ಮಕ್ಕಳಲ್ಲಿನ ಪ್ರತಿಭೆಗೆ ಪ್ರತಿಭಾ ಕಾರಂಜಿ ಉತ್ತಮ ವೇದಿಕೆ : ಹೇಡೆ
ಔರಾದ್ :ಸೆ.22: ಗ್ರಾಮೀಣ ಭಾಗದ ಮಕ್ಕಳಿಗೆ ಕ್ರೀಡೆಗಳು ಅವಶ್ಯಕ ವಾಗಿವೆ ಅವರಲ್ಲಿನ ಪ್ರತಿಭೆಗಳನ್ನು ಹೊರಹಾಕಲು ಪ್ರತಿಭಾ ಕಾರಂಜಿ ಉತ್ತಮ ವೇದಿಕೆ ಆಗಿದೆ ಎಂದು ಗ್ರಾಮ ಪಂಚಾಯತ ಅಧ್ಯಕ್ಷ ರಾಜಕುಮಾರ ಹೇಡೆ ಹೇಳಿದರು.
ಗುರುವಾರ ತಾಲ್ಲೂಕಿನ ವಡಗಾಂವ(ದೆ ) ಸರ್ಕಾರಿ ಮಾದರಿಯ ಪ್ರಾಥಮಿಕ ಶಾಲೆ ಯಲ್ಲಿ ಏರ್ಪಡಿಸಿದ ವಲಯ ಮಟ್ಟದ ಪ್ರತಿಭಾ ಕಾರಂಜಿ ಕಾರ್ಯಕ್ರಮಕ್ಕೆ ಜ್ಯೋತಿ ಬೆಳಗುವ ಮೂಲಕ ಚಾಲನೆ ನೀಡಿ ಮಾತನಾಡಿದ ಅವರು ವಿದ್ಯಾರ್ಥಿಗಳು ಉತ್ತಮ ಕ್ರೀಡಾ ಪ್ರತಿಭೆ ಮೆರೆಯುತ್ತಿರುವುದು ಮೆಚ್ಚುಗೆಯ ಸಂಗತಿಯಾಗಿದೆ. ಜ್ಞಾನ ಸಂಪಾದನೆಯ ಜೊತೆಗೆ ಕ್ರೀಡೆ ಸಾಂಸ್ಕøತಿಕ ಬೆಳವಣಿಗೆಯೂ ಬೇಕು. ನಾವು ಕೇವಲ ಅಂಕಪಟ್ಟಿಯ ಶಿಕ್ಷಣಕ್ಕೆ ಮುಂದಾಗದೇ ಅದರೊಂದಿಗೆ ದೇಶ ಪ್ರೇಮ, ದುರ್ಬಲರಿಗೆ ಸಹಾಯ ಸಹಕಾರವನ್ನು ನೀಡುವ ಮಾನವೀಯ ಮೌಲ್ಯಗಳನ್ನು ಕಲಿಯಬೇಕು ಎಂದರು.
ಬಿ ಆರ್ ಪಿ ಶಶಿಕಾಂತ್ ಬಿಡವೆ ಮಾತನಾಡಿ,ಕ್ರೀಡೆಗಳು ಮಕ್ಕಳನ್ನು ಶಾರೀರಿಕವಾಗಿ ಸದೃಢವಾಗಿ ಮಾಡುವುದರ ಜೊತೆಗೆ ಸೋಲು ಮತ್ತು ಗೆಲುವು ಸಮಾನವಾಗಿ ಸ್ವೀಕರಿಸುವ ಗುಣಗಳು ಬೆಳೆಸುತ್ತದೆ ಎಂದು ತಿಳಿಸಿದರು.
ಸಿ ಆರ್ ಪಿ ರವೀಂದ್ರ ಡಿಗ್ಗಿ ಮಾತನಾಡಿ, ದೈಹಿಕ ಶಿಕ್ಷಣ ಅಧಿಕಾರಿಗಳು ಪೆÇೀಷಕರು ಕ್ರೀಡೆಯ ಮಹತ್ವವನ್ನು ಅರಿತುಕೊಂಡು ಮಕ್ಕಳಿಗೆ ನಿರಂತರವಾಗಿ ಪೆÇ್ರೀತ್ಸಾಹಿಸಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಪಿಡಿಓ ಸುಭಾಷ ಭೂಯ್ಯಾ, ಬಿ.ಆರ್.ಪಿ ಶಶಿಕಾಂತ ಬಿಡವೆ, ಸಿ.ಆರ್.ಪಿ ಅಶೋಕ ಪಾಟೀಲ, ಮುಖ್ಯ ಗುರು ಪ್ರೇಮಕುಮಾರ, ರಾಜಪ್ಪಾ ಖಡಕೆ ಇತರರಿದ್ದರು.