ಮೊದಲ ಬಾರಿಗೆ ಮತ ಖುಷಿ ನೀಡಿದೆ
ತಾಳಿಕೋಟೆ:ಮೇ.8: ಪ್ರಜಾಪ್ರಭುತ್ವದ ಹಬ್ಬವೆಂದು ಹೇಳಲಾಗುವ ಲೋಕಸಭಾ ಚುನಾವಣೆಯಲ್ಲಿ ಮೊದಲ ಬಾರಿಗೆ ಮತದಾನ ಮಾಡುವ ಮೂಲಕ ನನ್ನ ಹಕ್ಕನ್ನು ಚಲಾಯಿಸಿರುವದು ನನಗೆ ಖುಷಿಯನ್ನು ತಂದುಕೊಟ್ಟಿದೆ ಎಂದು ಮೊದಲ ಭಾರಿಗೆ ಮತ ಚಲಾಯಿಸಿದ ಕು.ಭವಾನಿ ಘೋರ್ಪಡೆ ಅವಳು ಸಂತಸ ಹಂಚಿಕೊಂಡಳು.
ತಾಳಿಕೋಟೆ ಪಟ್ಟಣದ ರಾಜವಾಡೆಯ ಬಡಾವಣೆಯಲ್ಲಿಯ ಮತಗಟ್ಟೆಯಲ್ಲಿ ಮತದಾನ ಕೇಂದ್ರಕ್ಕೆ ಆಗಮಿಸಿ ಮತದಾನದ ನಂತರ ಪತ್ರಿಕೆಯೊಂದಿಗೆ ಮಾತನಾಡಿದ ಅವಳು ನಮ್ಮ ದೇಶವನ್ನು ಸುಭದ್ರವಾಗಿ ಮುನ್ನಡೆಸುವ ನಾಯಕನ್ನನ್ನು ಆಯ್ಕೆ ಮಾಡಬೇಕು ನಮ್ಮ ದೇಶದ ಸಂಸ್ಕಾರ ಸಂಸ್ಕøತಿ ಉಳಿಸುವದರೊಂದಿಗೆ ಸುಭದ್ರವಾದ ಸರ್ಕಾರ ನಮ್ಮ ದೇಶದ್ದಾಗಿರಬೇಕು ಎಂಬುದು ನನ್ನ ಭಾವನೆಯಾಗಿದೆ ಮೊದಲ ಭಾರಿಗೆ ಮತದಾನ ಮಾಡಿದ ನಾನು ದೇಶಕ್ಕೆ ಉತ್ತಮ ನಾಯಕನನ್ನು ಆಯ್ಕೆಗೊಳಿಸಿ ಕೊಡುವ ಪ್ರಜಾಪ್ರಭುತ್ವದ ಹಕ್ಕನ್ನು ಯಾರು ಕಳೆದು ಕೊಳ್ಳದೇ ಮತದಾನ ಮಾಡುವ ಜವಾಬ್ದಾರಿಯನ್ನು ತಿಳಿದುಕೊಳ್ಳಬೇಕು ಒಂದು ಮತ ದೇಶದ ಚಿತ್ರಣವನ್ನೇ ಬದಲಿಸಲಿದೆ ಎಂದು ಕು.ಭವಾನಿ ಹೇಳಿದಳು.
