ಐ.ಸಿ.ಎಸ್.ಇ.ಯಲ್ಲಿ ಬಿ.ಪಿ.ಎಸ್.ಸಿ.ಗೆ ಶೇ.100 ಫಲಿತಾಂಶ
ಸಂಜೆವಾಣಿ ವಾರ್ತೆ
ಬಳ್ಳಾರಿ, ಮೇ.08: ನಗರದ ಡಾ|| ರಾಜಕುಮಾರ್ ರಸ್ತೆಯಲ್ಲಿರುವ ಬಸವರಾಜೇಶ್ವರಿ ಪಬ್ಲಿಕ್ ಸ್ಕೂಲ್ ಅಂಡ್ ಕಾಲೇಜ್ ನ ಐ.ಸಿ.ಎಸ್.ಇ 10 ನೇ ತರಗತಿಯ ಪರೀಕ್ಷೆ ಬರೆದ ಎಲ್ಲಾ 174 ವಿದ್ಯಾರ್ಥಿಗಳು ಉತ್ತೀರ್ಣರಾಗಿ ಶೇ. 100% ರಷ್ಟು  ಫಲಿತಾಂಶ ಪಡೆದಿದ್ದಾರೆ ಎಂದು ಶಾಲೆಯ ಪ್ರಾಂಶುಪಾಲರಾದ  ಜೆ. ಅನೀಲ್‍ಕುಮಾರ್‍ರವರು ತಿಳಿಸಿದ್ದಾರೆ. ಪರೀಕ್ಷೆಯಲ್ಲಿ ಜೆ.ಶ್ರೀವಲ್ಲಿ 571/600 ಅಂಕಗಳಿಸಿ ಪ್ರಥಮ ಸ್ಥಾನವನ್ನು ಗಳಿಸಿ ಶಾಲೆಗೆ ಕೀರ್ತಿ ತಂದಿರುತ್ತಾಳೆ.  ಮಹಾಲಕ್ಷ್ಮೀ.ಎ ಹಾಗೂ ಅಮಿದ್ಯಾಲ ಕೃತಿಕಾ ನಾಯ್ಡು 562/600 ಅಂಕಗಳಿಸಿ ಶಾಲೆಗೆ ದ್ವಿತೀಯ ಸ್ಥಾನವನ್ನು ಗಳಿಸಿದ್ದಾರೆ ಹಾಗೂ ತೇಜಸ್ ಮಜ್ಜಿಗಿ 552/600 ಅಂಕಗಳಿಸಿ ಶಾಲೆಗೆ ತೃತೀಯ ಸ್ಥಾನವನ್ನು ಗಳಿಸಿದ್ದಾರೆ. 
ಶಾಲೆಯ ಒಟ್ಟು 174 ವಿದ್ಯಾರ್ಥಿಗಳಲ್ಲಿ, 10 ವಿಧ್ಯಾರ್ಥಿಗಳು ಶೇಕಡಾ 90 ಅಂಕಗಳು, 52 ವಿಧ್ಯಾರ್ಥಿಗಳು ಉನ್ನತ ಶ್ರೇಣಿಯಲ್ಲಿ, 73 ವಿಧ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಹಾಗೂ 39 ವಿಧ್ಯಾರ್ಥಿಗಳು ದ್ವಿತೀಯ ಶ್ರೇಣಿಯಲ್ಲಿ ಉತ್ತೀರ್ಣರಾಗಿರುತ್ತಾರೆ.
ಶಾಲೆಯು ಸತತವಾಗಿ 14 ನೇ ವರ್ಷವೂ ಸಹ 100 ರಷ್ಟು ಫಲಿತಾಂಶವನ್ನು ಪಡೆಯುತ್ತಿದ್ದು ಇದಕ್ಕೆ ಕಾರಣರಾದ ಪ್ರಾಂಶುಪಾಲರನ್ನು, ಶಿಕ್ಷಕರನ್ನು, ಪೋಷಕರನ್ನು ಹಾಗೂ ವಿದ್ಯಾರ್ಥಿಗಳನ್ನು ಶಾಲೆಯ ಆಡಳಿತ ಮಂಡಳಿಯ ಅಧ್ಯಕ್ಷರಾದ ಡಾ|| ಎಸ್.ಜೆ ಮಹಿಪಾಲ್‍ರವರು, ಃIಖಿಒ ನಿರ್ದೇಶಕರಾದ ಡಾ|| ಯಶ್ವಂತ್ ಭೂಪಾಲ್‍ರವರು, ಹಾಗೂ ಟ್ರಸ್ಟಿಗಳಾದ ಶ್ರೀ ಅಶೋಕ ಭೂಪಾಲ್‍ರವರು ಅಭಿನಂದಿಸಿದ್ದಾರೆ.