ಕಲಬುರಗಿ: ಶೇ.62.27ರಷ್ಟು ಮತದಾನ
ಕಲಬುರಗಿ,ಮೇ.8: ಕಲಬುರಗಿ ಲೋಕಸಭಾ (ಪ.ಜಾ) ಕ್ಷೇತ್ರಕ್ಕೆ ನಿನ್ನೆ ನಡೆದ ಚುನಾವಣೆಯಲ್ಲಿ ಅಂದಾಜು ಶೇ.62.27 ರಷ್ಟು ಮತದಾನವಾಗಿದೆ ಎಂದು ಚುನಾವಣಾಧಿಕಾರಿ ಬಿ.ಫೌಜಿಯಾ ತರನ್ನುಮ್ ತಿಳಿಸಿದ್ದಾರೆ.
ಅಫಜಲಪುರ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.65.25, ಜೇವರ್ಗಿ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.64.2, ಚಿತ್ತಾಪುರ ವಿಧಾನಸಭಾ ಕ್ಷೇತ್ರದಲ್ಲಿ ಶೇ.60.52, ಗುರುಮಠಕಲ್ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.61.13,ಸೇಡಂ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.68.61,ಕಲಬುರಗಿ ಗ್ರಾಮೀಣ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.61.7, ಕಲಬುರಗಿ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.57.56,ಕಲಬುರಗಿ ಉತ್ತರ ವಿಧಾನಸಭಾ ಕ್ಷೇತ್ರದಲ್ಲಿ ಅಂದಾಜು ಶೇ.60.97 ರಷ್ಟು ಮತದಾನವಾಗಿದೆ.
ಕಲಬುರಗಿ ಲೋಕಸಭಾ ಕ್ಷೇತ್ರದಲ್ಲಿ 10,49,959 ಪುರುಷರು, 10,47,961 ಮಹಿಳೆಯರು ಹಾಗೂ 282 ಇತರೆ ಸೇರಿ ಒಟ್ಟು 20,98,202 ಜನ ಮತ ಚಲಾವಣೆಗೆ ಹಕ್ಕು ಹೊಂದಿದ್ದರು.
ಶಾಂತಿಯುತ ಮತದಾನ:
ಕ್ಷೇತ್ರದಾದ್ಯಂತ ಯಾವುದೇ ಅಹಿತಕರ ಘಟನೆ ಇಲ್ಲದೆ ಮತದಾನ ಶಾಂತಿಯುತವಾಗಿ ನಡೆದಿದ್ದು, ಇದಕ್ಕೆ ಸಹಕರಿಸಿದ ಎಲ್ಲಾ ರಾಜಕೀಯ ಪಕ್ಷಗಳು, ಅಭ್ಯರ್ಥಿಗಳು, ಹಗಲು-ರಾತ್ರಿ ಕೆಲಸ ನಿರ್ವಹಿಸಿದ ಎಲ್ಲಾ ಹಂತದ ಚುನಾವಣಾ ಅಧಿಕಾರಿ-ಸಿಬ್ಬಂದಿಗಳಿಗೆ ಹಾಗೂ ವಿಶೇಷವಾಗಿ ಬಿಸಿಲು ಲೆಕ್ಕಿಸದೆ ಮತದಾನ ಮಾಡಲು ಮುಂದೆ ಬಂದ ಮತದಾರ ಪ್ರಭುಗಳಿಗೆ ಜಿಲ್ಲಾಧಿಕಾರಿ ಬಿ.ಫೌಜಿಯಾ ತರನ್ನುಮ್ ಅವರು ಧನ್ಯವಾದ ತಿಳಿಸಿದ್ದಾರೆ.
ಮತ ಎಣಿಕೆ:
ಮತದಾನ ಪ್ರಕ್ರಿಯೆ ಮುಕ್ತಾಯವಾಗಿರುವುದರಿಂದ ಎಲ್ಲಾ ಇ.ವಿ.ಎಂ ಮತಯಂತ್ರಗಳು ಮತಗಟ್ಟೆಯಿಂದ ಡಿ-ಮಸ್ಟರಿಂಗ್ ಸೆಂಟರ್ ತಲುಪಿ ಅಲ್ಲಿಂದ ನೇರವಾಗಿ ಗುಲಬರ್ಗಾ ವಿವಿ.ಸ್ಟ್ರಾಂಗ್ ರೂಂ ತಲುಪಿದ್ದು, ಜೂನ್ 4ಕ್ಕೆ ವಿ.ವಿ. ಆವರಣದ ವಿವಿಧ ವಿಭಾಗದಲ್ಲಿ ಮತ ಎಣಿಕೆ ಕಾರ್ಯ ನಡೆಯಲಿದೆ.