ಮತದಾನದ ಗೌಪ್ಯತೆ ಉಲ್ಲಂಘನೆಪಾಲಿಕೆ ಸದಸ್ಯನ ಮೇಲೆ ಕೇಸು
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.08 : ಗೌಪ್ಯ ಮತದಾನದ   ನಿಯಮ ಉಲ್ಲಂಘನೆ‌ ಆರೋಪದ ಮೇಲೆ ಇಲ್ಲಿನ‌ ಪಾಲಿಕೆ ಸದಸ್ಯ ಕೋನಂಕಿ ತಿಲಕ್ ಅವರ ಮೇಲೆ ಕೌಲ್ ಬಜಾರ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಮಹಾನಗರ ಪಾಲಿಕೆಯ 10 ನೇ ವಾರ್ಡಿನ  ಸದಸ್ಯ ಕೋನಂಕಿ ತಿಲಕ್ ನಿನ್ನೆ ವಾಸವಿ ಶಾಲೆಯ ಮತಗಟ್ಟೆ ಸಂಖ್ಯೆ 63 ರಲ್ಲು  ಮತಚಲಾಯಿಸಲು ಹೋಗಿ ಇವಿಎಂ ಮಿಷನ್ ನಲ್ಲಿರುವ ಬಿಜೆಪಿಯ ಕಮಲದ ಚಿನ್ನೆ ಬಟನ್ ಮೇಲೆ ಬೆರಳಿಟ್ಟು ಪೋಟೋ ಕ್ಲಿಕ್ಕಿಸಿ.ಡನ್ ಮೈ ಡ್ಯೂಟಿ, ವೋಟ್ ಫಾರ್ ಶ್ರೀರಾಮುಲು ಎಂದು  ಪೋಟೋ ಕ್ಯಾಪ್ಷನ್ ಕೊಟ್ಟು ವಾಟ್ಸ್ ಆ್ಯಪನಲ್ಲಿ ಸ್ಟೇಟಸ್ ಇಟ್ಟುಕೊಂಡಿದ್ದರು.
 ಅದಕ್ಕಾಗಿ ಮತದಾರರಿಗೆ ಶ್ರೀರಾಮುಲು ಅವರಿಗೆ ಮತ ಚಲಾಯಿಸಲು ಅನಗತ್ಯ ಪ್ರಭಾವ ಬೀರಿದ್ದಾರೆ ಎಂದು. ಪ್ಲೈಯಿಂಗ್ ಸ್ಕ್ವಾರ್ಡನ್ ಅಧಿಕಾರಿ ಮಹೇಶ್ ಪಾಟೀಲ್ ದೂರು ನೀಡಿದ್ದಾರೆ.