ರಾಜ್ಯದಲ್ಲಿ ಮೂರು ದಿನ ಮಳೆ
ಬೆಂಗಳೂರು,ಮೇ.೯- ಮುಂದಿನ ಮೂರು ದಿನಗಳ ಕಾಲ ರಾಜ್ಯಾದ್ಯಂತ ಮಳೆ ಮುಂದುವರೆಯಲಿದೆ ಎಂದು ರಾಜ್ಯ ಹವಾಮಾನ ಇಲಾಖೆ ಮಾಹಿತಿ ನೀಡಿದೆ. ಮೇ ೧೨ರ ನಂತರ ರಾಜ್ಯದ ಬಹುತೇಕ ಎಲ್ಲ ಜಿಲ್ಲೆಗಳಲ್ಲಿ ಮಳೆಯಾಗುವ ಸಾಧ್ಯತೆ ಇದೆ.
ಬೆಂಗಳೂರು ಇಂದು ಮತ್ತು ನಾಳೆ ಗುಡುಗು ಸಹಿತ ಮಳೆಗೆ ಸಾಕ್ಷಿಯಾಗಲಿದೆ, ಹೆಚ್ಚಾಗಿ ಸಂಜೆ ಅಥವಾ ರಾತ್ರಿಯಲ್ಲಿ ಮಳೆ ಸುರಿಯುವ ಮುನ್ಸೂಚನೆ ಇದೆ.
೩೦-೪೦ ಕಿ.ಮೀ ವೇಗದಲ್ಲಿ ಮಳೆಯಾಗುತ್ತದೆ.ಮೀ ವೇಗದಲ್ಲಿ ಗಾಳಿ ಬೀಸಲಿದೆ. ಮುಂದಿನ ಎರಡು ದಿನಗಳಲ್ಲಿ ಗರಿಷ್ಠ ಮತ್ತು ಕನಿಷ್ಠ ತಾಪಮಾನವು ಕ್ರಮವಾಗಿ ೩೪ ಮತ್ತು ೨೧ ಡಿಗ್ರಿ ಸೆಲ್ಸಿಯಸ್ ಆಗಿರುತ್ತದೆ.
ಬುಧವಾರವೂ ಐಎಂಡಿ ಹಳದಿ ಎಚ್ಚರಿಕೆ ನೀಡಿದ್ದು, ನಗರದ ಹಲವೆಡೆ ಸಂಜೆ ಭಾರಿ ಮಳೆಯಾಗಿದೆ.
ರಾತ್ರಿ ೮.೩೦ ಕ್ಕೆ ಇಲಾಖೆ ದಾಖಲಿಸಿದ ಮಾಹಿತಿಯ ಪ್ರಕಾರ, ಬೆಂಗಳೂರು ನಗರ ವೀಕ್ಷಣಾಲಯ ಮತ್ತು ಎಚ್‌ಎಎಲ್ ವಿಮಾನ ನಿಲ್ದಾಣದಲ್ಲಿ ಕ್ರಮವಾಗಿ ೧೭.೯೯ ಎಂಎಂ ಮತ್ತು ೫.೨ ಎಂಎಂ ಮಳೆಯಾಗಿದೆ.
ನಿನ್ನೆ ಬೆಂಗಳೂರಿನಲ್ಲಿ ಧಾರಾಕಾರ ಮಳೆ ಸುರಿದಿದೆ. ಇದರಿಂದ ವಾಹನ ಸವಾರರು ಪರದಾಡಿದರು. ಬೆಂಗಳೂರಿನಲ್ಲಿ ಸಂಜೆ ಸುರಿದ ಭಾರಿ ಮಳೆಗೆ ಪಾಟರಿ ಟೌನ್ ಬಳಿಯ ಮೆಟ್ರೋ ಕಾಮಗಾರಿ ಸ್ಥಳದಲ್ಲಿ ೧೨ ಅಡಿ ಆಳದ ರಸ್ತೆ ಕುಸಿದಿದೆ. ಸುರಂಗ ಮಾರ್ಗದಲ್ಲಿ ಮೆಟ್ರೋ ನಿಲ್ದಾಣ ನಿರ್ಮಾಣ ಹಂತದಲ್ಲಿತ್ತು. ಕಾಮಗಾರಿ ಸ್ಥಳದ ಪಕ್ಕದಲ್ಲೇ ರಸ್ತೆ ಭೂಕುಸಿತವಾಗಿದೆ. ಇದರಿಂದ ಕಾಮಗಾರಿ ನಡೆಯುತ್ತಿರುವ ಸುತ್ತಮುತ್ತಲಿನ ನಿವಾಸಿಗಳಲ್ಲಿ ಆತಂಕ ಹೆಚ್ಚಿದೆ. ವಿಷಯ ತಿಳಿದ ಕೂಡಲೇ ಹಿರಿಯ ಮೆಟ್ರೋ ಅಧಿಕಾರಿಗಳು ಸ್ಥಳಕ್ಕೆ ಧಾವಿಸಿದ್ದಾರೆ. ಕೋಲಾರ ಜಿಲ್ಲೆಯ ಹಲವೆಡೆ ಗುಡುಗು ಸಹಿತ ಮಳೆಯಾಗಿದೆ.