ಕಾನೂನನ್ನ ತಿರುಚಿ ಜಮೀನು ಕಬಳಿಸಲು ಯತ್ನ
ಸಂಜೆವಾಣಿ ವಾರ್ತೆ
ಕೆ.ಆರ್.ಪೇಟೆ.ಮೇ.09: ಕಾನೂನನ್ನ ತಿರುಚಿ ಗಾಣಿಗ ಸಮುದಾಯದಕ್ಕೆ ಸೇರಿದ ಜಮೀನನ್ನು ಕಬಳಿಸಲು ವಕೀಲರಾದ ವಿ.ಎಸ್.ಧನಂಜಯಕುಮಾರ್ ಮತ್ತು ಸಹಚರರು ಹುನ್ನಾರ ನಡೆಸಿದ್ದಾರೆ ಎಂದು ಜಮೀನಿನ ವಾರಸುದಾರ ಕೆ.ಎಸ್.ರೇವಣ್ಣ ಪತ್ರಿಕಾ ಹೇಳಿಕೆ ನೀಡಿ ಆರೋಪಿಸಿದ್ದಾರೆ.
ಈ ಕುರಿತು ಪಟ್ಟಣದ ನಿವಾಸಿ ಕೆ.ಎಸ್.ರೇವಣ್ಣ ಮಾತನಾಡಿ ತಾಲ್ಲೋಕಿನ ಕಸಬಾ ಹೋಬಳಿಯ ಕೃಷ್ಣರಾಜಪೇಟೆ ಗ್ರಾಮದ ಜಮಾಬಂದಿಗೆ ಸೇರಿದ ಸರ್ವೆ ನಂ: 233/1ರಲ್ಲಿ ಒಟ್ಟು 0-26 ಗುಂಟೆ ಜಮೀನು ಮೂಲತಃ ಗಾಣಿಗರ ಸಮುದಾಯಕ್ಕೆ ಸೇರಿದ ಕಾಳಶೆಟ್ಟಿಯವರಿಗೆ ಸೇರಿದ್ದಾಗಿದ್ದು ಕಾಳಶೆಟ್ಟಿ ಮೃತರಾದ ನಂತರ ವಾರಸುದಾರರಾದ ಹೆಂಡತಿ ಕೆಂಪಮ್ಮ ಮಕ್ಕಳಾದ 1ನೇ ನಿಂಗಶೆಟ್ಟಿ 2ನೇ ಭೈರಶೆಟ್ಟಿ ಮತ್ತು 3ನೇ ಸಿದ್ದಶೆಟ್ಟಿ. ಇವರುಗಳಲ್ಲಿ 1ನೇ ನಿಂಗಶೆಟ್ಟಿ ಹಾಗೂ 2ನೇ ಭೈರಶೆಟ್ಟಿ ರವರುಗಳು ಮೃತರಾಗಿದ್ದು ಯಾರು ವಾರಸುದಾರರಿರುವುದಿಲ್ಲ. ಪ್ರಸ್ತುತ ಮೃತ ಸಿದ್ದಶೆಟ್ಟಿ ಮಕ್ಕಳಾದ ಕೆ.ಎಸ್.ಸೋಮಶೇಖರ್, ಕೆ.ಎಸ್.ಕೃಷ್ಣ, ಕೆ.ಎಸ್.ನಾಗರಾಜು ಮತ್ತು ಕೆ.ಎಸ್.ರೇವಣ್ಣ ರವರುಗಳು ಮೇಲ್ಕಂಡ ಸರ್ವೆನಂ: 233/1ರ 0-26 ಗುಂಟೆ ಜಮೀನಿನಲ್ಲಿ ಸ್ವಾಧೀನದಲ್ಲಿರುತ್ತಾರೆ. 0-26 ಗುಂಟೆ ಜಮೀನನ್ನು ಆರ್.ಟಿ.ಸಿ. ಮಾಡಿಸಿಕೊಂಡಿದ್ದ ಡಿ.ಎಸ್.ಬಸವರಾಜಸ್ವಾಮಿ ರವರ ವಿರುದ್ದ ಕೆ.ಎಸ್.ರೇವಣ್ಣ ಮತ್ತು ಸಹೋದರರು ಕೆ.ಆರ್.ಪೇಟೆ. ಸಿವಿಲ್ ನ್ಯಾಯಾಲಯದಲ್ಲಿ ಓ.ಎಸ್.ನಂ: 296/2009ರಲ್ಲಿ ದಾವೆಯನ್ನು ಸಲ್ಲಿಸಿದ್ದು ಸದರಿ ದಾವೆಯಲ್ಲಿ 24-04-1963ರ ಮ್ಯುಟೇಶನ್ ರಿಜಿಸ್ಟರ್ ರೀತ್ಯ ಕೆ.ಎಸ್.ರೇವಣ್ಣ ಮತ್ತು ಸಹೋದರರು ಮಾಲೀಕರೆಂದು, ಇವರುಗಳಿಗೆ ತೊಂದರೆ ಕಿರುಕುಳ ನೀಡದಂತೆ ಹಾಗೂ ತಹಸೀಲ್ದಾರವರು ಕೆ.ಎಸ್.ರೇವಣ್ಣ ಮತ್ತು ಸಹೋದರರಿಗೆ ಖಾತೆ ಮಾಡುವಂತೆ ಆದೇಶವಾಗಿರುತ್ತದೆ. 0-20 ಗುಂಟೆಯ ಮೇಲೆ ವೀರಶೈವ ಲಿಂಗಾಯಿತ ಮಹಾಸಭಕ್ಕೆ ಯಾವುದೇ ಮಾಲೀಕತ್ವ ಮತ್ತು ಸ್ವಾಧೀನವಿರುವುದಿಲ್ಲ. ರೇವಣ್ಣನ ಸಹೋದರರು ಓ.ಎಸ್. ನಂ:296/2009ರ ಆದೇಶದಂತೆ ಖಾತೆ ಮಾಡಲು ಕೋರಿ ಉಪ ವಿಭಾಗಾಧಿಕಾರಿಯವರ ಮುಂದೆ ಆರ್.ಮಿಸ್ ನಂ: 53/2021-2022ರಲ್ಲಿ ಮೇಲ್ಮನವಿಯನ್ನು ಸಲ್ಲಿಸಿದ್ದು ಇದೇ ವಕೀಲರಾದ ಧನಂಜಯಕುಮಾರ್ ರವರು ಮಾನ್ಯ ಉಪ-ವಿಭಾಗಾಧಿಕಾರಿಗಳಿಗೆ ಮತ್ತು ಸಿಬ್ಬಂದಿಗಳಿಗೆ ಕಾನೂನನ್ನ ತಿರುಚಿ ಹೇಳಿ ಹೆದರಿಸಿ ಬೆದರಿಸಿ ಪ್ರಕರಣವನ್ನು ವಜಾಮಾಡಿಸಿರುತ್ತಾರೆ. ತದನಂತರ, ಓ.ಎಸ್.ನಂ: 296/2009ರ ಆದೇಶದಲ್ಲಿ ತಹಸೀಲ್ದಾರ್ ರವರು ಖಾತೆ ಮಾಡುವಂತೆ ಆದೇಶವಿರುವುದನ್ನು ತಹಸೀಲ್ದಾರ್‍ರವರು ಮನಗಂಡು ಆರ್.ಆರ್.ಟಿ.ಸಿ.ಆರ್.1143/2023-2024ರಂತೆ ದಿನಾಂಕ:17-02-2024ರಂದು ಉಪವಿಭಾಗಾಧಿಕಾರಿ ಯವರ ನಿರ್ದೇಶನದಂತೆ ಕಾನೂನು ರೀತ್ಯ ಖಾತೆ ಮಾಡಿರುತ್ತಾರೆ. ಸದರಿ ಅಂಶವನ್ನು ಮುಚ್ಚಿಟ್ಟು ವಕೀಲ ವಿ.ಎಸ್.ಧನಂಜಯಕುಮಾರ್ ರವರು ಪತ್ರಿಕೆಗಳಿಗೆ ಸುಳ್ಳು ಮಾಹಿತಿ ನೀಡಿರುತ್ತಾರೆ.
ವಕೀಲರಾದ ವಿ.ಎಸ್. ಧನಂಜಯ ಕುಮಾರ್‍ರವರು ಅಖಿಲ ಭಾರತ ವೀರಶೈವ ಮಹಾಸಭಾದ ಅಧ್ಯಕ್ಷರಾಗಿದ್ದು, ಸಿದ್ದಲಿಂಗದೇವರು ಮತ್ತು ಅವರ ಕುಟುಂಬ ಸಾಂಬಮ್ಮ ಅಮ್ಮಯಮ್ಮರವರು ದಿನಾಂಕ; 07-12-1964ರಂದು 0-20 ಗುಂಟೆ ನಿವೇಶನವನ್ನು ಗವಿಮಠದ ನಿರಂಜನ ಚಂದ್ರಶೇಖರ ಸ್ವಾಮಿಗಳಿಗೆ ಸಮುದಾಯದ ಬಡ ಮಕ್ಕಳಿಗಾಗಿ ನಿಲಯ ನಿರ್ಮಾಣ ಹಾಗೂ ಸಭಾ ಭವನ ನಿರ್ಮಾಣಕ್ಕಾಗಿ ದಾನವಾಗಿ ಕೊಟ್ಟಿರುತ್ತಾರೆಂದು ಹೇಳಿಕೊಂಡಿರುತ್ತಾರೆ. ಮೂಲತಃ ಕಾಪನಹಳ್ಳಿ ಗವಿಮಠ ಟ್ರಸ್ಟ್ ರಿಜಿಸ್ಟರ್ ಆಗಿರುವುದಿಲ್ಲ. ಇದಲ್ಲದೆ ದಿನಾಂಕ: 12-03-2001 ರಂದು ಪ್ರಧಾನ ಕಾರ್ಯದರ್ಶಿ ಅಖಿಲ ಭಾರತ ಲಿಂಗಾಯತ ಕೃಷ್ಣರಾಜಪೇಟೆ ತಾಲ್ಲೋಕು ಘಟಕ ಅವರಿಗೆ ಟ್ರಸ್ಟ್ ಸಭಾ ನಿರ್ಣಯದಂತೆ ಹಸ್ತಾಂತರಿಸಿದ್ದು ದಿನಾಂಕ: 14-06-2001 ರಂದು ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಹೆಸರಿಗೆ ಖಾತೆ ವರ್ಗಾವಣೆ ಆಗಿರುತ್ತದೆ ಎಂ.ಆರ್. ಆಗಿ ಇ-ಸ್ವತ್ತು ಆಗಿರುತ್ತದೆಂದು ಹೇಳಿರುವುದು ಕಾನೂನಿಗೆ ವಿರೋಧವಾದ ಹೇಳಿಕೆಯಾಗಿರುತ್ತದೆ. ವೀರಶೈವ ಟ್ರಸ್ಟನಿಂದ ಹಸ್ತಾಂತರವಾಗಿದೆ ಎನ್ನುವುದಕ್ಕೆ ಟ್ರಸ್ಟನಿಂದ 0-20 ಗುಂಟೆ ಹಸ್ತಾಂತರದ ಬಗ್ಗೆ ಯಾವುದೇ ನೋಂದಾಯಿತ ಪತ್ರವಿರುವುದಿಲ್ಲ.
ಈಗಾಗಾಲೇ ಅಖಿಲ ಭಾರತ ವೀರಶೈವ ಲಿಂಗಾಯಿತ ಮಹಾ ಸಭಾದ ಪ್ರಧಾನ ಕಾರ್ಯದರ್ಶಿ ಹೆಸರಿಗೆ ನಿಯಮಬಾಹಿರವಾಗಿ ದಾಖಲಾಗಿರುವ ಅಸೆಸ್‍ಮೆಂಟ್ ನಂ: 2701/ಬಿ ಖಾತೆಯನ್ನು ರದ್ದು ಪಡಿಸುವ ಬಗ್ಗೆ ಮಾನ್ಯ ಯೋಜನಾ ನಿರ್ದೇಶಕರು ಜಿಲ್ಲಾ ನಗರಾಭಿವೃದ್ದಿ ಕೋಶ ಮಂಡ್ಯ ರವರು ವೀರಶೈವ ಮಹಾಸಭಾ ಪ್ರಧಾನ ಕಾರ್ಯದರ್ಶಿ ಇವರಿಗೆ ನೋಟಿಸ್ ನೀಡಿದ್ದು ಸದರಿ ವಿಚಾರವಾಗಿ ಕೆ.ಆರ್.ಪೇಟೆ ಪುರಸಭೆ ಮುಖ್ಯಾಧಿಕಾರಿಯವರಿಗೆ ಸರಿಯಾದ ದಾಖಲಾತಿಗಳನ್ನು ಒದಗಿಸಲಾಗದೆ. ಓ.ಎಸ್.ನಂ: 02/2013ರ ದಾವೆಯಲ್ಲಿ ಮಾನ್ಯ ನ್ಯಾಯಾಲಯವು ರೂ. 200/- ದಂಡ ವಿಧಿಸಿ ಅರ್ಜಿಯನ್ನು ವಜಾಗೊಳಿಸಿದೆ. ವಕೀಲರಾದ ವಿ.ಎಸ್.ಧನಂಜಯಕುಮಾರ್ ಕಾನೂನು ಮೂಲಕ ಎದುರಿಸಲಾಗದೆ ಉಪ ವಿಭಾಗಾಧಿಕಾರಿ ಎಲ್.ಎಂ.ನಂದೀಶ್ ತಹಸೀಲ್ದಾರ್ ನಿಸರ್ಗಪ್ರಿಯ, ಸಹಾಯಕ ಭೂ ನಿರ್ದೇಶಕ ಸಿದ್ದಯ್ಯ, ಶಿರಸ್ತೆದಾರ್ ರವಿ, ರಾಜಸ್ವನೀರಿಕ್ಷರಾದ ಜ್ನಾನೇಶ್, ಗ್ರಾಮಾಭಿವೃದ್ದಿ ಅಧಿಕಾರಿ ಜಗದೀಶ್ ಇವರುಗಳ ಮೇಲೆ ಲೋಕಾಯುಕ್ತಕ್ಕೆ ದೂರು ನೀಡಿರುವುದು ಸರಿಯಾದ ಕ್ರಮವಲ್ಲ ಎಂದು ತಿಳಿಸಿದ್ದಾರೆ.