ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತ ಮಹಿಬೂಬ್ ನದಾಫ್
ಹೂವಿನ ಹಿಪ್ಪರಗಿ :ಸೆ.22:ದಿಂಡವಾರ ಗ್ರಾಮದಲ್ಲಿ ಸ.ಕ. ಗಂ. ಮ. ಕಿ. ಪ್ರಾ ಶಾಲೆ ತಿಮ್ಮಾಪುರ ಬಡಾವಣೆ ದಿಂಡವಾರದಲ್ಲಿ ಸನ್ಮಾನಿತರಾದ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿ ಪುರಸ್ಕøತರು ಶ್ರೀ ಮಹಬೂಬ ನದಾಫ ರವರಿಗೆ ಎಸ್‍ಡಿಎಂಸಿ ಅಧ್ಯಕ್ಷರು,ಉಪಾಧ್ಯಕ್ಷರು ಹಾಗೂ ಸರ್ವ ಸದಸ್ಯರು ಅಭಿನಂದನಾ ಸಮಾರಂಭ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು
ಕಾರ್ಯಕ್ರಮದ ಮುಖ್ಯ ಅತಿಥಿಗಳಾದ ಶ್ರೀ ಎಸ್ ಎಸ್ ಅಂಬಲಿ (ಶಿಕ್ಷಣ ಸಂಯೋಜಕರು)ಗುರುಗಳು ಕಾರ್ಯಕ್ರಮದಲ್ಲಿ ನದಾಫ ಶಿಕ್ಷಕರ ವ್ಯಕ್ತಿತ್ವ ಹಾಗೂ ಮಕ್ಕಳ ಶಿಸ್ತನ್ನು ಕುರಿತು ನುಡಿದರು ಹಾಗೂ ಇನ್ನೋರ್ವ ಅತಿಥಿಗಳಾದ ಶ್ರೀ ಬಿ ಬಿ ಬಾಗೇವಾಡಿ(ಬಿ.ಆರ್.ಪಿ) ಗುರುಗಳು ಉತ್ತಮ ದಾಖಲಾತಿ ನಿರ್ವಹಣೆಯೊಂದಿಗೆ, ಉತ್ತಮ ಶಾಲೆಯನ್ನಾಗಿ ಮಾಡಿ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡ ನದಾಫರವರ ಕುರಿತು ಮಾತನಾಡಿದರು.
ಶ್ರೀ ಬಾರಿಕಾಯಿ ಗುರುಗಳು (ಶಿಕ್ಷಕರ ಸಂಘದ ನಿರ್ದೇಶಕರು)
‘ ಎಲ್ಲಿ ಶಿಕ್ಷಕರನ್ನು ಗೌರವಿಸಲಾಗುತ್ತದೆಯೋ ಅಲ್ಲಿ ಮಕ್ಕಳ ಉತ್ತಮ ಬೆಳವಣಿಗೆ ಸಾಧ್ಯ’ ಎಂದು ತಮ್ಮ ಹಿತನುಡಿಯನ್ನು ಹಂಚಿಕೊಂಡರು
ಅದೇ ರೀತಿಯಾಗಿ ಜಿಲ್ಲಾ ಅತ್ಯುತ್ತಮ ಶಿಕ್ಷಕ ಪ್ರಶಸ್ತಿಯನ್ನು ಪಡೆದುಕೊಂಡ ಶ್ರೀ ಮಹಬೂಬ ನದಾಫ ಮುಖ್ಯ ಗುರುಗಳು ತಮ್ಮ ಶಾಲೆಯನ್ನು ಮಾದರಿ ಶಾಲೆಯನ್ನಾಗಿ ಮಾಡುವುದಾಗಿ ಎಂದು ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.
ಇದೇ ಸಂದರ್ಭದಲ್ಲಿ ಎಸ್ ಡಿ ಎಂ ಸಿ ಅಧ್ಯಕ್ಷರು ರೇಣುಕಾ ಕೋಲಕಾರ, ಉಪಾಧ್ಯಕ್ಷರು ದಸ್ತಗಿರಸಾಬ ವಾಲಿಕಾರ ಹಾಗೂ ಶಿವು ಜೋಗಿ ಗ್ರಾಮ ಪಂಚಾಯತ್ ಅಧ್ಯಕ್ಷರು,ಪರಶುರಾಮ ಉತ್ನಾಳ ಡಿಎ???ಸ್ ಮುಖಂಡರು, ಸಮೂಹ ಸಂಪನ್ಮೂಲ ವ್ಯಕ್ತಿಯಾದ ನಂದ್ಯಾಳ ಶಿಕ್ಷಕರು, ಗುರುಗಳಾದ ಮಲ್ಲಿಕಾರ್ಜುನ್ ಜೋಗಿ, ವಿಕಾಸ್ ಜೋಗಿ,ಮಹೇಂದ್ರ ಬಡಿಗೇರ,ಚೇತನ್, ಎಚ್ ಐ ಕುರುಣಾದ, ಶ್ರೀಶೈಲ ನಾಗುರ, ಚಿದಾನಂದ ಹೂಗಾರ ಹಾಗೂ ಶರಣಬಸವ ಗುದ್ದಿ (ಸಮುದಾಯ ಆರೋಗ್ಯ ಅಧಿಕಾರಿ),ತಾಲೂಕ ಶಿಕ್ಷಕರ ಸಂಘದ ಅಧ್ಯಕ್ಷರಾದ ಅಮರೇಶ್ ನಾಡಗೌಡ, ಮುತ್ತು ಅಗ್ನಿ ,ಎಚ್ ಎಲ್ ಮಸಬಿನಾಳ ಉಪಸ್ಥಿತರಿದ್ದರು.