ದನಕರುಗಳಿಗೆ ನೀರು:ಯುವಕರ ಮಾದರಿ ಕಾರ್ಯ
ಕಲಬುರಗಿ,ಮೇ 8: ಜಿಲ್ಲೆಯ ಜೇವರಗಿ ತಾಲೂಕಿನ ಹಿಪ್ಪರಗಿ( ಎಸ್.ಎನ್) ಗ್ರಾಮದ ಹೊರವಲಯದ ಸೊನ್ನದ ದಾರಿ ಪಕ್ಕದಲ್ಲಿರುವ ಬೋರ್‍ವೆಲ್ ಮುಂಭಾಗದ ನೀರಿನ ತೊಟ್ಟಿಗೆ ಕೊಡಗಳಿಂದ ನೀರನ್ನು ತುಂಬಿಸುವ ಮೂಲಕ ಇಲ್ಲಿನ ಯುವಕರು ದನಕರುಗಳ ನೀರಿನ ದಾಹ ನೀಗಿಸಿದ್ದಾರೆ.
ಗ್ರಾಮದ ಯುವಕರು ತೊಟ್ಟಿಯನ್ನು ಸ್ವಚ್ಚಗೊಳಿಸಿ ಕೊಡಗಳ ಮೂಲಕ ದಿನಾ ಸಂಜೆ ತೊಟ್ಟಿ ತುಂಬಿಸುವರು.
ತೊಟ್ಟಿಯು ತುಂಬಾ ಹಳೆಯದಾಗಿರುವುದರಿಂದ ಹಾಗೂ ಅವೈಜ್ಞಾನಿಕವಾಗಿ ಕಟ್ಟಿರುವುದರಿಂದ ಅನಿವಾರ್ಯವಾಗಿ ತೊಟ್ಟಿಗೆ ಕೊಡಗಳಿಂದಲೇ ನೀರು ತುಂಬಬೇಕು.
ಎಲ್ಲವೂ ಗ್ರಾಮ ಪಂಚಾಯತಿಯವರು, ಜನಪ್ರತಿನಿಧಿಗಳು ಮಾಡಲಿ ಎಂಬ ಮನೋಭಾವ ಹೊಂದಿರುವ ಜನಗಳ ನಡುವೆ ಇಲ್ಲಿಯ ಉತ್ಸಾಹಿ ರೈತ ಯುವಕರು, ಬಿಸಿಲಿನ ತಾಪ ಹೆಚ್ಚಾಗಿರುವದರಿಂದ ಮೂಕ ಪ್ರಾಣಿಗಳ ಮೂಕ ರೋದನೆ ತಿಳಿದು ನೀರಿನ ವ್ಯವಸ್ಥೆ ಮಾಡಿರುವದು ಶ್ಲಾಘನೀಯ ಕಾರ್ಯವಾಗಿದೆ. ಇವರ ಕೆಲಸ ಇತರರಿಗೆ ಮಾದರಿಯಾಗಲಿ.
-ಗುರುರಾಜ.ಕೆ.ಪಿ.