ಹ್ಯಾಂಡ್ ಬಾಲ್ ಕ್ರೀಡೆಯಲ್ಲಿ ರಾಜ್ಯ ಮಟ್ಟಕ್ಕೆ ಆಯ್ಕೆ
ತಾಳಿಕೋಟೆ:ಸೆ.22: ವಿಜಯಪುರ ನಗರದ ಡಾ.ಬಿ.ಆರ್.ಅಂಬೇಡ್ಕರ್ ಕ್ರೀಡಾಂಗಣದಲ್ಲಿ ನಡೆದ ಜಿಲ್ಲಾ ಮಟ್ಟದ ಪಧವಿ ಪೂರ್ವ ಕಾಲೇಜುಗಳ ಕ್ರೀಡಾಕೂಟದಲ್ಲಿ ತಾಳಿಕೋಟೆ ಎಚ್.ಎಸ್.ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹ್ಯಾಂಡಬಾಲ್ ಕ್ರೀಡೆಯಲ್ಲಿ ಪ್ರಥಮ ಸ್ಥಾನ ಪಡೆದುಕೊಳ್ಳುವದರೊಂದಿಗೆ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದಾರೆ.
ಶಾಲಾ ಶಿಕ್ಷಣ ಇಲಾಖೆ (ಪದವಿ ಪೂರ್ವ) ವಿಜಯಪುರ) ಹಾಗೂ ಆರ್.ಜೆ.ಇಂಟರ್ ನ್ಯಾಶನಲ್ ಪದವಿ ಪೂರ್ವ ಕಾಲೇಜು, ವಿಜಯಪುರ ಇವರ ಸಂಯುಕ್ತ ಆಶ್ರಯದಲ್ಲಿ ನಡೆದ ಜಿಲ್ಲಾ ಮಟ್ಟದ ಪದವಿ ಪೂರ್ವ ಕಾಲೇಜುಗಳ ಕ್ರೀಡಾ ಕೂಟದಲ್ಲಿ ತಾಳಿಕೋಟೆಯ ಎಚ್.ಎಸ್.ಪಾಟೀಲ ಸ್ವತಂತ್ರ ಪದವಿ ಪೂರ್ವ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಹ್ಯಾಂಡಬಾಲ್ ಕ್ರೀಡೆಯಲ್ಲಿ ರಾಜ್ಯಮಟ್ಟಕ್ಕೆ ಪ್ರಥಮ ಸ್ಥಾನ ಪಡೆದುಕೊಂಡು ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಗೊಂಡಿದ್ದು ಆಯ್ಕೆಗೊಂಡ ಎಲ್ಲ ಕ್ರೀಡಾಪಟುಗಳಿಗೆ ಸಂಸ್ಥೆಯ ಸಂಸ್ಥಾಪಕರಾದ ಎಚ್.ಎಸ್.ಪಾಟೀಲ, ಹಾಗೂ ಆಡಳಿತಾಧಿಕಾರಿ ಶ್ರೀಮತಿ ಎಸ್.ಎಚ್ ಪಾಟೀಲ, ಕಾರ್ಯದರ್ಶಿಗಳಾದ ಸಚಿನ. ಎಚ್. ಪಾಟೀಲ, ಕಿರಣ. ಎಚ್. ಪಾಟೀಲ, ರವಿ. ಬಿ. ಪಾಟೀಲ, ಮತ್ತು ಬಿಪಿಎಡ್ ಕಾಲೇಜಿನ ಪ್ರಾಚಾರ್ಯರಾದ ಶಿವಕುಮಾರ ನಾಯಕ, ಪ್ರಾಚಾರ್ಯರಾದ ಶ್ರೀಮತಿ ಎಮ್.ಎಸ್.ಬಿರಾದಾರ, ದೈಹಿಕ ಉಪನ್ಯಾಸಕರಾದ ಎಸ್.ಬಿ.ಮಂಗ್ಯಾಳ, ಪ್ರೌಢಶಾಲೆಯ ದೈಹಿಕ ಶಿಕ್ಷಕರಾದ ಎಂ.ಎಸ್.ರಾಯಗೊಂಡ, ಬಿ.ಆಯ್.ಹಿರೇಹೊಳಿ, ಉಪನ್ಯಾಸಕರುಗಳಾದ ಶರಣು ಬಿರಾದಾರ, ಪ್ರಕಾಶ. ಪಾಟೀಲ. ವಿ.ಎಸ್.ಬಿರಾದಾರ, ಎಮ್.ಬಿ.ವಾಲೀಕಾರ, ಕುಮಾರಿ ಆರ್.ಬಿ.ಪಾಟೀಲ, ಕುಮಾರಿ ರೀನಾ ಎಸ್. ಹಂಚಿನಾಳ, ಕುಮಾರಿ ಗಂಗಾಂಬಿಕಾ ಎಸ್, ಆರ್.ವಾಯ್.ದೊಡಮನಿ, ಎಸ್.ಎಮ್.ಖಿಂಡಿಮನಿ, ರಾಜಶೇಖರ, ಎಸ್.ವಿ.ಜಾಮಗೊಂಡಿ, ಅಭಿನಂದಿಸಿದ್ದಾರೆ.
ಈ ಹ್ಯಾಂಡ್ ಬಾಲ್ ಕ್ರೀಡೆಗೆ ವಿಶೇಷ ತರಬೇತಿಯನ್ನು ನವೀನ ಇಜೇರಿ ಅವರು ನೀಡಿದ್ದರು.