ಸ್ಟ್ರಾಂಗ್‍ರೂಮ್‍ನಲ್ಲಿ ಭದ್ರವಾದ ಅಭ್ಯರ್ಥಿಗಳ ಹಣೆಬರಹ
ಬೀದರ್: ಮೇ.9:ಕರ್ನಾಟಕದಲ್ಲಿ ಎರಡನೇ ಹಂತದ ಲೋಕಸಭೆ ಚುನಾವಣೆ ನಡೆದಿದ್ದು, ಕಲ್ಯಾಣ ಹಾಗೂ ಕಿತ್ತೂರು ಕರ್ನಟಕದ ಒಟ್ಟು 14 ಲೋಕಸಭೆ ಕ್ಷೇತ್ರಗಳ ಮತದಾನ ಮೊನ್ನೆಯಷ್ಟೆ ಮುಕ್ತಾಯವಾಗಿದೆ.
ಗಡಿ ಜಿಲ್ಲೆ ಬೀದರ್‍ನಲ್ಲೂ ಶೇಕಡಾ 67 ಪ್ರತಿಶತ ಶಾಂತಿಯುತವಾಗಿ ಮತದಾನವಾಗಿದ್ದು, 2024 ಮತದಾನ ಕೇಂದ್ರಗಳಲ್ಲಿ ಜರುಗಿದ ಮತಯಂತ್ರಗಳು ನಗರದ ಬಿ.ವಿ.ಭೂಮರೆಡ್ಡಿ ಮಹಾವಿದ್ಯಾಲಯದಲ್ಲಿ ಎಂದಿನಂತೆ ಸ್ಟ್ರಾಂಗ್ ರೂಮ್‍ನಲ್ಲಿ ಭದ್ರವಾಗಿವೆ.
ಜೂನ್ 4ರಂದು ಮತ ಎಣಿಕೆ ನಡೆಯಲಿದ್ದು, ಅಲ್ಲಿಯ ವರೆಗೆ ಮತಯಂತ್ರಗಳು ಸ್ಟ್ರಾಂಗ್ ರೂಮ್‍ನಲ್ಲಿ ಭದ್ರವಾಗಿರಲಿವೆ. ಅದಕ್ಕೆ ಅರೆಸೇನಾಪಡೆ ಸಿಬ್ಬಂದಿಗಳನ್ನು ಕಾವಲಿಗಾಗಿ ನಿಯೋಜಿಸಲಾಗಿದೆ.
ಇದು ಒಂದೆಡೆಯಾದರೆ ಚುನಾವಣೆಯಲ್ಲಿ ಯಾರು ಗೆಲ್ಲುವರು? ಎಂಬ ಬಗ್ಗೆ ಚರ್ಚೆ ಜೋರಾಗಿಯೇ ನಡೆದಿದೆ. ಕೆಲವರು ತಮ್ಮ ರೆಗಡಿ ಜಮಿನು ಅಡವಿಟ್ಟು ಸಟ್ಟಾಬಾಜಿ ನಡೆಸುತ್ತಿದ್ದರೆ ಇನ್ನು ಕೆಲವರು ಹಣ, ಆಕಲೂ, ಎಮ್ಮೆ, ಸಾಕು ನಾಯಿ, ಒಡವೆ ಇತ್ಯಾದಿ ಬೆಟ್ಟಿಗೆ ಹಚ್ಚುತ್ತಿದ್ದಾರೆ. ಈ ಎಲ್ಲ ಅಂತೆ ಕಂತೆಗಳಿಗೆ ಜುನ್ 4ರ ವರೆಗೆ ಕಾಯಿಲೇ ಬೇಕಾಗುತ್ತದೆ.
ಇತ್ತ ಕಾಂಗ್ರೆಸ್ ಹಾಗೂ ಬಿಜೆಪಿ ಅಭ್ಯರ್ಥಿಗಳು ರಿಲ್ಯಾಕ್ಷ ಮೂಡಿಗೆ ಜಾರಿದರೂ ಒಳಗೊಳಗೆ ಡವಡವ ಅನ್ನುತ್ತಿರುತ್ತದೆ.
ಒಟ್ಟಾರೆ ಎಂದಿನಂತೆ ಬಿ.ವಿ. ಭೂಮರೆಡ್ಡಿ ಮಹಾವಿದ್ಯಾಲಯದಲ್ಲಿ ಜಿಲ್ಲೆಯ ಉಮೆದುವಾರರ ಹಣೆಬರಹ ಭದ್ರವಾಗಿದ್ದು, ಫಲಿತಾಂಶದ ವರೆಗೆ ಅವನ್ನು ಜೋಪಾನವಾಗಿ ಕಾಯೊದು ಜಿಲ್ಲಾಡಳಿತ ಜವಾಬ್ದಾರಿಯಾಗಿದೆ