ಕನ್ನಡ ಸಾಹಿತ್ಯ ಪರಿಷತ್ ಸಂಸ್ಥಾಪಕ ದಿನಾಚರಣೆ
ವಿಜಯಪುರ,ಮೇ೮-ಪಟ್ಟಣದ ಕಸಾಪ ಘಟಕವು ಬೆಳದಿಂಗಳ ಕವಿಗೋಷ್ಠಿ, ಮನೆಯಿಂದ-ಮನೆಗೆ, ಶಾಲೆಯಿಂದ- ಶಾಲೆಗೆ, ಮಾಸಿಕ ಕನ್ನಡ ಸಾಹಿತ್ಯ ಕಾರ್ಯಕ್ರಮಗಳನ್ನು ಹಮ್ಮಿಕೊಂಡು, ಕನ್ನಡ ಮನಸುಗಳಿಗೆ ಕನ್ನಡ ಭಾಷೆ ಸಂಸ್ಕೃತಿ ಬಗ್ಗೆ ಅರಿವು ಮೂಡಿಸುತ್ತಿದೆ ಎಂದು ಮಹಂತಿಮಠ ಧರ್ಮ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವಿ.ವಿಶ್ವನಾಥ್ ತಿಳಿಸಿದರು.
ಅವರು ಪಟ್ಟಣದಲ್ಲಿರುವ ಅ ಶಿ ವೈ(ಅಯೋಧ್ಯಾ ನಗರ ಶಿವಾಚಾರ ವೈಶ್ಯ) ನಗರ್ತ ಮಹಂತಿನ ಮಠ ಧರ್ಮ ಸಂಸ್ಥೆಯ ಆವರಣದಲ್ಲಿ ವಿಜಯಪುರ ನಗರ ಕನ್ನಡ ಸಾಹಿತ್ಯ ಪರಿಷತ್ ಘಟಕವು ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ದಿನಾಚರಣೆಯಲ್ಲಿ ಪಾಲ್ಗೊಂಡು, ಮಾತನಾಡಿದರು.
ಈ ಕಾರ್ಯಕ್ರಮದಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳಾದ ಚಂದ್ರಶೇಖರ್ ಹಡಪದ್, ಕನ್ನಡ ಸಾಹಿತ್ಯ ಪರಿಷತ್ ಬೆಳೆದ ಬಂದ ದಾರಿ ಮತ್ತು ಕನ್ನಡ ಸಾಹಿತ್ಯ ಪರಿಷತ್ ೧೧೦ ವರ್ಷ ಪೂರೈಸಿದ ಅಂಗವಾಗಿ ಸಂಸ್ಥಾಪಕ ದಿನಾಚರಣೆಯ ಬಗ್ಗೆ ಉಪನ್ಯಾಸ ನೀಡುತ್ತಾ ಕರ್ನಾಟಕ ಭಾಷಾ ಸಂಸ್ಕರಣಕ್ಕಾಗಿ ಮತ್ತು ಕರ್ನಾಟಕ ಗ್ರಂಥಾ ವಳಿಯ ಅಭಿವೃದ್ಧಿಗಾಗಿ ಬೆಂಗಳೂರಿನಲ್ಲಿ* ಕರ್ನಾಟಕ ಸಾಹಿತ್ಯ ಪರಿಷತ್* ಎಂಬ ಹೆಸರಿನಲ್ಲಿ ಪ್ರಧಾನ ಸಭೆಯೊಂದು ಸ್ಥಾಪನೆಗೊಂಡಿತ್ತು. ಮುಂಬೈ, ಮದ್ರಾಸ್, ಹೈದರಾಬಾದ್, ಕೊಡಗು ಪ್ರಾಂತ್ಯಗಳಲ್ಲಿ ಕರ್ನಾಟಕ ಸಾಹಿತ್ಯ ಪರಿಷತ್ ಉದಯಗೊಂಡಿತ್ತು . ಇದರ ಉದ್ದೇಶ ಕನ್ನಡ ಭಾಷೆ, ಸಾಹಿತ್ಯ, ಕಲೆ, ಸಂಸ್ಕೃತಿ, ಇತಿಹಾಸ ಇವುಗಳ ರಕ್ಷಣೆ ಹಾಗೂ ಅಭಿವೃದ್ಧಿಕ್ಕಾಗಿ ಆರಂಭವಾಯಿತು. ೧೯೩೮ ರಲ್ಲಿ ಬಳ್ಳಾರಿಯಲ್ಲಿ ೨೩ನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ, ಕರ್ನಾಟಕ ಸಾಹಿತ್ಯ ಪರಿಷತ್ ಹೋಗಿ ಕನ್ನಡ ಸಾಹಿತ್ಯ ಪರಿಷತ್ ಎಂದು ನಾಮಕರಣಗೊಂಡಿತು.
ಅಂದಿನ ಮೈಸೂರು ರಾಜ್ಯದ ಮುಖ್ಯಮಂತ್ರಿಗಳಾದ ಕೆಂಗಲ್ ಹನುಮಂತಯ್ಯ ರವರು ಸಾಹಿತ್ಯ ಮತ್ತು ಸಂಸ್ಕೃತಿ ಅಭಿವೃದ್ಧಿಗಾಗಿ ಇಲಾಖೆಯನ್ನು ಪ್ರಾರಂಭಿಸಿದರು. ೧೯೭೬ರಲ್ಲಿ ಶಿವಮೊಗ್ಗದಲ್ಲಿ ೪೭ನೇ ಸಾಹಿತ್ಯ ಸಮ್ಮೇಳನದಲ್ಲಿ , ಅಖಿಲ ಭಾರತ ಕನ್ನಡ ಸಾಹಿತ್ಯ ಪರಿಷತ್* ಉದಯವಾಯಿತು. ೧೯೭೮ ರಲ್ಲಿ ದೆಲಿಯಲ್ಲಿ ೫೦ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟನೆಯನ್ನು ಅಂದಿನ ಪ್ರಧಾನ ಮಂತ್ರಿಗಳಾದ ಮುರಾರ್ಜಿ ದೇಸಾಯಿ ರವರು ನೆರವೇರಿಸಿದರು. ರಾಷ್ಟ್ರ ಮಟ್ಟದಲ್ಲಿ ಕನ್ನಡದ ಕಂಪನ್ನು ಅರಳಿಸಿದ್ದರು. ಅಂದಿನ ಮುಖ್ಯಮಂತ್ರಿಗಳಾದ ಎಚ್ ಡಿ ದೇವೇಗೌಡ ರವರು ಕನ್ನಡ ಸಾಹಿತ್ಯ ಪರಿಷತ್ತಿನ ಸಿಬ್ಬಂದಿ ವರ್ಗದವರಿಗೆ ಸರ್ಕಾರಿ ದಿಂದ ವೇತನವನ್ನು ನೀಡಲು ಆದೇಶ ನೀಡಿದರು.
ಅಂದಿನ ಮುಖ್ಯಮಂತ್ರಿಗಳಾದ ಯಡಿಯೂರಪ್ಪ ಜಿಲ್ಲೆ ತಾಲೂಕು ಹೋಬಳಿ ಮಟ್ಟದಲ್ಲಿ ಸಾಹಿತ್ಯ ಸಮ್ಮೇಳನ ನಡೆಸಲು ಹೆಚ್ಚಿನ ಅನುದಾನ ನೀಡಿದರು.
ಹಿಂದೆ ಆಕಾಶವಾಣಿಯಲ್ಲಿ ವಿಜಯಪುರದಲ್ಲಿ ಜರುಗಲಿರುವ ಸಾಹಿತ್ಯ ಧಾರ್ಮಿಕ ಕಾರ್ಯಕ್ರಮವನ್ನು ಪ್ರಸ್ತುತಪಡಿಸುತ್ತಿದ್ದುದನ್ನು ನೆನಪಿಸಿಕೊಂಡರು.
ಈ ಕಾರ್ಯಕ್ರಮದಲ್ಲಿ ಹಿರಿಯ ರಂಗ ಕಲಾವಿದರಾದ ಶೇಷಗಿರಿ ರಾವ್ ರವರನ್ನು ಸನ್ಮಾನಿಸಿ ಗೌರವಿಸಿದ್ದರು.
ಈ ಕಾರ್ಯಕ್ರಮದಲ್ಲಿ ಹಿರಿಯ ಕಲಾವಿದ ರಾದ ಶೇಷಗಿರಿರಾವ್ ರವರು ಸನ್ಮಾನ ಸ್ವೀಕರಿಸಿ ಮಾತನಾಡುತ್ತಾ ಹಿಂದೆ ಗೋಕಾಕ್ ಚಳುವಳಿ ಕನ್ನಡಪರ ಚಳುವಳಿಯಲ್ಲಿ ಭಾಗವಹಿಸಿ ಬಂಧನಕ್ಕೆ ಒಳಗಾಗಿದ್ದ ಬಗ್ಗೆ ತಿಳಿಸುತ್ತಾ ವರನಟ ಡಾಕ್ಟರ್ ರಾಜಕುಮಾರ್ ರವರನ್ನು ವಿಜಯಪುರ ಪಟ್ಟಣಕ್ಕೆ ಕರೆದುಕೊಂಡು ಬಂದು ಸನ್ಮಾನ ಮಾಡಿದ ಹೆಗ್ಗಳಿಕೆ ಪಟ್ಟಣದ ನಾಗರಿಕರದ್ದು ಎಂದು ತಿಳಿಸಿದರು.
ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಗರ ಘಟಕದ ಕಸಾಪ ಅಧ್ಯಕ್ಷರಾದ ಜೆ ಎನ್ ಶ್ರೀನಿವಾಸ್ ವಹಿಸಿದ್ದರು.
ಮುಖ್ಯ ಅತಿಥಿಗಳಾಗಿ ಪುರಸಭಾ ಸದಸ್ಯರಾದ ಎಂ.ನಾರಾಯಣಸ್ವಾಮಿ, ಎಂ ರಾಜಣ್ಣ, ಧರ್ಮರಾಯಸ್ವಾಮಿ ಭಕ್ತ ಮಂಡಳಿಯ ಖಜಾಂಚಿಗಳಾದ ಮುನಿನಾರಾಯಣಪ್ಪ, ಜೇಸಿಐ ೧೪ರ ವಲಯ ಅಧಿಕಾರಿಗಳಾದ ಎನ್.ಸಿ ಮುನಿ ವೆಂಕಟರಮಣ, ಕಲಾವಿದರಾದ ಕೆಎಚ್ ಚಂದ್ರಶೇಖರ್, ಮಲ್ಲಿಕಾರ್ಜುನಯ್ಯ, ಚನ್ನಕೃಷ್ಣ, ನಾಗರಾಜು, ಮುನಿನಾರಾಯಣ, ಅಲ್ಲಾಬಕಾಶು ರವರು ಉಪಸ್ಥಿತರಿದ್ದರು.
ಇ-ಮೇಲ್ ನಲ್ಲಿ ಫೋಟೋ ಕಳುಹಿಸಲಾಗಿದೆ.
೬-ವಿಜ-೨ಎ.ವಿಜಯಪುರ ಪಟ್ಟಣದ ಅ ಶಿ ವೈ(ಅಯೋಧ್ಯಾ ನಗರ ಶಿವಾಚಾರ ವೈಶ್ಯ) ನಗರ್ತ ಮಹಂತಿನ ಮಠ ಧರ್ಮ ಸಂಸ್ಥೆಯ ಆವರಣದಲ್ಲಿ ವಿಜಯಪುರ ನಗರ ಕನ್ನಡ ಸಾಹಿತ್ಯ ಪರಿಷತ್ ಘಟಕವು ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ದಿನಾಚರಣೆಯಲ್ಲಿ ಹಿರಿಯ ಕಲಾವಿದ ರಾದ ಶೇಷಗಿರಿರಾವ್‌ರವರನ್ನು ಸನ್ಮಾನಿಸಲಾಯಿತು.
೬-ವಿಜ-೨ಬಿ.ವಿಜಯಪುರ ಪಟ್ಟಣದ ಅ ಶಿ ವೈ(ಅಯೋಧ್ಯಾ ನಗರ ಶಿವಾಚಾರ ವೈಶ್ಯ) ನಗರ್ತ ಮಹಂತಿನ ಮಠ ಧರ್ಮ ಸಂಸ್ಥೆಯ ಆವರಣದಲ್ಲಿ ವಿಜಯಪುರ ನಗರ ಕನ್ನಡ ಸಾಹಿತ್ಯ ಪರಿಷತ್ ಘಟಕವು ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ದಿನಾಚರಣೆಯನ್ನು ಉದ್ಘಾಟಿಸುತ್ತಿರುವ ಮಹಂತಿಮಠ ಧರ್ಮ ಸಂಸ್ಥೆಯ ಗೌರವ ಕಾರ್ಯದರ್ಶಿಗಳಾದ ವಿ.ವಿಶ್ವನಾಥ್,
೬-ವಿಜ-೨ಸಿ.ವಿಜಯಪುರ ಪಟ್ಟಣದ ಅ ಶಿ ವೈ(ಅಯೋಧ್ಯಾ ನಗರ ಶಿವಾಚಾರ ವೈಶ್ಯ) ನಗರ್ತ ಮಹಂತಿನ ಮಠ ಧರ್ಮ ಸಂಸ್ಥೆಯ ಆವರಣದಲ್ಲಿ ವಿಜಯಪುರ ನಗರ ಕನ್ನಡ ಸಾಹಿತ್ಯ ಪರಿಷತ್ ಘಟಕವು ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ದಿನಾಚರಣೆಯಲ್ಲಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮಾಜಿ ಗೌರವ ಕಾರ್ಯದರ್ಶಿಗಳಾದ ಚಂದ್ರಶೇಖರ್ ಹಡಪದ್ ಮಾತನಾಡುತ್ತಿರುವರು.
೬-ವಿಜ-೨ಡಿ.ವಿಜಯಪುರ ಪಟ್ಟಣದ ಅ ಶಿ ವೈ(ಅಯೋಧ್ಯಾ ನಗರ ಶಿವಾಚಾರ ವೈಶ್ಯ) ನಗರ್ತ ಮಹಂತಿನ ಮಠ ಧರ್ಮ ಸಂಸ್ಥೆಯ ಆವರಣದಲ್ಲಿ ವಿಜಯಪುರ ನಗರ ಕನ್ನಡ ಸಾಹಿತ್ಯ ಪರಿಷತ್ ಘಟಕವು ಏರ್ಪಡಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ಸಂಸ್ಥಾಪಕ ದಿನಾಚರಣೆಯಲ್ಲಿ ಸಂಗೀತ ನಿರ್ದೇಶಕರಾದ ಎಂ ವಿ ನಾಯ್ಡುರವರ ನೇತೃತ್ವದಲ್ಲಿ ಗೀತಗಾಯನ ಕಾರ್ಯಕ್ರಮ ನಡೆಸಲಾಯಿತು.