ಬೈಕ್‍ನಿಂದ ಬಿದ್ದು ಯುವಕ ಸಾವು
ಕಲಬುರಗಿ,ಮೇ.8-ಬೈಕ್‍ನಿಂದ ಬಿದ್ದು ಯುವಕನೊಬ್ಬ ಮೃತಪಟ್ಟ ಘಟನೆ ನಂದಿಕೂರ ತಾಂಡಾ ಹತ್ತಿರ ನಡೆದಿದೆ.
ಬಿದ್ದಾಪುರ ಕಾಲೋನಿಯ ವಿನೋದ ಗುರುಪುತ್ರ ಬಮ್ಮನಳ್ಳಿ ಮೃತಪಟ್ಟ ಯುವಕ.
ವಿನೋದ ಸಂಬಂಧಿ ಶಂಕರ ಬುಳ್ಳಾ ಅವರ ಜೊತೆ ಬೈಕ್ ಮೇಲೆ ಹೋಗಿದ್ದ. ನಂದಿಕೂರ ತಾಂಡಾ ಹತ್ತಿರ ಬೈಕ್‍ನಿಂದ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದ ವಿನೋದನನ್ನು ಸರ್ಕಾರಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೆ ಅಸುನೀಗಿದ್ದು, ಈ ಸಂಬಂಧ ಶಂಕರ ಬುಳ್ಳಾ ವಿರುದ್ಧ ಸಂಚಾರಿ ಪೊಲೀಸ್ ಠಾಣೆ-1ರಲ್ಲಿ ಪ್ರಕರಣ ದಾಖಲಾಗಿದೆ.