ಕಾಂಗ್ರೆಸ್ ಅಭ್ಯರ್ಥಿ ರಾಜು ಆಲಗೂರ ನಿರಮ್ಮಳ; ಸಚಿವ ಪಾಟೀಲರ ಜೊತೆ ಭೋಜನ, ಮನೆಯವರ ಜೊತೆ ಹರಟೆ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.10: ಬೆಳ್ಳಂಬೆಳÀಗ್ಗೆ ಬೇಗನೇ ಎದ್ದ ರಾಜು ಆಲಗೂರ ಅವರು, ಕುಟುಂಬದವರ ಜೊತೆ ಒಂದಷ್ಟು ಸಮಯ ಕಳೆದರು. ಮನೆ ಮಂದಿ ಜೊತೆಗೆ ಹರಟೆದರು. ಬ್ಲ್ಯಾಕ್ ಕಾಫಿ ಕುಡಿÀದು ಮತದಾನ ವಿವರಕ್ಕಾಗಿ ಪತ್ರಿಕೆಗಳನ್ನು ತಿರುವಿ ಹಾಕಿದರು. ಸಮಯ 8ರ ಹೊತ್ತಿಗೆ ಇವರ ಹೊಡ್ಕೋ ಕಾಲೊನಿ ಮನೆಗೆ ಕಾರ್ಯಕರ್ತರು, ಮುಖಂಡರ ದಂಡು ಆಗಮಿಸಿ ಮತದಾನ ವಿವರ ಕುರಿತು ಸಮಾಲೋಚಿಸಿದರು.
ಇದಾದ ನಂತರ ಬಿಎಲ್‍ಡಿಇ ಆವರಣದ ಕಚೇರಿಗೆ ತೆರಳಿ ಅಲ್ಲಿ ಪ್ರಮುಖರೊಂದಿಗೆ ಸೇರಿ ಎಲ್ಲ ಬೆಳವಣಿಗೆಗಳ ಕುರಿತು ಚರ್ಚಿಸಿದರು, ಒಂದಷ್ಟು ಹರಟಿದರು. ಅಷ್ಟೂ ದಿನದ ಅನುಭವಗಳನ್ನು ಹಂಚಿಕೊಂಡು ಹಗುರಾದರು.
ನಂತರ ಬೃಹತ್ ಕೈಗಾರಿಕೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ. ಪಾಟೀಲ ಅವರ ಮನೆಯಲ್ಲಿ ಬಹಳ ಹೊತ್ತು ಕಳೆದರು. ಮೂರು ಗಂಟೆಗೂ ಹೆಚ್ಚುಕಾಲ ಅವರೊಂದಿಗಿದ್ದು ಎಲ್ಲ ವಿವರಣೆ ನೀಡಿದರು. ಅವರೊಂದಿಗೆ ಊಟ ಮಾಡಿ, ಖುಷಿಯಿಂದ ಇದ್ದರು. ಚುನಾವಣೆಯ ಯಾವ ಒತ್ತಡವೂ ಅವರಲ್ಲಿ ಇರಲಿಲ್ಲ. ಸಚಿವರು ಕೂಡ ಖುಷಿಯಿಂದ ಇದ್ದರು. ಬ್ಲಾಕ್, ಬೂತ್‍ಗಳ ಮಟ್ಟದಲ್ಲಿ ಯಾವ ಕಡೆ ಎಷ್ಟು ಮತದಾನವಾಗಿದೆ ಹಾಗೂ ಕಾಂಗ್ರೆಸ್ ಪಕ್ಷಕ್ಕೆ ಎಷ್ಟು ಮತಗಳು ಬಂದಿರಬಹುದು ಎನ್ನುವ ಮಾತುಗಳು ನಡೆದವು. ಬಹಳ ವರ್ಷಗಳ ನಂತರ ಜಿಲ್ಲೆಯ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಪರ ಅಲೆ ಇರುವುದು ಕಂಡಿರುವ ಕುರಿತು ಸಮಾಧಾನದ ಘಳಿಗೆಗಳನ್ನು ಪಾಟೀಲರು, ಆಲಗೂರರೊಂದಿಗೆ ಹಂಚಿಕೊಂಡಿದ್ದು ವಿಶೇಷವಾಗಿತ್ತು. ಸಚಿವರಲ್ಲಿ ಯಾವ ಧಾವಂತವಿರಲಿಲ್ಲ.
ದೇವಸ್ಥಾನಗಳಿಗೆ ಭೇಟಿ
ರಾಜು ಆಲಗೂರ ಅವರು ಸಂಜೆ ಹಲವು ದೇವಸ್ಥಾನಗಳಿಗೆ ಭೇಟಿ ನೀಡಿ ಧನ್ಯತಾಭಾವ ಮೆರೆದರು. ರಾತ್ರಿ ಬಹಳ ದಿನಗಳ ನಂತರ ಮನೆಯವರ ಜೊತೆ ಕುಳಿತು ಊಟ ಮಾಡಿದರು. ಒಟ್ಟಿನಲ್ಲಿ ರಾಜು ಆಲಗೂರ ಅವರು ಖುಷಿಯಿಂದ ಇದ್ದರು.