ಕರ್ನಾಟಕ ಕಲಾ ಶ್ರೀ ಪ್ರಶಸ್ತಿಗೆ ಮಹಾದೇವಪ್ಪಾ ಪೂಜಾರಿ ಭಾಜನ
ಆಳಂದ:ಸೆ.22: ಕರ್ನಾಟಕ ಸಂಗೀತ ನೃತ್ಯ ಅಕಾಡೆಮಿ 2024-25ನೇ ಸಾಲಿನ ನೀಡುವ ಕರ್ನಾಟಕ ಕಲಾ ಶ್ರೀ ಪ್ರಶಸ್ತಿಗೆ ಕಲಬುರಗಿ ಜಿಲ್ಲೆಯಿಂದ ಸಂಗೀತ ಕ್ಷೇತ್ರದಲ್ಲಿ ತಾಲೂಕಿನ ಹಿತ್ತಲಶಿರೂರು ಗ್ರಾಮದ ಮಹಾದೇವಪ್ಪ ಭೀಮಶಾ ಪೂಜಾರಿ (80) ಅವರು ಭಾಜನರಾಗಿದ್ದಾರೆ.
ಹಿರಿಯ ಕಲಾವಿದ ಮಹಾದೇವಪ್ಪಾ ಪೂಜಾರಿ ಅವರು ಮೂಲತಃ ಸಂಗೀತ ಮನೆತನದಿಂದ ಬಂದಿರುವ ಇವರ ಸಂಗೀತ ಗುರುಗಳು ಆಗಿನ ಕಾಲದ ಹಿರಿಯ ಸಂಗೀತಗಾರರಾಗಿರುವ ಪಂಡಿತ ಶ್ರೀ ಚನ್ನವಿರಪ್ಪ ಗವಾಯಿಗಳು ಗೊಬ್ಬುರ್ ಇವರ ಹತ್ತಿರ ಹಿಂದುಸ್ತಾನಿ ಸಂಗೀತಭ್ಯಾಸ ಕಲಿತವರು.
ಜೊತೆಗೆ ಪ್ರೇರಣಾದಾಯಕವಾಗಿ ಇವರ ಕಲಾವನ್ನು ಪ್ರೋತ್ಸಾಹಿಸಿ ಬೆಳೆಸುವಲ್ಲಿ ಚಿನಮಗೇರಿ ಶ್ರೀ ಮಹಾಂತೇಶ್ವರ ಮಠದಲ್ಲಿ ನಡೆಯುವ ಸಂಗೀತ ಕಾರ್ಯಕ್ರಮಗಳು. ಪ್ರಾರಂಭದಲ್ಲಿ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಅಭ್ಯಾಸ ಮಾಡಿ, ಮುಂದೆ ನಮ್ಮ ಭಾಗದಲ್ಲಿ ಸುಗಮ ಸಂಗೀತ ಜನಪ್ರಿಯವಾಗಿರುವುದರಿಂದ ಶರಣರ ವಚನಗಳು, ದಾಸವಾಣಿ, ತತ್ವಪದಗಳು, ಅಭಂಗಗಳು ಹಾಡುವುದನ್ನು ಬೆಳೆಸಿಕೊಂಡು ಜನಮೆಚ್ಚಿಗೆ ಪಡೆದಿದ್ದಾರೆ. .
ಅಲ್ಲದೆ, ಹಿತ್ತಲಶಿರೂರ ಗ್ರಾಮದಲ್ಲಿನ ಶ್ರೀ ಕಲ್ಮೇಶ್ವರ ದೇವರ ಅರ್ಚಕರಾಗಿರುವ ಪೂಜಾರಿ ಅವರು, ಇವರ ಪಾಲಿಗೆ ಈ ದೇವಸ್ಥಾನವೇ ಸಂಗೀತ ಪಾಠಶಾ¯ಯನ್ನಾಗಿ ಮಾಡಿದ್ದರು.
ಮಾರ್ಗದರ್ಶಕರಾಗಿ ಗ್ರಾಮದ ಕೀರ್ತನ ಕೇಸರಿ ಆದಂತಹ ದಿ. ಪಂಡಿತ್ ರೇವಣಸಿದ್ಧ ಶಾಸ್ತ್ರಿಗಳು, ಗದುಗಿನ ಪಂಚಾಕ್ಷರಿ ಗುರುಗಳ ಶಿಷ್ಯರಾದಂತಹ ಶ್ರೀ ವಿಶ್ವನಾಥ್ ಮಾಸ್ಟರ್ ಉಡಚಣ ಹಾಗೂ ಕಲ್ಯಾಣರವ್ ಮಾಸ್ಟರ್ ಕೊರಳ್ಳಿ ಯವರಾಗಿದ್ದರು.
ಮೊದಲಿನಿಂದಲೂ ಗ್ರಾಮದಲ್ಲಿ ಸಂಗೀತ ವಾತಾವರಣ ಬೆಳೆದಿದ್ದರಿಂದ ಸಂಗೀತ ಕಲೆ ಬೆಳೆಸುವಲ್ಲಿ ಇವರಿಗೆ ವರವಾಗಿ ಪರಿಣಮಿಸಿತು. ಕರ್ನಾಟಕದ ಅನೇಕ ಮಠ ಮಾನ್ಯಗಳಲ್ಲಿ ವಚನ ಗಾಯನ ತತ್ವ ಪದ್ಯ ದಾಸವಾಣಿ ಮರಾಠಿ ಅಭಂಗ ಕಾರ್ಯಕ್ರಮಗಳನ್ನು ನೀಡಿ ಪ್ರಸಿದ್ಧಿಪಡೆದಿದ್ದು, ಹಲವು ಧ್ವನಿ ಸುರಳಿಗಳಿಗೆ ಗಾಯನ ನುಡಿಸಿದ್ದು ಇಂಥ ಕಲಾವಿದನಿಗೆ ಅಕಾಡೆಮಿ ಪ್ರಶಸ್ತಿಗೆ ಆಯ್ಕೆ ಮಾಡಿದೆ.
ಈ ಗೌರವಕ್ಕೆ ಚಣಮಗಿರಿ ಶ್ರೀ ಸಿದ್ದರಾಮ ಶಿವಾಚಾರ್ಯರು, ನಂದವಾಡಗಿ, ಜಾಲವಾದಿ ಮಠದ ಶ್ರೀ ಮಹಾಂತಲಿಂಗ ಶಿವಾಚಾರ್ಯರು, ಡಾ. ಪಡಸಾವಳಿ ಶಂಭುಲಿಂಗ ಶಿವಾಚಾರ್ಯರು, ಡಾ. ಚನ್ನವೀರ ಶಿವಾಚಾರ್ಯರು ಹಾರಕೂಡ್, ಮಾದನ ಹಿಪ್ಪರಗದ ಅಭಿನವ ಶಿವಲಿಂಗ ಶ್ರೀ ನರೋಣದ ಗುರುಮಹಾಂತಲಿಂಗ ಶ್ರೀ, ನಿಂಬರ್ಗಾ ನೀಲಕಂಠ ಶಿವಾಚಾರ್ಯರು, ಅಕ್ಕಲಕೋಟ ಶ್ರೀ ಬಸವಲಿಂಗ ಶ್ರೀ, ಸಿದ್ದಲಿಂಗೇಶ್ವರ ಹಿರೇಮಠದ ಸಿದ್ದೇಶ್ವರ ಶಿವಾಚಾರ್ಯರು ಹೀಗೆ ಅನೇಕ ಮಠಾಧೀಶರು ಸೇರಿ ಕಲಾವಿದರು ಶುಭ ಹಾರೈಸಿ ಹರ್ಷ ವ್ಯಕ್ತಪಡಿಸಿದ್ದಾರೆ.