ಮಕ್ಕಳಲ್ಲಿ ಸೂಕ್ತವಾಗಿ ಅಡಗಿರುವ ಪ್ರತಿಭೆಯನ್ನು ಗುರುತಿಸುವುದೆ ಪ್ರತಿಭಾ ಕಾರಂಜಿಯ ಮುಖ್ಯ ಉದ್ದೇಶ: ಕನ್ನಾಳೆ
ಭಾಲ್ಕಿ:ಸೆ.22:ಪ್ರತಿಯೊಂದು ಮಗುವಿನಲ್ಲೂ ಒಂದೊಂದು ಪ್ರತಿಭೆ ಇರುತ್ತದೆ ಅದರ ಅನಾವರಣಕ್ಕೆ ವೇದಿಕೆ ಒದಗಿಸಿಕೊಡುವುದೇ ಪ್ರತಿಭಾ ಕಾರಂಜಿ ಆಗಿದೆ ಎಂದು ಶಿಕ್ಷಣ ಸಂಯೋಜಕ ಮಲ್ಲಿಕಾರ್ಜುನ ಕನ್ನಳೆ ಹೇಳಿದರು.
ರಾಚೋಟೇಶ್ವರ ಹಿರಿಯ ಪ್ರಾಥಮಿಕ ಶಾಲೆ ಡೋಣಗಾಪುರ ಶಾಲಾ ಆವರಣದಲ್ಲಿ ಏರ್ಪಡಿಸಲಾದ2024-25 ನೇ ಸಾಲಿನ ಡೋಣಗಾಪುರ ಕ್ಲಸ್ಟರ್ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಕ.ರಾ.ಪ್ರೌಢ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷರು ದತ್ತಾತ್ರಿ ಕಾಟಕರ ಮಾತನಾಡಿ ಪ್ರತಿಭಾ ಕಾರಂಜಿ ಅಂತಹ ಕಾರ್ಯಕ್ರಮಗಳು ವಿದ್ಯಾರ್ಥಿಗಳ ಆತ್ಮ ಸ್ಥೈರ್ಯ ಹೆಚಿಸುತ್ತವೆ ಹೆಚ್ಚಿನ ವಿದ್ಯಾರ್ಥಿಗಳು ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಬೇಕು, ಶಿಕ್ಷಕರು ಹೆಚ್ಚಿನ ವಿದ್ಯಾರ್ಥಿಗಳು ಸ್ಪರ್ಧೆಯಲ್ಲಿ ಭಾಗವಹಿಸುವಂತೆ ಪ್ರೇರಿಸಬೇಕು ಎಂದರು.
ಡೋಣ್ಣೆಶ್ವರ ಶಿಕ್ಷಣ ಸಂಸ್ಥೆಯ ಅಧ್ಯಕ್ಷರು ವೀರಶೆಟ್ಟಿ ಬಿರಾದಾರ ಅವರು ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ಕ್ಲಸ್ಟರನ ಎಲ್ಲಾ ಶಾಲೆಯ ಮುಖ್ಯ ಗುರುಗಳಿಗೆ, ನಿರ್ನಾಯಕರಿಗೆ ಪುಸ್ತಕ ಮತ್ತು ಹೂವುಗುಚ್ಚ ನೀಡಿ ಗೌರವಿಸಿದರು.ಡೋಣಗಾಪುರ ಪಂಚಾಯತ ಅಧ್ಯಕ್ಷ ಸುರೇಶ ಮೊರೆ, ಪಿಕೆಪಿಎಸ್ ಅಧ್ಯಕ್ಷ ಶಾಂತಂವೀರ ಪಾಟೀಲ, ಶಿವರಾಜ ಪಾಟೀಲ,ಸಂಜಯ ಪುರಿ,ಶಿವರಾಜ ಘೋದೆ,ಕೃಷ್ಣ,ವಿಶ್ವನಾಥ,ಉತ್ತಮ ಸಿಂಧೆ, ಸತ್ಯವಾನ ಕಾಂಬಳೆ, ಜಗನಾಥ ನಾಟೆಕಾರ,ಸರಿತಕುಮಾರಿ,ಪದ್ಮಾವತಿ ಮುಂತಾದವರು ಅನೇಕರು ಉಪಸ್ಥಿತರಿದ್ದರು.ಚನ್ನಪ್ಪ ಚಿದ್ರೆ ನಿರೂಪಿಸಿದರು ಗಂಗಾಧರ ವಂದಿಸಿದರು.