ಮತದಾರರ ಚಿತ್ತ ಅಭ್ಯರ್ಥಿಗಳ ಫಲಿತಾಂಶದತ್ತ..!

ಜಗಳೂರು.ಮೇ.೯ :ಇಷ್ಟು ದಿನ ಕಾಂಗ್ರೆಸ್ ಮತ್ತು ಬಿಜೆಪಿ ಪಕ್ಷೇತರ  ಪಕ್ಷದ ಅಭ್ಯರ್ಥಿಗಳು  ಚುನಾವಣಾ ಪ್ರಚಾರದಲ್ಲಿ ತೊಡಗಿದ್ದರು.ಇದೀಗ ಮತದಾನ ಮುಗಿದಿದ್ದು ಫಲಿತಾಂಶ ಹೊರಬರುವುದು ಮಾತ್ರ ಬಾಕಿ ಉಳಿದಿದೆ.ಮುಂದಿನ ತಿಂಗಳು ಜೂನ್ 4 ರವರೆಗೆ ಮತದಾರರು ರಾಜಕೀಯ ಪಕ್ಷಗಳ ಮುಖಂಡರು ಮತ್ತು ಕಾರ್ಯಕರ್ತರು ಕಾತುರದಿಂದ ನಮ್ಮ ಪಕ್ಷದ ಅಭ್ಯರ್ಥಿ ಗೆಲ್ಲುತ್ತಾರೆ ನಿಮ್ಮ ಪಕ್ಷದ ಅಭ್ಯರ್ಥಿ ಸೋಲುತ್ತಾರೆ ಎಷ್ಟು ಮತಗಳ ಅಂತರ ದಲ್ಲಿ ಗೆಲ್ಲುತ್ತಾರೆ ಎಂದು ಹೋಟೆಲ್ ಸಾರ್ವಜನಿಕ ಸ್ಥಳಗಳಲ್ಲಿ, ಕಟಿಂಗ್ ಶಾಪ್, ಗ್ರಾಮೀಣ ಭಾಗದ ಅರಳಿಕಟ್ಟೆಗಳಲ್ಲಿ ಬಿಸಿ ಬಿಸಿ ಚರ್ಚೆ ಮಾತನಾಡುವುದು ಸರ್ವೇ ಸಾಮಾನ್ಯವಾಗಿದೆ.ಇದೆಲ್ಲದರ ನಡುವೆಯು ಮತದಾರ ಪ್ರಭುಗಳು ಯಾವ ಪಕ್ಷದ ಅಭ್ಯರ್ಥಿಗಳ ಕಡೆ ಒಲವು ತೋರಿದ್ದಾರೆ ಎಂಬು ವುದು ಕಾದು ನೋಡುವ ಬಹುದೊಡ್ಡ ಯಕ್ಷ ಪ್ರಶ್ನೆಯಾ ಗಿಯೇ ಮತದಾರರಿಗೆ ಉಳಿದುಬಿಟ್ಟಿದೆ..!ದಾವಣಗೆರೆ ಲೋಕಸಭಾ ಕ್ಷೇತ್ರದಲ್ಲಿ ರಾಷ್ಟ್ರೀಯ ಪಕ್ಷಗಳ ಮತ್ತು ಪಕ್ಷೇತರ ಅಭ್ಯರ್ಥಿಗಳ ಜಿದ್ದಾಜಿದ್ದಿನ ರಾಜಕೀಯ ಭವಿಷ್ಯ ಇನ್ನೇನು ದಿನಗಣನೆ ಅಂದರೆ  ಮುಂದಿನ ತಿಂಗಳು ಜೂನ್ 4 ರಂದು ಬೆಳಿಗ್ಗೆ 8 ಗಂಟೆಯಿಂದ ತೋಳ ಹುಣಿಸೆ ದಾವಣಗೆರೆ ವಿಶ್ವವಿದ್ಯಾನಿಲಯ ಶಿವಗಂಗೋತ್ರಿ ಯಲ್ಲಿ ನಡೆಯಲಿರುವ ಮತ ಎಣಿಕೆ ಫಲಿತಾಂಶದ ಕಡೆಗೆ ಅಭ್ಯರ್ಥಿಗಳ ಕುತೂಹಲ ಮತ್ತು ಎದೆಯಲ್ಲಿ ನೋಡಕ ಶುರುವಾಗಿದೆ ಇದೆಲ್ಲದಕ್ಕೂ ಶೀಘ್ರವೇ ಉತ್ತರ ದೊರೆಯಲಿದೆ.