ಅಕ್ರಮ ಮದ್ಯ ಮಾರಾಟ: ಓರ್ವನ ಬಂಧನ
ಕಲಬುರಗಿ,ಮೇ.8-ನಗರದ ಎಪಿಎಂಸಿ ಹಮಾಲ್ ವಾಡಿಯ ರಾಜಶೇಖರ ತಳಕೇರಿ ಅವರ ಮನೆಯ ಮುಂದುಗಡೆ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವಿಶಾಲ ತಂದೆ ರಾಜಶೇಖರ ಎಂಬಾತನನ್ನು ಬಂಧಿಸಿರುವ ಸಬ್ ಅರ್ಬನ್ ಪೊಲೀಸ್ ಠಾಣೆ ಪಿಐ ಮಹ್ಮದ್ ಫಸಿಯೋದ್ದೀನ್ ಹಾಗೂ ಸಿಬ್ಬಂದಿ 1240 ರೂ.ಮೌಲ್ಯದ ಮದ್ಯ ಜಪ್ತಿ ಮಾಡಿದ್ದಾರೆ.
ರಾಜಶೇಖರ್ ತಳಕೇರಿ ಪರಾರಿಯಾಗಿದ್ದು, ಅವರ ವಿರುದ್ಧ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.