ನಾಳೆ ನಗರದಲ್ಲಿ ಹೇಮರೆಡ್ಡಿ ಮಲ್ಲಮ್ಮಬಸವಣ್ಣನ ಭಾವಚಿತ್ರದ ಮೆರವಣಿಗೆ
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಮೇ,9- ಮಹಸಾದ್ವಿ, ಶಿವಶರಣೆ  ಹೇಮರಡ್ಡಿ ಮಲ್ಲಮ್ಮ, ಕ್ರಾಂತಿಯೋಗಿ, ವಿಶ್ವಗುರು ಬಸವಣ್ಣನವರ ಜಯಂತಿ ಅಂಗವಾಗಿ ಮಲ್ಲಮ್ಮ ಮತ್ತು ಬಸವಣ್ಣನ ಭಾವಚಿತ್ರದ ಮೆರವಣಿಗೆ ನಾಳೆ ಮೇ 10 ಸಂಜೆ 5 ಗಂಟೆಗೆ  ನಗರದಲ್ಲಿ ವೀರಶೈವ ಲಿಂಗಾಯತ ಸಮಾಜದಿಂದ ಹಮ್ಮಿಕೊಂಡಿದೆ
ನಗರದ ದುರ್ಗಮ್ಮ ದೇವಸ್ಥಾನದ ಆವರಣದಿಂದ  ಬಸವೇಶ್ವರ ನಗರದ ಬಸವದಳದ ಸಭಾಂಗಣದವರೆಗೆ ಜನಪದ ಕಲಾ ತಂಡ ಕಳಸಗಳೊಂದಿಗೆ  ಮೆರವಣಿಗೆ ಸಾಗಲಿದೆ. 
ಸಮಾಜದ ಜನತೆ ಇದರಲ್ಲಿ ಪಾಲ್ಗೊಳ್ಳಬೇಕೆಂದು ವೀರಶೈವ ಲಿಂಗಾಯತ ರೆಡ್ಡಿ ಸಮಾಜದ ಗಣ್ಯರು ಕೋರಿದ್ದಾರೆ.