ಮಾರ್ಟಳ್ಳಿ ಸೆಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ 95.58% ಫಲಿತಾಂಶ
ಸಂಜೆವಾಣಿ ವಾರ್ತೆ
ಹನೂರು ಮೇ 10 :- ತಾಲ್ಲೂಕು ಮಟ್ಟದಲ್ಲಿ ಎರಡನೇ ಸ್ಥಾನ ಪಡೆದಿರುವ ಮಾರ್ಟಳ್ಳಿ ಸೆಂಟ್ ಮೇರಿಸ್ ಆಂಗ್ಲ ಮಾಧ್ಯಮ ಶಾಲೆಗೆ 95.58% ಫಲಿತಾಂಶ ಪಡೆದು ವಿದ್ಯಾರ್ಥಿಗಳು ತೇರ್ಗಡೆಯಾಗಿದ್ದಾರೆ.
ಅಲ್ಬಿನಾ ಮರಿಯಾ ಎಂಬ ವಿದ್ಯಾರ್ಥಿ 582 ಅಂಕಗಳನ್ನು ಪಡೆದು ಶಾಲೆಗೆ ಟಾಪರ್ ಆಗಿದ್ದಾಳೆ.ಶಕ್ತಿ 565 ಅಂಕಗಳು ,ಜೆರ್ಲಿನ್ ರೊಸಾರಿಯೊ ಮತ್ತು ಅರೋಕಿಯಾ ರೆಮೋಶಿನಿ 560 ಅಂಕಗಳು,ಜಸ್ವಿ 557ಅಂಕಗಳು, ಪ್ರಿನ್ಸಿ ಎಮಿಲ್ಡಾ ಮತ್ತು ಶೆರಿನ್ ಫಾಸ್ಟಿನಾ 536 ಅಂಕಗಳು ಪಡೆದು ಅತ್ಯುನ್ನತ ಶ್ರೇಣಿ ಹೊಂದಿದ್ದಾರೆ.
7 ಮಂದಿ ಅತ್ಯುನ್ನತ ಶ್ರೇಣಿ 37 ಮಂದಿ ಪ್ರಥಮ ದರ್ಜೆ ಮತ್ತು 17 ಮಂದಿ ಎರಡನೇ ದರ್ಜೆ ಹೊಂದಿದ್ದಾರೆ.ಒಟ್ಟಾರೆ ಈ ಬಾರಿ, ಶೇ 95.58% ಮಂದಿ ಉತ್ತೀರ್ಣರಾಗಿದ್ದಾರೆ. ಶಾಲೆಗೆ ಕೀರ್ತಿ ತಂದುಕೊಟ್ಟ ವಿದ್ಯಾರ್ಥಿಗಳನ್ನು ವ್ಯಾವಸ್ಥಾಪಕರಾದ ಫಾ ಟೆನ್ನಿ ಕುರಿಯನ್ ಮುಖ್ಯಶಿಕ್ಷಕರಾದ ಅಣ್ಣೈನಾಥನ್ ಹಾಗೂ ಶಿಕ್ಷಕ ವೃಂದದವರು ಅಭಿನಂದಿಸಿದ್ದಾರೆ.