ಬೀದಿಯಲ್ಲಿ ಕಸ ಹಾಕಿದವರಿಗೆ ದಂಡ ಹಾಕಿದ ಪಾಲಿಕೆ
* 35 ವಾರ್ಡಿನಲ್ಲಿ ದಂಡ ಪ್ರಕ್ರಿಯೆ ಆರಂಭ
* ಸದಸ್ಯ ಶ್ರೀನಿವಾಸುಲು ಮಿಂಚು ನೇತೃತ್ವ
* 11 ಜನರಿಗೆ 300 ರೂ ದಂಡ
* ಪ್ರತಿವಾರ್ಡಿನಲ್ಲೂ ಹೀಗಾಗಬೇಕು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಸೆ.22: ಸ್ವಚ್ಚ ಸುಂದರ ನಗರ ಎಂಬ ಘೋಷಣೆ ಪಾಲಿಕೆಯ ಅಧಿಕಾರಿಗಳು, ಸದಸ್ಯರು, ಶಾಸಕರು, ಸಂಸದರಿಂದ ಸಭೆಗಳಲ್ಲಿ ಮೊಳಗಿದರೂ ಅದು ಅನುಷ್ಟಾನಕ್ಕೆ ಬರುವುದು ಮಾತ್ರ ಆಗಿಲ್ಲ. ಅದಕ್ಕೆ ಜನರ ಸಹಕಾರವೂ ಸಂಪೂರ್ಣವಾಗಿ ದೊರೆಯದಿರುವುದೂ ಕಾರಣವಾಗಿದೆ.
ಅದಕ್ಕಾಗಿ ನಗರದ 35ನೇ ವಾರ್ಡಿನ ಮಹಾನಗರ ಪಾಲಿಕೆಯ ಸದಸ್ಯ ಮಿಂಚು ವಿ.ಶ್ರೀನಿವಾಸುಲು.  ತಮ್ಮ  ವಾರ್ಡು  ಸ್ವಚ್ಚವಾಗಿರಬೇಕು. ಜನತೆ ದಿನ ನಿತ್ಯ  ಬರುವ ಪಾಲಿಕೆಯ ವಾಹನಗಳಲ್ಲಿಯೇ ಕಸ ಹಾಕಬೇಕು ಎಂದು ಮನೆ ಮನೆಗೆ ತೆರಳಿ ಹೇಳಿದ್ದಾರೆ.
ಆದರೂ ಜನತೆ ಅಲ್ಲಲ್ಲಿ ಕಸವನ್ನು ರಸ್ತೆಗಳಲ್ಲಿಯೇ ಚಲ್ಲಿ ಹೋಗುತ್ತಿದ್ದುದು ಅಸ್ವಚ್ಚತೆಗೆ ಕಾರಣವಾಗಿತ್ತು. ಎಷ್ಟು ಬಾರಿ ಜಾಗೃತಿ‌ಮೂಡಿಸಿದರೂ ಕೆಲ ಜನ ತಮ್ಮ ಕೆಟ್ಟ ಬುದ್ದಿ ಬಿಟ್ಟಿರಲಿಲ್ಲ.
ಅದಕ್ಕಾಗಿ ಶ್ರೀನಿವಾಸುಲು  ಪಾಲಿಕೆಯ ಆರೋಗ್ಯಾಧಿಕಾರಿ ಮುನಾಫ್ ಪಟೇಲ್ ಹಾಗು ಪರ್ವೀನ್ ಶೇಖ್ ಅವರ ಜೊತೆಗೂಡಿ. ಕಸವನ್ನು ರಸ್ತೆಯಲ್ಲಿ ಹಾಕುವವರಿಗೆ ದಂಡಹಾಕಿ ಬುದಿ ಕಲಿಸುವ ಪ್ರಕ್ರಿಯೆ ಇಂದು‌ ನಡೆಸಿದರು.
ವಾರ್ಡಿನ ಎಂ ಕೆ ನಗರದಲ್ಲಿ ಗೃಹಿಣಿಯೊಬ್ಬರು ಕಸವನ್ನು ರಸ್ತೆಗೆ ಹಾಕುತ್ತಿರುವ ಸಂದರ್ಭ ಅದನ್ನು ತಡೆದು ಅಧಿಕಾರಿಗಳಿಂದ ಅವರಿಗೆ 300 ರೂ ದಂಡವನ್ನು ಹಾಕಿಸಿ ಮತ್ತೊಮ್ಮೆ ಈ ತರ ಹಾಕಬಾರದು ಮತ್ತು ಹಾಕಿಸಬಾರದು ಎಂದು ಶ್ರೀನಿವಾಸುಲು ತಿಳಿಸಿ ಜಾಗೃತಿ ಮೂಡಿಸಿದರು.
ಇದೇ ರೀತ  ವಾರ್ಡನ ಹಲವಡೆ ಸಂಚರಿಸಿ  11 ಜನರಿಗೆ ಕಸವನ್ನು ರಸ್ತೆ ಬದಿಯಲ್ಲಿ ಹಾಕಿದ್ದಕ್ಕೆ ದಂಡ ವಿಧಿಸಿ ಮತ್ತೊಮ್ಮೆ ಈ ರೀತಿ ಮಾಡಬೇಡಿ. ದಿನ‌ನಿತ್ಯ ಬರುವಬಕಸದ ವ್ಯಾನಿನಲ್ಲೇ ಹಾಕಿ ಎಂದು ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ವಾರ್ಡಿನ ಪ್ರಮುಖರು,ಮಹಾನಗರ ಪಾಲಿಕೆ ಸಿಬ್ಬಂದಿಗಳಾದ ಬಸವರಾಜ್ ತಾಂಬಾಕಿ ,ಕಿರಣ್ ಕುಮಾರ್,ಹಾಗು ಸ್ಥಳೀಯರು ಉಪಸ್ಥಿತರಿದ್ದರು.
ಇದೇ ರೀತಿ‌ ನಗರದ ಇನ್ನಿತರ ವಾರ್ಡ್ ಗಳಲ್ಲಿ ಕಾರ್ಯಾಚರಣೆ ಮಾಡಿ ದಂಡ ವಿಧಿಸಿ ಮೂಲಕ ಜಾಗೃತಿ‌ ಮೂಡಿಸಿದರೆ ಶಾಸಕ ಭರತ್ ರೆಡ್ಡಿ ಅವರ ಸ್ವಚ್ಚ ಸುಂದರ ಬಳ್ಳಾರಿ‌ನಗರದ  ಕಲ್ಪನೆ ಸಾಕಾರವಾಗವ ಸಾಧ್ಯತೆ ಇದೆ.