ಚಿಂಚೋಳಿ: ಏ.10ರಂದು 891ನೇ ಬಸವ ಜಯಂತಿ
ಚಿಂಚೋಳಿ,ಏ.8- ಪಟ್ಟಣದ ಚಂದಾಪುರದಲ್ಲಿ ಪ್ರತಿವರ್ಷದಂತೆ ಈ ವರ್ಷವೂ ಕೂಡ ಬಸವ ಅಭಿಮಾನಿ ಬಳಗದ ವತಿಯಿಂದ 891ನೇ ಬಸವ ಜಯಂತಿ ಅದ್ದೂರಿಯಾಗಿ ನಡೆಸಲಾಗುವುದು. ಎಂದು ಬಸವ ಜಯಂತಿಯ ಅಧ್ಯಕ್ಷರಾದ ವೀರೇಶ ಯಂಪಳ್ಳಿ, ಅವರು ತಿಳಿಸಿದ್ದಾರೆ.
ಕಾರ್ಯಕ್ರಮ ದಿನಾಂಕ 10-05-2024 ರಂದು ಬೆಳಗ್ಗೆ 7.00 ಗಂಟೆಗೆ ಚಂದಾಪುರದ ಹೌಸಿಂಗ್ ಬೋರ್ಡ ಬಸವ ದೇವಸ್ಥಾನ ಕಟ್ಟೆಯಿಂದ, ಚಿಂಚೋಳಿ ಬಸವೇಶ್ವರ ವೃತ್ತದವರೆಗೆ ಬಸವಣ್ಣನವರ ಭಾವಚಿತ್ರದ ಭವ್ಯ ಮೆರವಣಿಗೆ ಹಮ್ಮಿಕೊಳ್ಳಲಾಗಿದೆ ಮತ್ತು ಸಾಯಂಕಾಲ 6.30 ಗಂಟೆಗೆ ಹಾರಕೂಡ ಚನ್ನಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯ ಎದುರುಗಡೆ ಬಸವ ಪ್ರೇರಣೆ ಕಾರ್ಯಕ್ರಮ ಜರುಗಲಿದೆ.
ಈ ಕಾರ್ಯಕ್ರಮದ ದಿವ್ಯ ಸಾನಿಧ್ಯವನ್ನು ಪೂಜ್ಯ ಶ್ರೀ ಸಿದ್ರಾಮೇಶ್ವರ ಸ್ವಾಮಿಗಳು ಬಸವ ಮಹಾಮನೆ, ಬಸವಕಲ್ಯಾಣ, ಕಾರ್ಯಕ್ರಮದ ಉಪನ್ಯಾಸವನ್ನು ಡಾ. ಶಿವಶರಣಪ್ಪ ಮೋತಕಪಳ್ಳಿ, ಮುಖ್ಯಸ್ಥರು, ಕನ್ನಡ ವಿಭಾಗ ಸರಕಾರಿ ಪ್ರಥಮ ದರ್ಜೆ ಕಾಲೇಜು ಕಾಳಗಿ, ಅವರು ಭಾಗವಹಿಸಲಿದ್ದಾರೆ ಅದರಿಂದ ಚಂದಾಪುರದ ಎಲ್ಲಾ ಬಸವ ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಬೇಕೆಂದು ಮನವಿ ಮಾಡಿದರು