ಮೇಲ್ಪಂತಿಯ ನಾಯಕನೊಟ್ಟಿಗೆ ಒಡಾಡಿದ್ದೇ ನನ್ನ ಭಾಗ್ಯ
ಸಂಜೆವಾಣಿ ನ್ಯೂಸ್
ಮೈಸೂರು: ಮೇ.09:- ಕೆಲವೇ ಕೆಲವರನ್ನು ಮಾತ್ರ ನಾವು ಆದರ್ಶವಾಗಿ ಇರಿಸಿಕೊಳ್ಳಬೇಕೆಂದು ಹೇಳುತ್ತೇವೆ. ಅಂತಹ ಆದರ್ಶವಾಗಿರಿಸಿಕೊಳ್ಳಬಲ್ಲ ಮೇಲ್ಪಂತಿಯ ನಾಯಕನೊಟ್ಟಿಗೆ ಒಡಾಡ್ಡಿದ್ದೇ ನನ್ನ ಭಾಗ್ಯ ಎಂದು ಮಾಜಿ ಸಚಿವ ಸುರೇಶ್ ಕುಮಾರ್ ವಿ.ಶ್ರೀನಿವಾಸ್ ಪ್ರಸಾದ್ ಅವರೊಟ್ಟಿಗಿನ ಒಡನಾಟ ನೆನೆದರು.
ಮೈಸೂರಿನ ಬಿಜೆಪಿ ಕೃಷ್ಣರಾಜ ವಿಧಾನ ಸಭಾ ಕ್ಷೇತ್ರದಿಂದ ಚಾಮುಂಡಿ ಪುರಂನ ಆರಾಧ್ಯ ಮಹಾಸಭಾದಲ್ಲಿ ಆಯೋಜಿಸಿದ್ದ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಅವರ ಶ್ರದ್ಧಾಂಜಲಿ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. ಕಂದಾಯ ಸಚಿವರಾಗಿದ್ದರೂ ಮಡೆಸ್ನಾನದಂತಹ ವಿಚಾರ ಬಂದಾಗ ಸೂಕ್ಷ್ಮತೆಯ ಅಭಿಪ್ರಾಯ ವ್ಯಕ್ತಪಡಿಸಿದರು. ಅನಂತರ ನಂಜನಗೂಡು ಉಪಚುನಾವಣೆಯಲ್ಲಿ ಅವರ ಪರವಾಗಿ ಒಡಾಡಿದರೂ ಸೋಲು ಕಂಡರು ಬಳಿಕ ಸಂಸದರಾದರು. ಆಗ ನಾನು ಚಾಮರಾಜನಗರ ಸಚಿವರಾಗಿ ಅವರೊಟ್ಟಿಗೆ ನಡೆಸಿದ ಸಾಕಷ್ಟು ಸಭೆಗಳೇ ನನ್ನ ಭಾಗ್ಯವಾದವು. ಶೌಚಾಲಯ, ಕುಡಿಯುವ ನೀರಿಗೂ ಅನುದಾನ ನೀಡಿದ್ದರು. ನಿರಂತರ ಸಭೆಗಳನ್ನು ನಡೆಸುವಲ್ಲಿ ಯಶಸ್ವಿಯಾದರು. ಇಂತಹ ಮೇಲ್ಪಂತಿಯ ನಾಯಕರ ನಾಯಕರೊಟ್ಟಿಗೆ ಒಡಾಡಿದ್ದೇ ನಮ್ಮೆಲ್ಲರ ಭಾಗ್ಯ. ಅವರನ್ನು ನೆನೆಯುವ ಅವಕಾಶ ಸದಾ ಅವರ ದಾರಿಯಲ್ಲಿ ಸಾಗುವ ಮೂಲಕ ಮಾಡೋಣ. ಎಂದು ಹೇಳಿದರು.
ಮಾಜಿ ಸಚಿವ ಛಲವಾದಿ ನಾರಾಯಣ ಸ್ವಾಮಿ ಮಾತನಾಡಿ, ದಲಿತರಾದರೂ ವಿ.ಶ್ರೀನಿವಾಸ್ ಪ್ರಸಾದ್ ಸಾಮಾಜಿಕ ನ್ಯಾಯದ ನಾಯಕರಾಗಿದ್ದರು. ಕೇವಲ ಒಂದು ಸಮುದಾಯಕ್ಕೆ ಸೀಮಿತರಾಗಿರಲಿಲ್ಲ. ಎಲ್ಲರಿಗೂ ಬೇಕಾದವರಾಗಿದ್ದರು. ನಾನು ನಲವತ್ತು ವರ್ಷ ಕಾಲ ಕಾಂಗ್ರೆಸ್ ನಲ್ಲಿದ್ದೇನು. ಹಿಂದೆ ಸಿಎಂ ಸಿದ್ದರಾಮಯ್ಯ ರಾತ್ರೋರಾತ್ರಿ ನಿರ್ದಾಕ್ಷಿಣ್ಯವಾಗಿ ವಿ.ಶ್ರೀನಿವಾಸ್ ಪ್ರಸಾದ್ ಹಾಗೂ ಅಂಬರೀಶ್ ಅವರನ್ನು ತೆಗೆದರು. ಆಗ ಅವರನ್ನು ತೆಗೆದಿದ್ದು ಸರಿಯಲ್ಲ ಎಂದು ಹೇಳಿಕೆ ನೀಡಿದೆ. ಅದಾದ ಬಳಿಕ ನಾನಿದ್ದ ಕ್ಷೇತ್ರದಿಂದಲೇ ವಿರೋಧ ವ್ಯಕ್ತವಾಯಿತು. ಅಂದಿನಿಂದ ಬರುತ್ತಿದ್ದ ಟಿಕೇಟ್ ತಪ್ಪಿತ್ತು. ಅಂದು ಗೌರವದಿಂದ ನಿರ್ಗಮಿಸಲು ಅವಕಾಶ ಕೊಟ್ಟಿದ್ದರೆ ಅವರು ಕಾಂಗ್ರೆಸ್ ಬಿಡುವ ಸನ್ನಿವೇಶವೇ ಬರುತ್ತಿರಲಿಲ್ಲ. ಸಿಎಂ ಸಿದ್ದರಾಮಯ್ಯ ಈಗ ಆರೋಗ್ಯ ವಿಚಾರಿಸಲು ಹೋಗುವ ಬದಲು ನಮ್ಮನ್ನು ಬೆಂಬಲಿಸಿ ಎಂದು ಕೇಳಿದ್ದು ನನಗೆ ಮತ್ತಷ್ಟು ಕೋಪ ತರಿಸಿತು. ಯಾರು ಬೇಕಾದರೂ ಅವರ ಸ್ಮರಣೆ ಕಾರ್ಯಕ್ರಮ ಮಾಡಬಹುದು. ಆದರೆ ಅವರಿಗೆ ಆದ ಅನ್ಯಾಯಯವನ್ನು ನಾನು ಸೇರಿ ಅವರ ಅಭಿಮಾನಿಗಳು ಯಾರು ಸಹ ಮರೆಯಲ್ಲ ಎಂದರು.
ಬಿಜೆಪಿ ಅಭ್ಯರ್ಥಿ ಯಧುವೀರಕೃಷ್ಣದತ್ತ ಚಾಮರಾಜ ಒಡೆಯರ್, ಶಾಸಕ ಶ್ರೀವತ್ಸ, ಬಿಜೆಪಿ ನಗರಾಧ್ಯಕ್ಷ ಎಲ್.ನಾಗೇಂದ್ರ, ಮಾಜಿ ಶಾಸಕರಾದ ಹರ್ಷವರ್ಧನ, ಎನ್.ಮಹೇಶ್, ಮಾಜಿ ಎಂಎಲ್ ಸಿ ತೋಂಟದಾರ್ಯ, ರಾಜ್ಯ ಬಿಜೆಪಿ ಉಪಾಧ್ಯಕ್ಷ ರಾಜೇಂದ್ರ, ಕೆ.ಆರ್. ಕ್ಷೇತ್ರದ ಬಿಜೆಪಿ ಅಧ್ಯಕ್ಷ ಗೋಪಾಲರಾಜ ಅರಸ್, ಸಂಘಟನಾ ಕಾರ್ಯದರ್ಶಿ ರಾಜೇಶ್ ಇನ್ನಿತರರು ಉಪಸ್ಥಿತರಿದ್ದರು.