ಹೇಮರಡ್ಡಿ ಮಲ್ಲಮ್ಮ ಪುರಾಣ ಪ್ರಾರಂಭ
ತಾಳಿಕೋಟೆ:ಮೇ.9: ತಾಲೂಕಿನ ಸುಕ್ಷೇತ್ರ ಬಿಂಜಲಭಾವಿ ಗ್ರಾಮದಲ್ಲಿ ಲಿಂ.ಶ್ರೀಶೈಲ ಸೂರ್ಯಸಿಂಹಾಸನಾಧೀಶ್ವರ ಶ್ರೀಶ್ರೀಶ್ರೀ 1008 ಶ್ರೀಶೈಲ ಜಗದ್ಗುರು ವಾಗೀಶ ಪಂಡಿತಾರಾಧ್ಯ ಶಿವಾಚಾರ್ಯ ಭಗವಾತ್ಪಾದರ ಕೃಪಾಶಿರ್ವಾದದಿಂದ ಹಾಗೂ ಶ್ರೀ ಷ.ಬ್ರ.ಡಾ.ವಿಶ್ವರಾಧ್ಯ ಶಿವಾಚಾರ್ಯ ಮಹಾಸ್ವಾಮಿಗಳು ಬೃನ್ಮಠ ಮಾಗಣಗೇರಿ ಇವರ ನೇತೃತ್ವದಲ್ಲಿ ನಡೆಯಲಿರುವ 21ನೇ ವರ್ಷದ ಶ್ರೀ ಮಲ್ಲಿಕಾರ್ಜುನ ಜಾತ್ರಾ ನಿಮಿತ್ಯವಾಗಿ ಇಂದು ದಿ.9 ಗುರುವಾರರಿಂದ 23 ಗುರುವಾರದ ವರೆಗೆ ಶ್ರೀ ಶಿವಶರಣೆ ಹೇಮರಡ್ಡಿ ಮಲ್ಲಮ್ಮ ಪುರಾಣವು ನಡೆಯಲಿದೆ.
ಪ್ರತಿದಿನ ಸಾಯಂಕಾಲ 7-30 ಗಂಟೆಯಿಂದ 9 ಗಂಟೆಯವರೆಗೆ ನಡೆಯಲಿರುವ ಈ ಪುರಾಣ ಪ್ರವಚನವನ್ನು ಸುರಪೂರ ತಾಲೂಕಿನ ಯಾಳಗಿ ಗ್ರಾಮದ ಸೋಮಶೇಖರ ಮಠದ ಪುರಾಣ ಭಾಸ್ಕರ ಪುಟ್ಟರಾಜ ಗವಾಯಿಗಳ ಶಿಷ್ಯರಾದ ಶ್ರೀ ವೇ.ಬಸಯ್ಯ ಶಾಸ್ತ್ರೀಗಳು ನಡೆಸಿಕೊಡಲಿದ್ದು ಸಂಗೀತ ಸೇವೆಯನ್ನು ಮಡಿವಾಳಪ್ಪ ಯಲಗೋಡ, ಶರಣಯ್ಯಸ್ವಾಮಿ ಸೋಲ್ಲಾಪೂರ ನೀಡಲಿದ್ದಾರೆ.
ದಿ.23 ಗುರುವಾರರಂದು 11 ಗಂಟೆಗೆ ಧರ್ಮಸಭೆ, ಪುರಾಣ ಮಂಗಲ ಜರುಗಲಿದ್ದು ಅಂದೇ ಸಾಯಂಕಾಲ 5 ಗಂಟೆಗೆ ಮಹಾರಥೋತ್ಸವವು ಜರುಗುವದು.
ರಾತ್ರಿ 9 ಗಂಟೆಗೆ ಸುಂದರ ಸಾಮಾಜಿಕ ನಾಟಕ ಪ್ರಾರಂಭಗೊಳ್ಳಲಿದ್ದು ಕಾರಣ ಭಕ್ತಾಧಿಗಳು ಈ ಪುರಾಣ ಪ್ರವಚನ ಕಾರ್ಯಕ್ರಮದಲ್ಲಿ ಭಾಗವಹಿಸಿ ಶ್ರೀ ಮಲ್ಲಿಕಾರ್ಜುನ ದೇವರ ಕೃಪೆಗೆ ಪಾತ್ರರಾಗಬೇಕೆಂದು ದೇವಸ್ಥಾನ ಸೇವಾ ಸಮಿತಿ ಪ್ರಕಟನೆ ಮೂಲಕ ತಿಳಿಸಿದೆ.