ಎಣಿಕೆ ಕೇಂದ್ರ ಸೇರಿದ 1972 ಮತ ಯಂತ್ರಗಳು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.08: ನಿನ್ನೆ ನಡೆದ ಬಳ್ಳಾರಿ ಲೋಕಸಭಾ ಕ್ಷೇತ್ರದ ಮತದಾನದ 1972 ಮತಯಂತ್ರಗಳು ಇಂದು ಬೆಳಗಿನ ಜಾವದವರೆಗೆ ಮತ ಎಣಿಕೆ ಕೇಂದ್ರದ ಭದ್ರತಾ ಕೋಣೆಗಳಲ್ಲಿ ಸೇರಿವೆ.
ವೀರಶೈವ ವಿದ್ಯಾವರ್ಧಕ ಸಂಘದ ನಗರದ ವೈ.ಮಹಾಬಲೇಶ್ವರಪ್ಪ ಇಂಜಿನೀಯರಿಂಗ್ ಕಾಲೇಜು ಮತೆಣಿಕೆ ಕೇಂದ್ರವಾಗಿದ್ದು. ಕ್ಷೇತ್ರದ ಎಂಟು ವಿಧಾನಸಭಾ ಕ್ಷೇತ್ರಗಳ ಮತಯಂತ್ರವನ್ನು ಒಂದೊಂದು ಸ್ಟ್ರಾಂಗ್ ರೂಂನಲ್ಲಿ  ಮತಗಟ್ಟೆ ಸಂಖ್ಯೆಗೆ ಅನುಗುಣವಾಗಿ ಜೋಡಿ ಇರಿಸಲಾಗಿದೆ.
ಜೂನ್ 4 ರಂದು ಮತಗಳ ಎಣಿಕೆ ಬೆಳಿಗ್ಗೆ 8 ರಿಂದ ಆರಂಭಗೊಳ್ಳಲಿದೆ.
ಭದ್ರತೆ:
ಮತಯಂತ್ರಗಳ ಸ್ಟ್ರಾಂಗ್ ರೂಂ ಗೆ ಮೂರು ಅವಧಿಯ ಭದ್ರತಾ ಸಿಬ್ಬಂದಿಯನ್ನು ನೇಮಕ ಮಾಡಿದೆ‌.