ಚಾನಾಳ್ ವೀರಭದ್ರೇಶ್ವರ  ದೇವಸ್ಥಾನಕ್ಕೆ ಸಮಾಳದ ದೇಣಿಗೆ
(ಸಂಜೆವಾಣಿ ವಾರ್ತೆ)
ಬಳ್ಳಾರಿ:ಮೇ,9- ಸ್ವತಃ ಸಮಾಳ ವಾದಕರೂ ಆಗಿರುವ ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾ ಅಧ್ಯಕ್ಷ ಟಿ.ಹೆಚ್.ಎಂ.ಬಸವರಾಜ್ ಅವರು. ತಾಲೂಕಿನ ಚಾನಾಳ್ ಗ್ರಾಮದ ವೀರಭದ್ರೇಶ್ವರ ದೇವಸ್ಥಾನಕ್ಕೆ ನೂತನ ಸಮಾಳ ವಾಧ್ಯವನ್ನು ಸಮರ್ಪಣೆ ಮಾಡಿದ್ದಾರೆ.
ಗ್ರಾಮದ ಚಾನಾಳ್ ಮಲ್ಲಿಕಾರ್ಜುನ ಮತ್ತು ಪಲ್ಲವಿ ಅವರು ಬಸವರಾಜ್  ಅವರಿಂದ ಸಮಾಳವಾಧ್ಯವನ್ನು ದೇವಸ್ಥಾನದ ಪರವಾಗಿ ಸ್ವೀಕರಿಸಿದ್ದಾರೆ.