ವಿವಿ ನೌಕರರ ವೇದಿಕೆಯಿಂದ ಪ್ರಸಾದ್‍ಗೆ ನುಡಿನಮನ
ಸಂಜೆವಾಣಿ ನ್ಯೂಸ್
ಮೈಸೂರು: ಮೇ.08:- ಇತ್ತೀಚೆಗೆ ನಿಧನರಾದ ಚಾಮರಾಜನಗರ ಸಂಸದ ವಿ. ಶ್ರೀನಿವಾಸಪ್ರಸಾದ್ ಅವರು ಸಾಂಸ್ಕೃತಿಕ ಮನಸ್ಸಿನ ರಾಜಕಾರಣಿಯಾಗಿದ್ದರು. ವೈಚಾರಿಕ ಮತ್ತು ನೈತಿಕತೆಗೆ ನಿದರ್ಶನವಾಗಿದ್ದರು, ಕೇವಲ ದಲಿತ ವರ್ಗಕ್ಕೆ ಮಾತ್ರವಲ್ಲದೆ ಎಲ್ಲಾ ವರ್ಗದ ನಾಯಕರಾಗಿದ್ದರು.
ಇದು ವಿಶ್ವಮಾನವ ಮೈಸೂರು ವಿಶ್ವವಿದ್ಯಾನಿಲಯ ನೌಕರರ ವೇದಿಕೆಯು ಮಂಗಳವಾರ ಸಂಜೆ ಕಾಲೇಜು ಎದುರು ಏರ್ಪಡಿಸಿದ್ದ ನುಡಿನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಗಣ್ಯರು ವ್ಯಕ್ತಪಡಿಸಿದ ಅಭಿಪ್ರಾಯ.
ಮೈಸೂರು ವಿವಿ ಗಾಂಧಿ ಭವನ ಹಾಗೂ ಪ್ರಾಚ್ಯವಿದ್ಯಾ ಸಂಶೋಧನಾಲಯದ ನಿವೃತ್ತ ನಿರ್ದೇಶಕ ಪೆÇ್ರ.ಎಸ್. ಶಿವರಾಜಪ್ಪ ಮಾತನಾಡಿ, ಅತ್ಯಂತ ಕಿರಿಯ ವಯಸ್ಸಿನಲ್ಲಿಯೇ ಸಂಸದರಾದ ವಿ. ಶ್ರೀನಿವಾಸಪ್ರಸಾದ್ ಅವರು ಬುದ್ಧ, ಬಸವ, ಅಂಬೇಡ್ಕರ್ ತತ್ವಗಳನ್ನು ಪಾಲಿಸುವ ಮೇರು ಸದೃಶ ವ್ಯಕ್ತಿಯಾಗಿ ಬೆಳೆದರು. ಅಪಾರ ಜ್ಞಾನವುಳ್ಳವರಾಗಿದ್ದರು. ತುಂಬಾ ಚೆನ್ನಾಗಿ ಓದಿಕೊಂಡಿದ್ದರು. ಅವರು ಮಾಡಿದ ಭಾಷಣಗಳನ್ನು ಸಿ.ಡಿಯಾಗಿ ಮಾಡಿದ್ದರೆ ಲಕ್ಷಾಂತರ ಮಂದಿಗೆ ತಲುಪಿಸಬ ಅನುಕೂಲವಾಗುತ್ತಿತ್ತು. ಅಂತಹ ಪ್ರಚರ ವೈಚಾರಿಕತೆ, ಚಿಂತನಾಶೀಲತೆ ಅವರ ಮಾತುಗಳಲ್ಲಿ ಇತ್ತು ಎಂದರು.
ಮೈಸೂರು ವಿವಿ ಪರೀಕ್ಷಾಂಗ ಕುಲಸಚಿವ ಡಾ.ಬಸಪ್ಪ ಮಾತನಾಡಿ, ಅಶೋಕಪುರಂನಲ್ಲಿ ಜನಿಸಿದ ವಿ. ಶ್ರೀನಿವಾಸಪ್ರಸಾದ್ ಅವರು ಬೂಸಾ ಹೋರಾಟ ಸಂದರ್ಭದಲ್ಲಿ ಬಿ. ಬಸವಲಿಂಗಪ್ಪನವರನ್ನು ಬೆಂಬಲಿಸುವ ಮೂಲಕ ಸಾರ್ವಜನಿಕ ಜೀವನಕ್ಕೆ ಬಂದು ಹಂತ, ಹಂತವಾಗಿ ಬೆಳೆದು, ಆರು ಬಾರಿ ಸಂಸದರು, ಎರಡು ಬಾರಿ ಶಾಸಕರು, ಕೇಂದ್ರ ಹಾಗೂ ರಾಜ್ಯದಲ್ಲಿ ಮಂತ್ರಿಗಳಾಗಿ ಕೆಲಸ ಮಾಡಿ ಜನಾನುರಾಗಿಯಾಗಿದ್ದರು. ಅವರ ನಿಧನದ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಗಣ್ಯರು ನೀಡಿರುವ ಸಂತಾಪ ಸೂಚಕಗಳನ್ನು ಗಮನಿಸಿದರೆ ಅವರ ವ್ಯಕ್ತಿತ್ವದ ಅರಿವಾಗುತ್ತದೆ ಎಂದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಡಾ.ವೈ.ಡಿ. ರಾಜಣ್ಣ ಮಾತನಾಡಿ, ಶ್ರೀನಿವಾಸಪ್ರಸಾದ್ ಅವರು ಸಾಂಸ್ಕೃತಿಕ ಮನಸ್ಸಿನ ರಾಜಕಾರಣಿಯಾಗಿದ್ದರು. ನಡೆ- ನುಡಿ ಎಲ್ಲದರಲ್ಲೂ ಆದರ್ಶವಾಗಿದ್ದರು. ನಾನು ಜಿಲ್ಲಾ ಕಸಾಪ ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಜಿಲ್ಲೆಯ ಸಾಂಸ್ಕತಿಕ ಜನಪ್ರತಿನಿಧಿ ಎಂದು ಗೌರವಕೊಟ್ಟು. ನಂಜನಗೂಡಿನಲ್ಲಿ ಜಿಲ್ಲಾ ಸಮ್ಮೇಳನ ಯಶಸ್ವಿಯಾಗಲು ಕಾರಣರಾಗಿದ್ದರು ಎಂದು ಸ್ಮರಿಸಿದರು.
ಚಾಮರಾಜನಗರ ಲೋಕಸಭಾ ಕ್ಷೇತ್ರದ ಬನ್ನೂರು ವಿಧಾನಸಭಾ ವ್ಯಾಪ್ತಿಯ ಯಾಚೇನಹಳ್ಳಿವನಾದ ನಾನು ಚಿಕ್ಕಂದಿನಿಂದಲೂ ಪ್ರಸಾದ್ ಅವರನ್ನು ನೋಡಿಕೊಂಡು ಬೆಳೆದವನು. ಅವರು ಸಿನಿಮಾ ನಟನಂತೆ ಇದ್ದರು. ಎಲ್ಲ ವರ್ಗಕ್ಕೂ ಪ್ರೀತಿ ಪಾತ್ರರಾಗಿದ್ದರು. ಎಲ್ಲರೂ ಡಾ.ರಾಜ್‍ಕುಮಾರ್ ಏನು ಮಾಡಿದರು ಎನ್ನುತ್ತಾರೆ? ರಾಜ್‍ಕುಮಾರ್ ನನ್ನಂತಹ ಲಕ್ಷಾಂತರ ಮಂದಿಯ ಮೇಲೆ ಸಾಂಸ್ಕೃತಿಕ ಪ್ರಭಾವ ಬೀರಿದರು. ಅದೇ ರೀತಿ ಶ್ರೀನಿವಾಸಪ್ರಸಾದ್ ಏನು ಮಾಡಿದ್ದಾರೆ? ಎನ್ನುವವರು ಕೂಡ ಧ್ವನಿ ಇಲ್ಲದವರಿಗೆ ಧ್ವನಿಯಾಗಿದ್ದನ್ನು ಗಮನಿಸಬೇಕು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ಮಾತನಾಡಿ, ಶ್ರೀನಿವಾಸಪ್ರಸಾದ್ ಅವರು ಇಡೀ ಕರ್ನಾಟಕ ಅಷ್ಟೇ ಇಲ್ಲದೇ ಇಡೀ ದಕ್ಷಿಣ ಭಾರತದ ವೈಚಾರಿಕ ರಾಜಕಾರಣಿ ಎನ್ನಬಹುದು. ಜಾತ್ಯತೀ.ತ ನಿಲುವು ಹೊಂದಿದ್ದರು. ಅವರಿಗೆ ಮೈಸೂರು ವಿವಿ ಮರಣೋತ್ತರವಾಗಿ ಗೌರವ ಡಾಕ್ಟರೇಟ್ ನೀಡಪಬೇಕು ಎಂದು ಆಗ್ರಹಿಸಿದರು.
ಜಿಲ್ಲಾ ಕಸಾಪ ಮಾಜಿ ಅಧ್ಯಕ್ಷ ಎಂ. ಚಂದ್ರಶೇಖರ್,ಹಿರಿಯ ಪತ್ರಕರ್ತ ಅಂಶಿ ಪ್ರಸನ್ನಕುಮಾರ್, ಪ್ರಾಂಶುಪಾಲರಾದ ಮಹಾರಾಜ ಕಾಲೇಜಿನ ಪೆÇ್ರ.ಎಚ್. ಸೋಮಶೇಖರಪ್ಪ, ಯುವರಾಜ ಕಾಲೇಜಿನ ಪೆÇ್ರಎಂ.ಕೆ. ಮಹೇಶ್, ಸಂಜೆ ಕಾಲೇಜಿನ ಪೆÇ್ರ.ಎಸ್. ಮಹದೇವಮೂರ್ತಿ, ಮೈವಿವಿ ಸಿಂಡಿಕೇಟ್ ಸದಸ್ಯ ಮಹದೇಶ್, ಗಂಗೋತ್ರಿ ಸಮಾಜ ಕಾರ್ಯ ವಿಭಾಗದ ಪ್ರಾಧ್ಯಾಪಕಿ ಡಾ.ಎಚ್.ಪಿ. ಜ್ಯೋತಿ,. ಮಹಾರಾಣಿ ಕಾಲೇಜಿನ ಕಂಪ್ಯೂಟರ್ ಸೈನ್ಸ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ.ಕೆ. ಸಿದ್ದರಾಜು, ಯುವರಾಜ ಕಾಲೇಜಿನ ಕನ್ನಡ ಪ್ರಾಧ್ಯಾಪಕ ಡಾ.ಸಿ.ಡಿ. ಪರಶುರಾಮ ಇನ್ನಿತರರು ಉಪಸ್ಥಿತರಿದ್ದರು.