ಕಡಗಂಚಿ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಉಚಿತ ಕಣ್ಣಿನ ತಪಾಸಣೆ
ಆಳಂದ:ಸೆ.22: ಕಾರ್ಮೆಲ್ ಜ್ಯೊತಿ ಪಬ್ಲಿಕ್ ಚಾರಿಟೇಬಲ್ ಟ್ರಸ್ಟ್ ನ ಘಟಕ ಕಾರ್ಮೆಲ್ ಸನ್ನಿಧಿ ಸಮಾಜ ಸೇವಾ ಸಂಸ್ಥೆ ಕಡಗಂಚಿ, ದ್ರಷ್ಟಿ ಕಣ್ಣಿನ ಆಸ್ಪತ್ರೆ ಕಲಬುರ್ಗಿ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಅಂಧತ್ವ ನಿಯಂತ್ರಣ ಕಾರ್ಯಕ್ರಮ ಕಲಬುರ್ಗಿ, ತಾಲ್ಲೂಕು ವೈದ್ಯಾಧಿಕಾರಿಗಳ ಕಛೇರಿ ಅಳಂದ್, ಪ್ರಾಥಮಿಕ ಆರೋಗ್ಯ ಕೇಂದ್ರ ಕಡಗಂಚಿ ಇವರ ಸಹಯೋಗದೊಂದಿಗೆ ಉಚಿತ ಕಣ್ಣಿನ ತಪಾಸಣಾ ಶಿಬಿರವನ್ನು ಏರ್ಪಡಿಸಲಾಗಿತ್ತು.
ಕಾರ್ಯಕ್ರಮವನ್ನು ಕಡಗಂಚಿ ಗ್ರಾಮ ಪಂಚಾಯತಿ ಅಧ್ಯಕ್ಷರಾದ ಇಂದುಮತಿ ಗಿಡಕ್ಕೆ ನೀರು ಹಾಕಿ ಉದ್ಘಾಟಿಸಿದರು. ಶಿಬಿರದಲ್ಲಿ 192 ಜನರು ಕಣ್ಣಿನ ತಪಾಸಣೆ ಮಾಡಿಸಿದರು. ಕಣ್ಣಿನ ಪೊರೆ ಇರುವ 50 ಜನರನ್ನು ಶಸ್ತ್ರಚಿಕಿತ್ಸೆಗೆ ಆರಿಸಲಾಯಿತು. ಇವರ ಶಸ್ತ್ರಚಿಕಿತ್ಸೆ ಸೋಮವಾರ ನಡೆಯಲಿದೆ. 72 ಜನರಿಗೆ ಚೆಸ್ಮ ನೀಡಲಾಗುವುದು.
ಕಾರ್ಯಕ್ರಮದಲ್ಲಿ ಮೌಂಟ್ ಕಾರ್ಮೆಲ್ ಶಾಲೆಯ ವ್ಯವಸ್ಥಾಪಕರು ಫಾ. ದೀಪಕ್ ಥಾಮಸ್, ಕಾರ್ಮೆಲ್ ಜ್ಯೋತಿ ಟ್ರಸ್ಟ್ ನ ಕಾರ್ಯದರ್ಶಿ ಫಾ. ವಿಲಿಯಂ ಮಿರಾಂದ, ಡಾ. ಶಿಲ್ಪ, ಎಲ್. ಹೆಚ್.ಬಿ. ಸವಿತ, ಕಣ್ಣಿನ ತಜ್ಞರಾದ ಶ್ರೀ. ನಾಗೇಶ್, ಶಿರಾಜ್ ದಸ್ತಗಿರಿ,ಧನ್ ಶಾಮ್, ಅನಿಶಾ ಅರ್ಚನಾ ಹಾಗೂ ತಂಡದವರು ಉಪಸ್ಥಿತರಿದ್ದರು.