ಪ್ರತಿಭಾ ಕಾರಂಜಿ ತಾಲೂಕಾ ಮಟ್ಟಕ್ಕೆ ಆಯ್ಕೆ
ತಾಳಿಕೋಟೆ:ಸೆ.22: ಮಿಣಜಗಿ ಗ್ರಾಮದ ಸರಕಾರಿ ಪ್ರೌಢಶಾಲೆಯಲ್ಲಿ ನಡೆದ ಮಿಣಜಗಿ ಕ್ಲಸ್ಟರ್ ಮಟ್ಟದ ಪ್ರಾಥಮಿಕ ಮತ್ತು ಪ್ರೌಡಶಾಲೆಗಳ ಪ್ರತಿಭಾ ಕಾರಂಜಿ ಸ್ಪರ್ಧೆಯಲ್ಲಿ ಕನಕ ಪ್ರೌಢಶಾಲೆ ಶ್ರೀಘನಮಠೇಶ್ವರ ಕನ್ನಡ ಮತ್ತು ಆಂಗ್ಲ ಪ್ರೌಢಶಾಲೆ ವಿದ್ಯಾರ್ಥಿಗಳು ಭಾಗಹಿಸಿ ಪ್ರಥಮ, ದ್ವಿತೀಯ, ತೃತೀಯ ಸ್ಥಾನವನ್ನು ಪಡೆದುಕೊಂಡು ತಾಲ್ಲೂಕ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಪ್ರಾಥಮಿಕ ವಿಭಾಗದಲ್ಲಿ ಕು. ಪ್ರಿಯಾ ಬಿರಾದಾರ( ಕಂಠಪಾಠ ಕನ್ನಡ ಪ್ರಥಮ), ಕು. ಸಂಗಮ್ಮ ಬಂಟನೂರ( ಭಕ್ತಿ ಗೀತೆ ಪ್ರಥಮ), ಕು. ನೇಹಾ ರಂಗ್ರೇಜಿ( ಭಕ್ತಿಗೀತೆ ದ್ವಿತೀಯ), ಕು. ಅನ್ವಿತಾನವಲೆ(ಕಂಠಪಾಠ ಇಂಗ್ಲೀಷ ದ್ವಿತೀಯ), ಪ್ರೌಢ ವಿಭಾಗದಲ್ಲಿ ಕು. ಮುಸ್ಕಾನ ವಾಲಿಕಾರ( ಧಾರ್ಮಿಕ ಪಠಣ ಅರೇಬಿಕ ಪ್ರಥಮ), ಕು.ರಕ್ಷಿತಾಬಿರಾದಾರ(ಭಾವಗೀತೆಪ್ರಥಮ), ಕು. ಅಂಬಿಕಾ ಬಡಿಗೇರಿ (ಭರತನಾಟ್ಯ ಪ್ರಥಮ), ಕು. ರಿಯಾಜ ಮತ್ತು ಸಂಗಡಿಗರು(ಕವ್ಹಾಲಿ ಪ್ರಥಮ), ಕು . ವೈಷ್ಣವಿ ರಂಗ್ರೇಜಿ (ಕವನ ವಾಚನ ಪ್ರಥಮ), ಕು.ಶಂಕ್ರಮ್ಮ ಹಿರೇಮಠ(ಇಂಗ್ಲೀಷ ಭಾಷಣ ಪ್ರಥಮ), ಜಯತೀರ್ಥ ಪಾಟೀಲ(ಧಾರ್ಮಿಕ ಪಠಣ ಸಂಸ್ಕೃತ ಪ್ರಥಮ), ಕು.ತಮ್ಮಣಗೌಡ ಪಾಟೀಲ(ಮಿಮಿ ಕ್ರೀ ಪ್ರಥಮ), ಕು.ನಾಗಮ್ಮ ಪಾಟೀಲ(ಕನ್ನಡ ಭಾಷಣ ದ್ವಿತೀಯ), ಕು.ಪೂಜಾ ಮತ್ತು ಗೋಲ್ಲಾಳಪ್ಪ (ಕ್ವಿಜ್ ದ್ವಿತೀಯ), ಕು. ಅಲ್ಪಿಯಾ ಮತ್ತು ಸಂಗಡಿಗರು( ಕವ್ಹಾಲಿ ದ್ವಿತೀಯ), ಕು. ಮೇಘಾ ಪಾಟೀಲ(ಜನಪದ ಗೀತೆ ದ್ವಿತೀಯ), ಕು. ಈರಮ್ಮ ಸುಂಬಡದ(ಚರ್ಚಾ ಸ್ಪರ್ದೆ ದ್ವಿತೀಯ), ಕು.ಚೈತ್ರಾ ನೆಲ್ಲಗಿ(ರಂಗೋಲಿ ದ್ವಿತೀಯ), ಕು. ಶಿವಶಾಂತ ಚವ್ಹಾಣ(ಮಿಮಿಕ್ರೀ ದ್ವಿತೀಯ), ಕು. ಸವಿತಾ ಬಿರಾದಾರ(ಪ್ರಬಂಧ ದ್ವಿತೀಯ), ಕು. ಅಭಿವನಯ್ಯ ಚವ್ಹಾಣ(ಹಿಂದಿ ಭಾಷಣ ದ್ವಿತೀಯ), ಕು. ನಮೀತಾ ಪಾಟೀಲ್(ಆಶುಭಾಷಣ ದ್ವಿತೀಯ), ಕು. ಶಿವಾನಿ ತೋಟದ(ಕವನವಾಚನ ದ್ವಿತೀಯ) ಕು.ಕಾಶಿಂಬಿ( ಧಾರ್ಮಿಕ ಪಠಣ ಅರೇಬಿಕ ದ್ವಿತೀಯ), ಕು. ಅಲ್ಪಿಯಾ ಚಪ್ಪರಬಂದ(ಧಾರ್ಮಿಕ ಪಠಣ ಅರೇಬಿಕ ತೃತೀಯ), ಕು.ರಾಹುಲ ಕಾಳಗಿ(ಜಾನಪದ ಗೀತೆ ತೃತೀಯ), ಕು.ಈರಮ್ಮ ಸುಂಬಡದ(ಜನಪದ ಗೀತೆ ತೃತೀಯ), ಕು.ಪಲ್ಲವಿ ಹೊಸಮನಿ(ಪ್ರಬಂಧ ತೃತೀಯ), ಕು. ಸುನಿತಾ ಕುಂಬಾರ(ಕವನವಾಚನ ತೃತೀಯ), ತ್ರಿವೇಣಿ ವಡ್ಡರ ಮತ್ತು ಸಂಗಡಿಗರು(ಜನಪದ ನೃತ್ಯ ತೃತೀಯ), ಕು.ಈರಮ್ಮ ಸುಂಬಡದ ಮತ್ತು ಫಯಾಜ ಯರನಾಳ(ಕ್ವಿಜ್ ತೃತೀಯ), ಕು. ಮಲ್ಲಿಕಾರ್ಜುನ ತಳವಾರ(ಭಾವ ಗೀತೆ ತೃತೀಯ), ಕು.ಕಾವ್ಯ ಬಿರಾದಾರ(ಚಿತ್ರಕಲೆ ತೃತೀಯ), ಪ್ರತಿಭಾ ಕಾರಂಜಿಯಲ್ಲಿ ಉತ್ತಮ ಸಾಧನೆ ತೋರಿದ ಹಾಗೂ ತಾಲ್ಲೂಕಾ ಮಟ್ಟದ ಪ್ರತಿಬಾ ಕಾರಂಜಿಗೆ ಆಯ್ಕೆಯಾದ ವಿದ್ಯಾರ್ಥಿಗಳಿಗೆ ಸಂಸ್ಥೆಯ ಸಂಸ್ಥಾಪಕರಾದ ಡಾ|| ಎಸ್ ಎಂ.ಸಜ್ಜನ ಕಾಯದರ್ಶಿ ವಿವೇಕಾನಂದ ಸಜ್ಜನ, ಮುಖ್ಯಗುರುಗಳಾದ ಬಿ.ಜಿ.ಸಜ್ಜನ, ಆರ್.ಎಸ್.ದೇಸಾಯಿ, ದೈಹಿಕ ಶಿಕ್ಷಕ ಶಿವಾನಂದ ಸುಣದಳ್ಳಿ, ಪಿಯು ಕಾಲೇಜ್ ಪ್ರಾಚಾರ್ಯ ಕಿಶೋರಗೌಡ, ಸಿಬಿಎಸ್‍ಇ ಪ್ರಾಚಾರ್ಯ ಜಯಚಂದ್ರ, ಬಿಎಡ್ ಕಾಲೇಜ್ ಪ್ರಾಚಾರ್ಯ ಶ್ರೀಮತಿ ಜಿ.ಎನ್.ಪಾಟೀಲ, ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.