ಹಳೆಯ ಬಾವಿ ದುರಸ್ತಿ ಮಾಡಿಸಿಲು ಆಗ್ರಹಿಸಿ ಜೈ ಕನ್ನಡಿಗರ ಸೇನೆ ಮನವಿ
ಕಲಬುರಗಿ, ಸೆ. 22- ನಗರದ ವಾರ್ಡ ನಂ. 49 ರಲ್ಲಿ ಬರುವ ವಿಶಾಲನಗರ, ರೆಹಮತ್‍ನಗರ ಬಡಾವಣೆಯ 5 ನೇ ಕ್ರಾಸ ಬಳಿಯ ಸರಕಾರಿ ಮರಾಠಿ ಶಾಲೆ ಹತ್ತಿರ ಸುಮಾರು 100 ವರ್ಷದ ಹಳೆಯ ಭಾವಿಯು ಮುಚ್ಚಿ ಹೋಗಿದ್ದು, ಇದರ ದುರಸ್ತಿ ಮಾಡಿಸಿ ಬಡಾವಣೆ ಹಾಗೂ ಅಕ್ಕ ಪಕ್ಕದ ನಾಗರಿಕರಿಗೆ ಅನುಕೂಲ ಮಾಡಿಕೊಡಲು ಕ್ರಮ ಕೈಗೊಳ್ಳುವಂತೆ ಜೈ ಕನ್ನಡಿಗರ ಸೇನೆ ಮಹಾನಗರ ಪಾಲಿಕೆ ಆಯುಕ್ತರಿಗೆ ಮನವಿ ಸಲ್ಲಿಸಿದೆ.
ಈ ಬಡಾವಣೆಯ ಜನರು ನೀರಿನ ತೊಂದರೆ ಅನುಭವಿಸುತಿದ್ದು, ಇಲ್ಲಿನ ಪಾಳು ಬಿದ್ದಿರುವ ಬಾವಿ ದುರಸ್ತಿ ಗೊಳಿಸಿದರೆ ತುಂಬಾ ಅನುಕೂಲ ಆಗುತ್ತದೆ ಎಂದು ಸೇನೆ ಅಧ್ಯಕ್ಷ ದತ್ತು ಎಚ್.ಭಾಸಗಿ ಅವರು ಸಲ್ಲಿಸಿದ ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಈ ಭಾವಿಯನ್ನು ಪುನಃ ಆರಂಭಗೊಳಿಸಿ ಪೈಪಲೈನ್ ಮಾಡಿ ಅಲ್ಲಿನ ಜನರಿಗೆ ನೀರಿನ ವ್ಯವಸ್ಥೆ ಮಾಡಿಕೊಡುವಮತೆ ಮನವಿ ಮಾಡಿದ್ದಾರೆ.
ಈ ಸಂದರ್ಭದಲ್ಲಿ ಸೇನೆ ರಾಜ್ಯಾಧ್ಯಕ್ಷರಾದ ದತ್ತು ಹೆಚ್. ಭಾಸಗಿ, ರಾಮಾ ಪೂಜಾರಿ ಹುಸೇನ, ಅನೀಲ ತಳವಾರ, ಮಲ್ಲು ಆಲಗೂಡ, ಶಿವು ಮಡಕಿ, ಶಂಕರ, ಪ್ರವೀಣ ಭರಣಿ ಸೇರಿದಂತೆ ಹಲವರಿದ್ದರು.