ಬಸವ ಜಯಂತಿ ಕಾರ್ಯಕ್ರಮ
ಬಾಗಲಕೋಟೆ, ಮೇ8: ಬಿವಿವಿ ಸಂಘ, ಅಖಿಲ ಭಾರತ ವೀರ ಶೈವ ಲಿಂಗಾಯತ ಮಹಸಭಾ, ಅಕ್ಕನ ಬಳಗ, ಶಿವಾನುಭವ ಸಮಿತಿ, ಶರಣ ಸಾಹಿತ್ಯ ಪರಿಷತ್ ಸಹಯೋಗದಲ್ಲಿ ಮೇ 10 ರಂದು ವಿಶ್ವ ಗುರು ಬಸವ ಜಯಂತಿ ಕಾರ್ಯಕ್ರಮ ಬಾಗಲಕೋಟೆ ನಗರದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಬಿವಿವಿ ಸಂಘದ ಕಾರ್ಯಾಧ್ಯಕ್ಷ, ಮಾಜಿ ಶಾಸಕ ವೀರಣ್ಣ ಚರಂತಿಮಠ ಹೇಳಿದರು.
ನಗರದ ಬಿವಿವಿ ಸಂಘದ ಮಿನಿ ಸಭಾಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತ ನಾಡಿದ ಅವರು, ಅಂದು ಬಿವಿವಿ ಸಂಘದ ಬೀಳೂರು ಗುರುಬಸವ ಮಂದಿರದಿಂದ ಬೃಹತ್ ಮರವಣಿಗೆ ಆರಂಭ ವಾಗಿ ಟೀಕಿನಮಠ, ಅಡತ್ ಬಜಾರ್, ವಲ್ಲಭಬಾಯಿ ಚೌಕ್, ಪೆÇಲೀಸ್ ಚೌಕ್, ಎಂ.ಜಿ. ರಸ್ತೆ, ಬಸವೇಶ್ವರ ವೃತ್ತ, ಕಾಲೇ ಜು ರಸ್ತೆ ಮೂಲಕ ಚರಂತಿಮಠ ಶಿವಾನುಭವ ಮಂಟಪ ತಲುಪಿ ಮರವಣಿಗೆ ಸಮಾಪ್ತಿಯಾ ಗಲಿದೆ ಎಂದರು.
ಮರವಣಿಗೆಯಲ್ಲಿ ಟೀಕಿ£ Àಮಠದ ಮಲ್ಲಿ ಕಾರ್ಜುನ ಶ್ರೀ ಗಳು, ಬಿಲ್‍ಕೆರೂರ ಸಿದ್ದಲಿಂಗ ಶಿವಾ ಚಾರ್ಯ ಸ್ವಾಮೀಜಿ, ಚರಂತಿಮಠದ ಪ್ರಭು ಸ್ವಾಮೀ ಜಿ ಸೇರಿದಂತೆ ಅನೇಕ ಮಠಾ ಧೀಶರು, ಸಮಾಜದ ಮುಖಂ ಡರು ಭಾಗವಹಿಸಲಿ ದ್ದಾರೆ. ಪ್ರತಿ ವರ್ಷದಂತೆ ಈ ವರ್ಷವು ಬಸವ ಜಯಂತಿ ಯಂದು ಅದ್ಧೂರಿ ಮೆರವಣಿಗೆ ನಡೆಯ ಲಿದ್ದು, ಎತ್ತಿನ ಬಂಡಿಗಳು, ವಾದ್ಯ ವೃಂಧ ಭಾಗವಹಿಸಲಿವೆ. ಎಲ್ಲ ಸಮಾಜದ ಜನರು ಉತ್ಸಾಹ ಪಾಲ್ಗೊಳ್ಳಬೇಕು ಎಂದು ಮನವಿ ಮಾಡಿದರು.
ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾಧ್ಯಕ್ಷ ಜಿ.ಎನ್.ಪಾಟೀಲ, ಬಸವರಾಜ ಮುಕ್ಕುಪ್ಪಿ, ಚಂದ್ರಶೇಖರ ಶೆಟ್ಟರ ಇದ್ದರು.