ಘರ್ಜನೆಯ ಜೊತೆ ದರ್ಶನ ಕೊಟ್ಟ ಹುಲಿರಾಯ!
ಸಂಜೆವಾಣಿ ವಾರ್ತೆ
ಚಾಮರಾಜನಗರ, ಏ.09- ಘರ್ಜನೆಯ ಜೊತೆ ಪ್ರವಾಸಿಗರಿಗೆ ದರ್ಶನ ಕೊಟ್ಟ ಹುಲಿರಾಯನನ್ನು ಕಂಡು ಪ್ರವಾಸಿಗರು ಬೆಚ್ಚಿಬಿದ್ದ ಘಟನೆ ಬಂಡಿಪುರ ಅರಣ್ಯ ಪ್ರದೇಶದಲ್ಲಿ ನಡೆದಿದೆ.
ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಬಂಡೀಪುರ ಅರಣ್ಯ ಪ್ರದೇಶದಲ್ಲಿ ಸಫಾರಿಗೆ ತೆರಳಿದ್ದ ಪ್ರವಾಸಿಗರಿಗೆ ದೊಡ್ಡ ಘರ್ಜನೆ ಮೂಲಕ ಹುಲಿರಾಯ ಕಾಣಿಸಿಕೊಂಡಿದ್ದಾನೆ.
ಪ್ರವಾಸ ತೆರಳಿದ್ದ ಸಮಯದಲ್ಲಿ ದಿಢೀರನೆ ದೊಡ್ಡ ಘರ್ಜನೆಯೊಂದಿಗೆ ಹುಲಿಯನ್ನು ಕಂಡು ಸ್ವಲ್ಪ ಹೊತ್ತು ಆತಂಕದಲ್ಲಿದ್ದ ನಡುಕಗೊಂಡಿದ್ದ ಪ್ರವಾಸಿಗರಿಗೆ ಹುಲಿಯ ದರ್ಶನವು ಖುಷಿಯನ್ನು ಸಹ ತಂದುಕೊಟ್ಟಿದೆ.
ಇತ್ತೀಚಿಗೆ ಬಂಡೀಪುರದಲ್ಲಿ ಕಾಡು ಪ್ರಾಣಿಗಳು ಹೆಚ್ಚಾಗಿ ಕಾಣಿಸಿಕೊಳ್ಳುತ್ತಿರುವುದು ಪ್ರವಾಸಿಗರಿಗೆ ಸಂತಸವನ್ನು ಉಂಟು ಮಾಡುತ್ತಿದೆ.