಬ ಬಂದಿದೆ ನಾಡಿನ ನೆಲ ಜಲ ಭಾಷೆಯನ್ನು ಉಳಿಸಿ ಬೆಳೆಸುವದರೊಂದಿಗೆ ಅದನ್ನು ರಕ್ಷೀಸುವಂತಹ ಜವಾಬ್ದಾರಿಯೂ ಕೂಡಾ ಪ್ರತಿಯೊಬ್ಬರ ಮೇಲಿದೆ ತಾಳಿಕೋಟೆ ತಾಲೂಕಿನ ಸಾಹಿತಿಗಳು ರಾಜ್ಯ ಅಲ್ಲದೇ ದೇಶ ಮಟ್ಟದಲ್ಲಿಯೂ ಹೆಸರು ಮಾಡಿದಂತಹ ಅನೇಕರಿದ್ದಾರೆ ಆದರೆ ಅವರಿಗೆ ವೇದಿಕೆ ನೀಡುವಂತಹ ಕಾರ್ಯವಾಗುವದರ ಜೊತೆಗೆ ಪ್ರೋತ್ಸಾಹಿಸುವಂತಹ ಕಾರ್ಯ ಈ ಸಮ್ಮೇಳನದಲ್ಲಿ ನಡೆಯಬೇಕಾಗಿದೆ ಎಂದ ಅವರು ತಾಲೂಕಿನ ಎಲ್ಲ ಇಲಾಖೆಗಳು ಈ ಕನ್ನಡ ಸಾಹಿತ್ಯ ಸಮ್ಮೇಳನದ ಯಶಸ್ವಿಗೆ ಎಲ್ಲ ರೀತಿಯಿಂದ ಸಹಕರಿಸಲಿದ್ದಾರೆ ಕನ್ನಡ ಸಾಹಿತ್ಯ ಪರಿಷತ್ತಿನ ನೂತನ ಅಧ್ಯಕ್ಷರಾಗಿರುವ ಆರ್.ಎಲ್.ಕೊಪ್ಪದ ಅವರೂ ಕೂಡಾ ಕನ್ನಡ ಭಾಷಾಭಿಮಾನದ ಪ್ರತಿಕವಾಗಿವಾಗಿದ್ದಾರೆಂದರೆ ತಪ್ಪಾಗಲಾರದು ಕನ್ನಡದ ತಾಯಿಭುವನೇಶ್ವರಿ ದೇವಿಯ ತೇರನ್ನು ಎಲ್ಲರನ್ನೂ ಒಗ್ಗೂಡಿಸಿಕೊಂಡು ಎಳೆಯಲು ಸಜ್ಜಾಗಿರುವದು ಸಂತಸ ತಂದಿದೆ ಎಂದರು.
ಈ ಸಮಯದಲ್ಲಿ ಕಸಾಪ ತಾಲೂಕಾ ಅಧ್ಯಕ್ಷ ಆರ್.ಎಲ್. ಕೊಪ್ಪದ, ಸಾಹಿತಿಗಳಾದ ಗುರುಪಾದ ಘೀವಾರಿ, ಶ್ರೀಕಾಂತ್ ಪತ್ತಾರ, ಕಲಾವಿದ ಹುಸೇನ ಮಕಾನದಾರ, ಸಿ ಆರ್ ಸಿ ರಾಜು ವಿಜಾಪುರ, ಸಂಘಟನಾ ಸಂಚಾಲಕ ಜೈ ಭೀಮ್ ಮುತ್ತಗಿ, ರಾಜು ಹಂಚಾಟೆ, ಸಂಗನಗೌಡ ಅಸ್ಕಿ, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಟಿ. ವಜ್ಜಲ್, ಡಾ. ಅನೀಲ ಕುಮಾರ ಇರಾಜ, ಆರ್.ಬಿ.ದಾನಿ, ಶಾಲಾ ಶಿಕ್ಷಕರ ಸಂಘದ ಗೌರವ ಕಾರ್ಯದರ್ಶಿ ಸುರೇಶ ಬೀರಗೊಂಡ, ಆರಿಫ್ ಹೊನ್ನುಟಗಿ, ಎಸ್.ವ್ಹಿ.ಜಾಮಗೊಂಡಿ. ಬಸವರಾಜ ಕಟ್ಟಿಮನಿ, ರವಿ ಕಟ್ಟಿಮನಿ, ಶಿಕ್ಷಕ ಗುಂಡುರಾವ್ ಧನಪಾಲ, ಸಿದ್ದು ಕಟ್ಟಿಮನಿ, ಶ್ರೀಮತಿ ರೇಣುಕಾ ಕಲ್ಬುರ್ಗಿ, ಶ್ರೀಮತಿ ಮಡಿವಾಳಮ್ಮ ನಾಡಗೌಡ, ಮುನ್ನಾ ಅತ್ತಾರ, ಪ್ರಭು ಸಣ್ಣಕ್ಕಿ, ಪರಿಷತ್ತಿನ ಮಹಿಳಾ ಪದಾಧಿಕಾರಿಗಳು ಹಾಗೂ ಕನ್ನಡ ಅಭಿಮಾನಿಗಳು ಉಪಸ್ಥಿತರಿದ್ದರು.