ಹುಮ್ಮಸ್ಸಿನಿಂದ ಮೊದಲ ಬಾರಿ ಮತದಾನ ಮಾಡಿದ ಯುವ ಮತದಾರರು
ಔರಾದ : ಮೇ.8:ಇದೆ ಬಾರಿ ಪ್ರಥಮವಾಗಿ ಮತದಾನ ಮಾಡುವ ಮತದಾರರನ್ನು ಪೆÇ್ರೀತ್ಸಾಹಿಸುವ ಚುನಾವಣಾ ಆಯೋಗದ ಉತ್ತೇಜನ ಕ್ರಮಗಳಿಗೆ ಪ್ರತಿಕ್ರಿಯೆ ಎಂಬಂತೆ, ಹೊಸ ಮತದಾರರು ಈ ಸಲದ ಚುನಾವಣೆಯಲ್ಲಿ ಯುವಕರು ಗಣನೀಯ ಪ್ರಮಾಣದಲ್ಲಿ ಮತಗಟ್ಟೆಗಳಲ್ಲಿ ಕಾಣಿಸಿಕೊಂಡರು.
ಮತದಾನ ಆರಂಭವಾದ ಮುಂಜಾನೆ 7 ಗಂಟೆಯಿಂದಲೇ ಹಲವು ಮೊದಲ ಸಲದ ಮತದಾರರು ಸಾಲಿನಲ್ಲಿ ನಿಂತು ಯುವ ಮತದಾರ ತಿರುಪತಿ ಉದ್ದವರಾವ ಕದಮ ಇದೆ ಮೋದಲ ಸಲ ಮತ ಚಲಾಯಿಸಿದರು. ”ಮತದಾನ ನಮ್ಮ ಹಕ್ಕು, ಸೂಕ್ತ ಅಭ್ಯರ್ಥಿಗೆ ಮತ ನೀಡೋಣ. ಎಲ್ಲರೂ ಮತ ಹಾಕೋಣ” ಎಂಬ ಸಂದೇಶ ನೀಡಿದರು. ಮಸಿ ಹಾಕಿದ ಬೆರಳನ್ನು ಪ್ರದರ್ಶಿಸಿಕೊಂಡು ಸೆಲ್ಫಿ ಕ್ಲಿಕ್ಕಿಸಿ ಇತರರೊಂದಿಗೆ ಹಂಚಿಕೊಂಡುದು ಕಂಡುಬಂತು.
ತಾಲೂಕಿನ ಶೆಂಬೆಳ್ಳಿ ಗ್ರಾಮದಲ್ಲಿ ಕೂಡ ಯುವ ಮತದಾರರು ತಮ್ಮ ಹಕ್ಕು ಚಲಾಯಿಸಿದ್ದು ವಿಶೇಷವಾಗಿತ್ತು. ಬೇರೆ ಬೇರೆ ಜಿಲ್ಲೆಯಲ್ಲಿ ವಿದ್ಯಾಭ್ಯಾಸ ಹಾಗೂ ಉದ್ಯೋಗ ಮಾಡಲು ತೆರಳಿದ್ದ ಯುವಕರು
ಲೋಕಸಭಾ ಚುನಾವಣೆ ನಿಮಿತ್ತ “ನನ್ನ ಮತ ನನ್ನ ಹಕ್ಕು” ತಮ್ಮ ಸ್ವಂತ ಗ್ರಾಮಕ್ಕೆ ಬಂದು ಮತದಾನ ಮಾಡಿದರು. ಯಾರು ಅಸಡ್ಡೆ ತೋರದೆ ಎಲ್ಲರೂ ಕಡ್ಡಾಯವಾಗಿ ಮತದಾನ ಮಾಡಬೇಕು, ಈ ಮಧ್ಯೆ ಓದಿ ಬರೆದ ವಿದ್ಯಾವಂತರಿರುವ ಕ್ಷೇತ್ರಗಳಲ್ಲಿ ಮತದಾನ ಕ್ಷೀಣಿಸುವುದನ್ನು ನೋಡುತ್ತಿದ್ದೇವೆ. ನಮ್ಮ ಒಂದು ಮತ ಕೂಡ ನಿರ್ಣಾಯಕ ವಾದದ್ದು ದಯವಿಟ್ಟು ಎಲ್ಲರೂ ಕಡ್ಡಾಯ ಮತದಾನ ಮಾಡಬೇಕು ಎಂದು ತಿಳಿಸಿದರು.