ಅಕ್ಷಯ ತದಿಗೆ ಅಮಾವಾಸ್ಯೆ: ಮ.ಮ. ಬೆಟ್ಟದಲ್ಲಿ ಭಕ್ತಸಾಗರ
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.09-ನಾಡಿನ ಪ್ರಸಿದ್ಧ ಯಾತ್ರಸ್ಥಳವಾದ ಹನೂರು ತಾಲೂಕಿನ ಮಹದೇಶ್ವರ ಬೆಟ್ಟದಲ್ಲಿ ಅಕ್ಷಯ ತದಿಗೆ ಅಮಾವಾಸ್ಯೆ ಹಿನ್ನೆಲೆ ಭಕ್ತಸಾಗರವೇ ಹರಿದುಬಂದಿದೆ.
ಅಕ್ಷಯ ತದಿಗೆ ಅಮಾವಾಸ್ಯೆ ಪ್ರಯುಕ್ತ ಬೆಳಗ್ಗೆಯಿಂದಲೇ ದೇವರಿಗೆ ವಿಶೇಷ ಪೂಜೆ, ಅಭಿμÉೀಕ ನಡೆದಿದ್ದು ಜೊತೆಗೆ ಹುಲಿ ವಾಹನ ಉತ್ಸವ, ಬಸವ ವಾಹನ ಉತ್ಸವ, ರುದ್ರಾಕ್ಷಿ ಮಂಟಪೆÇೀತ್ಸವ, ಬೆಳ್ಳಿ ರಥೋತ್ಸವ ಸಡಗರದಿಂದ ನಡೆದಿದೆ.
ಅಮವಾಸ್ಯೆ ಪ್ರಯುಕ್ತ ರಾಜ್ಯದ ನಾನಾ ಭಾಗಗಳಿಂದ ಮಹದೇಶ್ವರನ ದರ್ಶನ ಮಾಡಲು ಹರಿದು ಬಂದಿದ್ದು ಮಳೆಯ ನಡುವೆ ಭಕ್ತಾದಿಗಳ ಉತ್ಸಾಹದಿಂದ ಧಾರ್ಮಿಕ ಕಾರ್ಯದಲ್ಲಿ ಭಾಗಿಯಾಗಿದ್ದಾರೆ.
ದೇವಾಲಯದ ಸಮೀಪದ ಅಲಂಬಡಿ ಬಸವನಿಗೆ ಎಣ್ಣೆ ಹಾಗೂ ಹಾಲಾಭಿμÉೀಕ ಮಾಡಿದ ರೈತರು ಮಳೆ-ಬೆಳೆಗಾಗಿ ಪ್ರಾರ್ಥನೆ ಸಲ್ಲಿಸಿದ್ದಾರೆ.