ನೋವಿನಲ್ಲೂ ಮತದಾನ ಕರ್ತವ್ಯ ಮೆರೆದ ದಿ.ನಾಗರೆಡ್ಡಿ ಗೌಡರ ಕುಟುಂಬ
ಸೇಡಂ, ಮೇ,08: ಮೊನ್ನೆಯಷ್ಟೇ ಮಾಜಿ ಶಾಸಕರು, ಶಿಕ್ಷಣ ಪ್ರೇಮಿಗಳಾದ ಡಾ.ನಾಗರೆಡ್ಡಿ ಪಾಟೀಲರು ನಿಧನರಾಗಿದ್ದು, ಇಡೀ ಸೇಡಂ ತಾಲೂಕು ಶೋಕದಲ್ಲಿ ಮುಳುಗಿತ್ತು. ರಾಜ್ಯದ ಮುಖ್ಯಮಂತ್ರಿಗಳಾದ ಶ್ರೀ ಸಿದ್ದರಾಮಯ್ಯನವರು ಸಹ ಟ್ವಿಟ್ ಮಾಡುವ ಮೂಲಕ ಹಿರಿಯ ಚೇತನಕ್ಕೆ ಗೌರವ ಸಂತಾಪ ಸಲ್ಲಿಸಿದ್ದರು. ಸರಕಾರಿ ಗೌರವದೊಂದಿಗೆ ಗೌಡರ ಅಂತ್ಯಕ್ರಿಯೆ ನಡೆಯಿತು.ನಿನ್ನೆಯ ನೋವನ್ನು ಹಾಗೂ ಇಂದಿನ ಲೋಕಸಭೆ ಮತದಾನವನ್ನು ಎದೆಯಲ್ಲಿಟ್ಟುಕೊಂಡ ಇಡೀ ಕುಟುಂಬ, ಮತದಾನದ ಕರ್ತವ್ಯವನ್ನು ನಿರ್ಲಕ್ಷ್ಯಿಸದೆ, 20 ಜನರ ಕುಟುಂಬ ಸೇರಿ ಮತಗಟ್ಟೆಗೆ ಹೋಗಿ ಮತದಾನ ಮಾಡುವ ಮೂಲಕ ಇನ್ನಿತರರಿಗೆ ಮಾದರಿಯಾಗಿದ್ದಾರೆ.
ಇನ್ನೂ ಬಿಸಿಲಿದೆ, ನಡೆದುಕೊಂಡು ಹೋಗಬೇಕಾ, ನನ್ನದೊಂದು ವೋಟ್ ಏನಾಗುತ್ತೆ, ಸಂಜೆ ಹಾಕೋಣ ಹೀಗೆ ತಮ್ಮಷ್ಟಕ್ಕೆ ತಾವೇ ಮತವನ್ನು ಚಲಾಯಿಸಲು ಆಲಸ್ಯ ತೋರಿತ್ತಿರುವುದು ತರವಲ್ಲ.ದಿ.ಡಾ.ನಾಗರೆಡ್ಡಿ ಪಾಟೀಲರ ಕುಟುಂಬ ನೋವಿನಲ್ಲೂ ‘ಮತದಾನ’ ಜವಬ್ದಾರಿ ನಿಭಾಯಿಸಿದೆ.