ಶ್ರೀ ಕನ್ಯಕಾಪರಮೇಶ್ಯರೀ ಕೋ-ಆಪರೇಟಿವ್ ಬ್ಯಾಂಕಿಗೆ ಮತ್ತೊಂದು ಗರಿ
ಸಂಜೆವಾಣಿ ನ್ಯೂಸ್
ಮೈಸೂರು: ಮೇ.09:- ಪೂಣೆಯ ವೇಸ್ಟೆನ್ ಹೋಟೆಲಿನಲ್ಲಿ ಇಂದು ನಡೆದ 8ನೇ ಆಲ್ ಇಂಡಿಯಾ ಅರ್ಬನ್ ಕೋಆಪರೇಟಿವ್ ಬ್ಯಾಂಕ್ಸ್ ಸಮಿಟ್-2024 ಕಾರ್ಯಕ್ರಮದಲ್ಲಿ ಮೈಸೂರಿನ ಪ್ರತಿಷ್ಠಿತ ಕೋ ಆಪರೇಟಿವ್ ಬ್ಯಾಂಕುಗಳಲ್ಲಿ ಒಂದಾದ ಶ್ರೀಕನ್ಯಕಾಪರಮೇಶ್ವರೀ ಕೋ ಆಪರೇಟಿವ್ ಬ್ಯಾಂಕಿಗೆ *ಬೆಸ್ಟ್ ಡೇಟಾ ಸೆಂಟರ್ ಇಂಪ್ಲಿಮೆಂಟೇಶನ್ ವಿಭಾಗದಲ್ಲಿ 8ನೇ ಆಲ್ ಇಂಡಿಯಾ ಅರ್ಬನ್ ಕೋ-ಆಪರೇಟಿವ್ ಬ್ಯಾಂಕಿಂಗ್ ಅರ್ವಾಡ್-2024 ಅನ್ನು ನ್ಯಾಷನಲ್ ಅರ್ಬನ್ ಕೋಆಪರೇಟಿವ್ ಫೈನಾನ್ಸ್ ಅಂಡ್ ಡೆವಲಪ್ಮೆಂಟ್ ಕಾಪೆರ್Çೀರೇಶನ್ ಲಿಮಿಟೆಡಿನ ಛೇರ್ಮನ್ ಶ್ರೀ ಜೊತೇಂದ್ರ ಮೆಹ್ತಾ ರವರು ನೀಡಿದರು.
ಅರ್ವಾಡ್ ಅನ್ನು ಬ್ಯಾಂಕಿನ ಪರವಾಗಿ ಅಧ್ಯಕ್ಷರಾದ ಶ್ರೀ ಎಚ್. ಎಂ. ಸಂದೀಪ್ ರವರು ಬ್ಯಾಂಕಿನ ವ್ಯವಸ್ಥಾಪನ ಮಂಡಳಿ ಛೇರ್ಮನ್ ಶ್ರೀ ಈ. ದಿಲೀಪ್ ಕುಮಾರ್ ನಿರ್ದೇಶಕರಾದ ಶ್ರೀ ಎಸ್ ಆರ್ ಸುನಿಲ್ ವೃತ್ತಿಪರ ನಿರ್ದೇಶಕರಾದ ಶ್ರೀ ಪಣಿದತ್ತ ಬ್ಯಾಂಕಿನ ಅಇಔ ಶ್ರೀ ವೈ. ಪಿ. ನರೇಶ್ ಹಾಗೂ ಐಟಿ ಅಡ್ಮಿನ್ ಶ್ರೀ ಲಕ್ಷ್ಮಿಕಾಂತ್ ರವರು ಪಡೆದುಕೊಂಡರು.
ಶ್ರೀ ಕನ್ಯಕಾಪರಮೇಶ್ವರಿ ಕೋ ಆಪರೇಟಿವ್ ಬ್ಯಾಂಕ್ ಮೈಸೂರಿನಲ್ಲಿ ತನ್ನದೇ ಆದ ಡೇಟಾ ಸೆಂಟರನ್ನು ಅನುಷ್ಠಾನಗೊಳಿಸಿರುವ ಮೈಸೂರು ಜಿಲ್ಲೆಯ ಏಕೈಕ ಕೋ ಆಪರೇಟಿವ್ ಬ್ಯಾಂಕ್ ಆಗಿದ್ದು ಐಟಿ ಹಾಗೂ ಅತ್ಯಾಧುನಿಕ ತಂತ್ರಜ್ಞಾನವನ್ನು ಕಾರ್ಯಗತಗೊಳಿಸುವಲ್ಲಿ ಸಂಪೂರ್ಣವಾಗಿ ಯಶಸ್ವಿಯಾಗಿರುತ್ತದೆ. ಇದಲ್ಲದೆ ಈ ಬ್ಯಾಂಕ್ ತನ್ನದೇ ಆದ ಡೆಟಾ ಡಿಸಾಸ್ಟರ್ ರಿಕವರಿ ಸೆಂಟರ್ ಸಹ ಅನುಷ್ಠಾನಗೊಳಿಸಿರುತ್ತದೆ. ಈ ರೀತಿಯಾಗಿ ಗ್ರಾಹಕರಿಗೆ ಡಿಜಿಟಲ್ ಹಾಗೂ ವಿನೂತನ ಸೇವೆಗಳನ್ನು ಒದಗಿಸುತ್ತಾ ಬಂದಿದ್ದು, ಬ್ಯಾಂಕಿಂಗ್ ಕ್ಷೇತ್ರದಲ್ಲಿ ಪ್ರವರ್ತಕರಾಗಿರುತ್ತಾರೆ.