ಶಾಸಕ ಮುನಿರತ್ನ ವಜಾಕ್ಕೆ ಒತ್ತಾಯ
ಆಳಂದ:ಸೆ.22: ದಲಿತ ಹಾಗೂ ವಕ್ಕಲಿಗ ಸಮುದಾಯವನ್ನು ಅವಳನಕಾರಿ ನಿಂಧನೆ ಕೈಗೊಂಡಿರುವ ಶಾಸಕರಾದ ಮುನಿರತ್ನ ಅವರನ್ನು ಕೂಡಲೇ ಶಾಸಕ ಸ್ಥಾನದ ಸದಸ್ಯತ್ವವನ್ನು ರದ್ದುಗೊಳಿಸಬೇಕು ಎಂದು ಛಲವಾದಿ ಮಹಾಸಭಾ ತಾಲೂಕು ಅಧ್ಯಕ್ಷ ಚಂದ್ರು ಜಂಗಲೆ ಅವರು ಒತ್ತಾಯಿಸಿದ್ದಾರೆ.
ಈ ಕುರಿತು ನೀಡಿದ ಹೇಳಿಕೆಯಲ್ಲಿ, “ಮುನಿರತ್ನ ಅವರ ದಲಿತ ಮತ್ತು ವಕ್ಕಲಗಾ ಸಮುದಾಯ ವ್ಯಕ್ತಿಯ ವಿರುದ್ಧ ಮಾಡಿರುವ ಅಸಭ್ಯ ಮತ್ತು ಅವಮಾನಕಾರಿ ಹೇಳಿಕೆಗಳು ಸಮಾಜದಲ್ಲಿ ಅಸಹನೆ ಮತ್ತು ವೈಮನಸು ಹರಡುವ ದೃಷ್ಟಿಕೋನವನ್ನು ಪ್ರತಿನಿಧಿಸುತ್ತವೆ. ಅವರಂಥವರು ಶಾಸಕರಾಗಿ ಮುಂದುವರಿಯುವುದು ಸಮಾಜಕ್ಕೆ ಅನಿಷ್ಟಕರವಾಗಿದೆ. ಅವರ ನಡೆ ಸಂವಿಧಾನದ ನೈತಿಕತೆ ಮತ್ತು ಮಾನವೀಯ ಮೌಲ್ಯಗಳಿಗೆ ವಿರುದ್ಧವಾಗಿದೆ, ಮತ್ತು ಇದು ದಲಿತ ಸಮುದಾಯದ ಗೌರವವನ್ನು ಹರಾಜು ಹಾಕುವ ಪ್ರಯತ್ನವಾಗಿದೆ. ಸರ್ಕಾರ ಕೂಡಲೇ ಕ್ರಮ ಕೈಗೊಂಡು ಮುನಿರತ್ನ ಅವರನ್ನು ಶಾಸಕರ ಸ್ಥಾನದಿಂದ ವಜಾ ಮಾಡಬೇಕೆಂದು ಅವರು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.