ಮಾವು ಬೆಳೆ ನಷ್ಟ ಪರಿಹಾರಕ್ಕೆ ರೈತರ ಆಗ್ರಹ
ಕೆಜಿಎಫ್, ಮೇ ೯- ಬೇಸಿಗೆಯ ತಾಪಕ್ಕೆ ಮಾವಿನ ಫಸಲು ಶೇ:೩೦ರಷ್ಟು ಬಂದಿದ್ದು ನಷ್ಟಕ್ಕೆ ಒಳಗಾಗಿರುವ ಮಾವು ಬೆಳೆಗಾರರಿಗೆ ಏಕರೆಗೆ ಕನಿಷ್ಟ ೩೦ ಸಾವಿರ ರೂಗಳನ್ನು ಸರ್ಕಾರ ನೀಡಬೇಕು ಎಂದು ಒತ್ತಾಯಿಸಿ ಕೆಜಿಎಫ್ ತಾಲ್ಲೂಕು ಮಾವು ಬೆಳೆಗಾರರ ಕ್ಷೇಮಾಭಿವೃದ್ಧಿ ಸಂಘದ ಪದಾಧಿಕಾರಿಗಳು ತಹಶೀಲ್ದಾರ್ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಈ ವೇಳೆ ಮಾತನಾಡಿದ ಮಾವು ಬೆಳೆಗಾರರಾದ ಅಭಿಲಾಶರೆಡ್ಡಿ, ಕೋಲಾರ ಜಿಲ್ಲೆಯು ಹಾಲು ಹಾಗೂ ಮಾವು ಬೆಳೆಗೆ ಖ್ಯಾತಿಯನ್ನು ಗಳಿಸಿದೆ ಮತ್ತು ಹಾಲು ಮಾವಿನ ಕೃಷಿ ಮೇಲೆ ಲಕ್ಷಾಂತರ ರೈತ ಕುಟುಂಭಗಳು ಅವಲಂಭಿತರಾಗಿದ್ದಾರೆ.ಆದರೆ ಈ ವರ್ಷ ಮಳೆ ಕೈಕೊಟ್ಟಿದ್ದು ಬೀಡು ಬೇಸಿಗೆಯ ತಾಪಮಾನದಿಂದ ಜನವರಿಯಲ್ಲಿ ಬರಬೇಕಾದ ಹೂವುಗಳು ಫೆಭ್ರವರಿ ಕೊನೆಯಲ್ಲಿ ಬಂದಿದ್ದರಿಂದ ಮರದಲ್ಲಿ ಸರಿಯಾಗಿ ಹೂವು ಬರಲಿಲ್ಲ.ಕಾಯಿ ಸಹ ಬರಲಿಲ್ಲ ಕೆಜಿಎಫ್ ತಾಲ್ಲೂಕಿನಲ್ಲಿ ಸರಿಸುಮಾರು ೬೦೦೦ ಸಾವಿರ ಎಕ್ಟರ್ ಪ್ರದೇಶದಲ್ಲಿ ಮಾವು ಬೆಳೆಯನ್ನು ಬೆಳೆಯುತ್ತಿದ್ದು ಮಾವು ಬೆಳೆಯನ್ನೇ ನಂಬಿ ಸರಿಸುಮಾರು ೩ ಸಾವಿರ ಕುಟುಂಭಗಳು ಅವಲಂಭಿತರಾಗಿದ್ದಾರೆ ಮಾವು ಬೆಳೆಯನ್ನೇ ನಂಬಿದ ರೈತರು ಬ್ಯಾಂಕ್ ಸಾಲ ಕೈ ಸಾಲವನ್ನು ಮಾಡಿದ್ದು ಸರಿಯಾದ ಬೆಳೆ ಕೈಗೆ ಬರದಿರುವುದರಿಂದ ಮುಂದೆ ಏನು ಮಾಡುವುದು ಎಂದು ಆತಂಕಕ್ಕೆ ಒಳಗಾಗಿದ್ದು ತಕ್ಷಣ ಸರ್ಕಾರ ನಷ್ಟಕ್ಕೆ ಒಳಗಾಗಿರುವ ಮಾವು ಬೆಳೆಗಾರರ ಕುಟುಂಭಗಳ ರಕ್ಷಣೆ ನೀಡುವ ನಿಟ್ಟಿನಲ್ಲಿ ಪ್ರತಿ ಏಕ್ಟರ್‌ಗೆ ೩೦ ಸಾವಿರ ಪರಿಹಾರವನ್ನು ನೀಡುವಂತೆ ಒತ್ತಾಯಿಸಿದರು .
ರೈತ ಮುಖಂಡ ಅರುಣ್ ಮಾತನಾಡಿ ಪ್ರತಿ ವರ್ಷ ಉತ್ತಮವಾದ ಮಾವು ಬೆಳೆ ಲಭಿಸುತ್ತಿತ್ತು. ಆದರೆ ಈ ವರ್ಷ ಮಳೆ ಕೈಕೊಟ್ಟಿದ್ದರಿಂದ ಮರದಲ್ಲಿ ಸರಿಯಾಗಿ ಹೂವು ಬರಲಿಲ್ಲ ಕಾಯಿ ಇಲ್ಲದಂತೆ ಆಗಿ ಬೆಳೆ ನಷ್ಟವಾಗಿದೆ ನಾವು ಮಾವು ನಂಬಿ ಸಾಲವನ್ನು ಮಾಡಿಕೊಂಡಿದ್ದು ಸಾಲ ತೀರಿಸಲು ಸಾಧ್ಯವಾಗದ ಪರಿಸ್ಥಿತಿಯಲ್ಲಿ ಇದ್ದು ಸರ್ಕಾರ ಮಾವು ಬೆಳೆಗಾರರ ಸಂಕಷ್ಟಕ್ಕೆ ಬರಬೇಕು ಎಂದು ಆಗ್ರಹಪಡಿಸಿ ನಮ್ಮ ಬೇಡಿಕೆಗಳನ್ನು ಈಡೇರಿಸಿದ್ದ ಪಕ್ಷದಲ್ಲಿ ಮುಂದಿನ ದಿನಗಳಲ್ಲಿ ಕೋಲಾರ ಜಿಲ್ಲಾಧಿಕಾರಿಗಳ ಕಚೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಹೇಳಿದರು.
ಪ್ರತಿಭಟನೆಯಲ್ಲಿ ಲಕ್ಷ್ಮಣರೆಡ್ಡಿ,ಸುಭ್ರಮಣಿರೆಡ್ಡಿ,ವೆಂಕಟರೆಡ್ಡಿ, ರಾಮಕೃಷ್ಣರೆಡ್ಡಿ ವರಲಕ್ಷ್ಮಿ,ಸುರೇಂದ್ರ, ವೆಂಕಟಪ್ಪ ಗೋಪಿ ಹಾಗೂ ಇತರರು ಹಾಜರಿದ್ದರು.