ಎಸ್.ಎಸ್.ಎಲ್.ಸಿ. ಟಾಪರ್ ಮಕ್ಕಳಿಗೆ ಡಿ.ಸಿ.ಯಿಂದ‌ ಸನ್ಮಾನ
ಕಲಬುರಗಿ:ಮೇ.9: ಎಸ್.ಎಸ್.ಎಲ್.ಸಿ. ಪರೀಕ್ಷೆ-1ರ ಫಲಿತಾಂಶ ಗುರುವಾರ ಪ್ರಕಟವಾಗಿದ್ದು, ಜಿಲ್ಲೆಯಲ್ಲಿ ಅತಿ ಹೆಚ್ಚು ಅಂಕ ಪಡೆದ ಕಲಬುರಗಿ ಶರಣಬಸವೇಶ್ವರ ವಸತಿ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳಾದ ಕು. ವೆಂಕಟೇಶ ಆರ್.ಕೆ. (625ಕ್ಕೆ 620 ಅಂಕ) ಮತ್ತು ಕು.ಶ್ರದ್ಧಾ ವಿ.ಕೆ (625ಕ್ಕೆ 620 ಅಂಕ) ಅವರನ್ನು ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ತಮ್ಮ‌ ಕೊಠಡಿಗೆ ಕರೆಸಿ ಸನ್ಮಾನಿಸಿ ಶುಭ ಕೋರಿದರು.
ಅಪರ ಜಿಲ್ಲಾಧಿಕಾರಿ ರಾಯಪ್ಪ ಹುಣಸಗಿ, ಸಹಾಯಕ ಆಯುಕ್ತೆ ರೂಪಿಂದರ್ ಸಿಂಗ್ ಕೌರ್, ಡಿ.ಡಿ.ಪಿ.ಐ ಸಕ್ರೆಪ್ಪಗೌಡ ಬಿರಾದಾರ ಇದ್ದರು.