ಸ್ಫೂರ್ತಿ ಉತ್ಸವದಲ್ಲಿ ವಿದ್ಯಾರ್ಥಿಗಳ ಪ್ರತಿಭೆ ಅನಾವರಣ

ಸಂಜೆವಾಣಿ ವಾರ್ತೆ
ಚಿತ್ರದುರ್ಗ.ಮೇ.೮: ನಗರದ ಎಸ್.ಜೆ.ಎಂ.ತಾಂತ್ರಿಕ ಮಹಾವಿದ್ಯಾಲಯದಲ್ಲಿ ಸ್ಫೂರ್ತಿ-2024 ಕ್ರೀಡಾ ಮತ್ತು ಸಾಂಸ್ಕೃತಿಕ ಉತ್ಸವವನ್ನು ಆಯೋಜಿಸಲಾಗಿತ್ತು. ಈ ವೇಳೆ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಪ್ರಾಚಾರ್ಯರಾದ ಡಾ.ಭರತ್ ಪಿ ಬಿ ಮಾತನಾಡಿ, ಸ್ಫೂರ್ತಿ ಉತ್ಸವವು ವಿದ್ಯಾರ್ಥಿಗಳು ತಮ್ಮಲ್ಲಿನ ಕ್ರೀಡಾ ಮತ್ತು ಸಾಂಸ್ಕೃತಿಕ ಪ್ರತಿಭೆಯನ್ನು ಅನಾವರಣಗೊಳಿಸಲು ಉತ್ತಮ ವೇದಿಕೆಯಾಗಿದೆ. ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಪಠ್ಯಕ್ರಮದ ಹಾಗೂ ಪರೀಕ್ಷಾ ಒತ್ತಡಗಳಿಂದ ಹೊರಬರಲು ವಿವಿಧ ಕ್ರೀಡಾ ಮತ್ತು ಸಾಂಸ್ಕೃತಿಕ ಚಟುವಟಿಕೆಗಳನ್ನು ಆಯೋಜಿಸಲಾಗಿದೆ. ವಿದ್ಯಾರ್ಥಿಗಳು ಇಂತಹ ಕಾರ್ಯಕ್ರಮಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ ಕಾರ್ಯಕ್ರಮದ ಸದುಪಯೋಗ ಪಡೆದುಕೊಳ್ಳಿ ಎಂದು ನುಡಿದರು.ಮುಖ್ಯ ಅತಿಥಿಯಾಗಿ ಆಗಮಿಸಿದ್ದ ರುದ್ರಾಕ್ಷ್ ಅಡ್ವೆöÊರ‍್ಸ್ನ ಸಿಇಒ  ರುದ್ರಮುನಿ ಬಿ ಮಾತನಾಡಿ, ವಿದ್ಯಾರ್ಥಿಗಳು ಕ್ರೀಡೆ ಅಥವಾ ಇನ್ಯಾವುದೇ ಸ್ಪರ್ಧೆ ಇರಲಿ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಬೇಕು. ಸೋಲು ಕಂಡರು ನಮ್ಮ ಪ್ರಯತ್ನ ಮುಂದುವರೆಸಬೇಕು. ನಮ್ಮ ಪಾಲ್ಗೊಳ್ಳುವಿಕೆ ಮುಖ್ಯ. ಸತತ ಪ್ರಯತ್ನ ನಮಗೆ ಉತ್ತಮ ಫಲ ನೀಡುವುದರ ಜೊತೆಗೆ ಅನುಭವ ನೀಡುತ್ತದೆ. ಪ್ರಯತ್ನ ಮಾಡುವುದನ್ನು ಹವ್ಯಾಸವನ್ನಾಗಿ ಮಾಡಿಕೊಳ್ಳಬೇಕು ಎಂದು ತಿಳಿಸಿದರು.ಕಾರ್ಯಕ್ರಮದಲ್ಲಿ ಸ್ಫೂರ್ತಿ-2024ರ ಮುಖ್ಯ ಸಂಚಾಲಕ ಡಾ. ಬಿ.ಜಿ.ಕುಮಾರಸ್ವಾಮಿ, ಇಲಾಖಾ ಮುಖ್ಯಸ್ಥರುಗಳಾದ ಡಾ.ಜಗನ್ನಾಥ್ ಎನ್, ಪ್ರೊ.ಪೋರಾಳ್ ನಾಗರಾಜ್, ಡಾ.ಸಿದ್ದೇಶ್ ಕೆ ಬಿ, ಡಾ.ಶ್ರೀಶೈಲ ಜೆ ಎಂ, ಡಾ.ಲೋಕೇಶ್ ಹೆಚ್.ಜೆ., ಪ್ರೊ.ಶಶಿಧರ್ ಎ ಪಿ, ಡಾ.ನಿರಂಜನ್ ಕೆ ಈ, ದೈಹಿಕ ಶಿಕ್ಷಣ ನಿರ್ದೇಶಕ ಡಾ. ಕುಮಾರಸ್ವಾಮಿ ಕೆ, ಉದ್ಯೋಗ ಮತ್ತು ತರಬೇತಿ ಅಧಿಕಾರಿ ಡಾ.ಅರವಿಂದ್ ಟಿ ವಿ,  ಸುನಿಲ್ ಜೆ ಬಿ, ಪ್ರೊ. ಸುಷ್ಮಿತಾ ದೇಬ್ ಮುಂತಾದವರು ಉಪಸ್ಥಿತರಿದ್ದರು.