ಅಪಹರಣಕ್ಕೊಳಗಾದ ಮಗು ಮೂರೆ ದಿನದಲ್ಲಿ ಪತ್ತೆ
ಬೀದರ್:ಮೇ.8: ಅಪಹರಣಕ್ಕೊಳಗಾದ ಮಗವನ್ನ ಮೂರು ದಿನದಲ್ಲಿಯೇ ಬಬೀದರ ನಗರ ಪೆÇಲೀಸರು ಪತ್ತೆ ಹಚ್ಚಿದ್ದಾರೆ. ಮೇ 4 ರಂದು ಬೀದರ್?ನ ಓಲ್ಡ್ ಸಿಟಿಯ ನಯಾಕಮಾನ್?ನಲ್ಲಿ ಮನೆಯ ಮುಂದೆ ಆಟವಾಡುತ್ತಿದ್ದ ಎರಡು ವರ್ಷದ ಅರವಿಂದ್ ಎಂಬ ಮಗುವನ್ನು ಮಹಿಳೆಯೊಬ್ಬಳು ಅಪಹರಿಸಿಕೊಂಡು ಹೋಗಿದ್ದಳು.
ಈ ಕುರಿತು ನಗರ ಪೆÇಲೀಸ್ ಠಾಣೆಯಲ್ಲಿ ಮೇ 4ರಂದು ಪ್ರಕರಣ ದಾಖಲಾಗಿತ್ತು. ಈ ಹಿನ್ನಲೆ ತಕ್ಷಣ ಎಚ್ಚೆತ್ತುಕೊಂಡ ಎಸ್ಪಿ ಚೆನ್ನಬಸವಣ್ಣ ಅವರು ಮಗು ಪತ್ತೆಗಾಗಿ 3 ಪೆÇೀಲೀಸ್ ತಂಡವನ್ನು ರಚನೆ ಮಾಡಿದ್ದರು. ಇದೀಗ ಪೆÇಲೀಸರು ಹೈದ್ರಾಬಾದ್?ನಲ್ಲಿ ಮಗುವನ್ನ ರಕ್ಷಣೆ ಮಾಡಿ ತಾಯಿಯ ಮಡಿಲನ್ನು ಸೇರಿಸಿದ್ದಾರೆ.