ಶಾಂತಿಭಂಗ: ಇಬ್ಬರ ವಿರುದ್ಧ ಪ್ರಕರಣ
ಕಲಬುರಗಿ,ಮೇ.9:ಇದೇ ತಿಂಗಳ 7 ರಂದು ನಡೆದ ಲೋಕಸಭೆ ಚುನಾವಣೆಯಲ್ಲಿ ನಗರದ ಹಪ್ತ್ ಗುಂಬರ್ (ಕೆ) ಹಿರಿಯ ಪ್ರಾಥಮಿಕ ಶಾಲೆಯ ಮತಗಟ್ಟೆ ಸಂಖ್ಯೆ 201 ಮತ್ತು 196 ಹೊರಗೆ ಅಂಬರೀಶ ಭೋವಿ ಮತ್ತು ಅಲಮದಾರ ಜೈದಿ ಮತ್ತವರ ಹಿಂಬಾಲಕರು ಪರಸ್ಪರ ಹೊಡೆದಾಡುವುದರ ಮೂಲಕ ಸಾರ್ವಜನಿಕ ಶಾಂತಿಭಂಗ ಮಾಡಿರುವ ಹಿನ್ನೆಲೆಯಲ್ಲಿ ಇಬ್ಬರ ವಿರುದ್ಧ ಚೌಕ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಚುನಾವಣಾ ಕರ್ತವ್ಯಕ್ಕೆ ನಿಯೋಜಿತರಾಗಿದ್ದ ರೋಜಾ ಪೊಲೀಸ್ ಠಾಣೆಯ ಪೇದೆ ಬಸವರಾಜ ಮಾಗಣಗೇರಿ ಅವರು ಈ ಸಂಬಂಧ ದೂರು ಸಲ್ಲಿಸಿದ್ದು, ತನಿಖೆ ನಡೆದಿದೆ.