ಬಸವನಬಾಗೇವಾಡಿ ಮತಕ್ಷೇತ್ರದಲ್ಲಿ ಶಾಂತಿಯುತ ಮತದಾನ
ಬಸವನಬಾಗೇವಾಡಿ:ಮೇ.8: ಮತಕ್ಷೇತ್ರದಲ್ಲಿ ಸಣ್ಣ ಪುಟ್ಟ ಗೊಂದಲಗಳನ್ನು ಹೊರತು ಪಡಿಸಿ ಯಾವುದೇ ಅಹಿತಕರ ಘಟನೆ ಸಂಭವಿಸದೆ ಸಾರ್ವತ್ರಿಕ ಲೋಕಸಭಾ ಚುನಾವಣೆಯ ಮತದಾನವು ಮಂಗಳವಾರ ಶಾಂತಿಯುತವಾಗಿ ಜರುಗಿತು.
ಬೆಳಿಗ್ಗೆ 7 ಗಂಟೆಗೆ ಆರಂಭವಾದ ಮತದಾನ ಪ್ರಕ್ರಿಯಲ್ಲಿ ಬಳಿಗ್ಗೆಯಿಂದಲೇ ಮತದಾರರು ಮತಗಟ್ಟೆಗೆ ಆಗಮಿಸಿ ಮತ ಚಲಾಯಿಸಿದರು, ಬಿಸಿಲಿನ ಪ್ರಖರತೆ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಬೆಳಿಗ್ಗೆಯಿಂದಲೇ ಮತದಾನ ಚುರುಕಾಗಿ ಆರಂಭಗೊಂಡಿತು, ಮದ್ಹಾಹ್ನದ ಹೊತ್ತಿಗೆ ಮಂದಗತಿಯಲ್ಲಿ ಸಾಗಿದ ಮತದಾನ ಸಂಜೆ 4 ಗಂಟೆಯ ನಂತರ ಮತದಾರರು ಬಿರುಸಿನಿಂದ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿರುವುದು ಕಂಡು ಬಂದಿತು.
ಕ್ಷೇತ್ರದಲ್ಲಿ ಬೆಳಿಗ್ಗೆ 9 ಗಂಟೆ ಹೊತ್ತಿಗೆ ಶೇ, 9.06 . 11 ಗಂಟೆ ಹೊತ್ತಿಗೆ ಶೇ, 22.27. ಮದ್ಯಾಹ್ನ 1 ಗಂಟೆ ಹೊತ್ತಿಗೆ ಶೇ, 41.76. 3 ಗಂಟೆ ಹೊತ್ತಿಗೆ ಶೇ,52.89 ಸಂಜೆ 5 ಗಂಟೆ ಹೊತ್ತಿಗೆ ಶೇ, 65 ಪ್ರತಿಷತ ಮತದಾನವಾಗಿದೆ ಎಂದು ತಹಶೀಲ್ದಾರ ಕಾರ್ಯಲಯದ ಮೂಲಗಳಿಂದ ತಿಳಿದು ಬಂದಿದೆ.
ಕ್ಷೇತ್ರದಲ್ಲಿ ಬಿಸಿಲಿನ ತಾಪಮಾನ ಹೆಚ್ಚಾಗಿದ್ದು ಕೆಲವರು ಬಿಸಿಲು ಆರಂಭವಾಗುವ ಮುನ್ನವೇ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿದರೆ ಕೆಲವರು ಬಿಸಿಲಿನ ತಾಪಮಾನ ಕಡಿಮೆ ಆದ ನಂತರ ಸಂಜೆ ಹೊತ್ತಿಗೆ ಮತಗಟ್ಟೆಗೆ ಆಗಮಿಸಿ ಮತದಾನ ಪ್ರಕ್ರಿಯೆಯಲ್ಲಿ ಭಾಗವಹಿಸಿರುವುದು ಕಂಡು ಬಂದಿತು.
ಕೆಲ ಮತಗಟ್ಟೆಗಳಲ್ಲಿ ನೆರಳಿನ ವ್ಯವಸ್ಥೆ ಕಲ್ಪಿಸಿರುವುದು ಕಂಡು ಬಂದಿತು, ಪ್ರತಿ ಮತಗಟ್ಟೆಯಲ್ಲಿ ಕಲುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು, ಹಾಗೂ ಆರೋಗ್ಯ ಇಲಾಖೆ ಸಿಬ್ಬಂದಿಗಳು ಪ್ರತಿ ಮತಗಟ್ಟೆಯಲ್ಲಿ ತಮ್ಮ ಕರ್ತವ್ಯ ನಿರ್ವಹಿಸಿದರು.
ಗಮನ ಸೆಳೆದ ಸಖಿ ಮತಗಟ್ಟೆ: ಸಮೀಪದ ಟಕ್ಕಳಕಿ ಗ್ರಾಮದಲ್ಲಿ ಮತಗಟ್ಟೆ ಸಂಖ್ಯ 91 ರಲ್ಲಿ 638 ಮಹಿಳಾ ಮತದಾರರಿರುವ ಹಿನ್ನಲೆಯಲ್ಲಿ ಸಖಿ ಮತಗಟ್ಟೆ ಸ್ಥಾಪಿಸಿರುವುದು ವಿಶೇಷವಾಗಿತ್ತು. ಮತಗಟ್ಟೆಯ ಆವರಣದಲ್ಲಿ ವಿಶೇಷóವಾಗಿ ಅಲಂಕಾರಿಕ ಸಾಮಿಗ್ರಿಗಳನ್ನ ಇರಿಸಲಾಗಿದ್ದು, ಸಖಿ ಮತಗಟ್ಟೆ ಎಂದು ನಾಮಫಲಕದೊಂದಿಗೆ ಸಂಪೂರ್ಣ ಮಟಗಟ್ಟೆಯು ಪಿಂಕ್‍ಮಹವಾಗಿದ್ದು ಗಮನ ಸೆಳೆಯುವಂತಿತ್ತು.
ಸಿಬ್ಬಂದಿಗಳಿಲ್ಲದ ವೀಲ್ ಚೇರ್:- ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಗ್ರಾಮ ಪಂಚಾಯಿತಿ ಸಿಬ್ಬಂದಿಗಳು ವೀಲ್ ಚೇರ್‍ನಲ್ಲಿ ವೃದ್ದರನ್ನ ಕರೆದುಕೊಂಡು ಹೋಗಿ ಮತ್ತೆ ವೀಲ್ ಚೇರನಲ್ಲಿ ಕರೆದುಒಂಡು ಬರುತ್ತಿದ್ದರು ಆದರೆ ತಾಲೂಕಿನ ಮುತ್ತಗಿ ಗ್ರಾಮದ ಮತಗಟ್ಟೆ ಸಂಖ್ಯ 100, ಹಾಗೂ ಟಕ್ಕಳಕಿ ಗ್ರಾಮದ 91 ರಲ್ಲಿ ವೃದ್ದರಿಗಾಗಿ ಹಾಗೂ ಅಂಗವಿಕರಿಗಾಗಿ ವಿಲ್ ಚೇರ್ ವ್ಯವಸ್ಥೆ ಮಾಡಲಾಗಿತ್ತು ಆದರೆ ವಿಲ್ ಚೇರ್‍ನಲ್ಲಿ ಕರೆದುಕೊಂಡು ಹೋಗುವ ಯಾವ ಸಿಬ್ಬಂದಿಯೂ ಯಾವ ಸ್ವಯಂ ಕಾರ್ಯಕರ್ತರು ಇಲ್ಲದ ಪರಿಣಾಮ ಮತದಾರರ ಮಕ್ಕಳೆ ವಿಲ್ ಚೇರ್‍ನಲ್ಲಿ ತಮ್ಮ ಪಾಲಕರನ್ನ ಕರೆದುಕೊಂಡು ಹೋಗುತ್ತಿರುವುದು ಕಂಡು ಬಂದಿತು.
ಮತ ಚೀಟಿ ನೀಡದ ಕಾರ್ಯಕರ್ತೆಯರು: ಪಟ್ಟಣದಲ್ಲಿ ಕೆಲ ವಾರ್ಡಗಳಲ್ಲಿ ಅಂಗನವಾಡಿ ಕಾರ್ಯಕರ್ತಎಯರು ಮತ ಚೀಟಿ ನೀಡಿಲ್ಲವೆಂದು ಕೆಲವರು ಆರೋಪಿಸಿದರು, ಅಲ್ಲದೇ ತಮ್ಮ ಮತ ಚೀಟಿ ಪಡೆಯಲು ಕೆಲ ಪರದಾಡಿರುವ ಘಟನೆ ಪಟ್ಟಣದ ಶಾಸಕರ ಮಾದರಿ ಪ್ರಾಥಮಿಕ ಶಾಲೆಯಲ್ಲಿ ಕಮಡು ಬಂದಿತು.
ಮಸಬಿನಾಳ ಗ್ರಾಮದಲ್ಲಿ ಪೊಲೀಸ್ ಬಿಗಿ ಬಂದೊ ಬಸ್ತ: ತಾಲೂಕಿನ ಮಸಬಿನಾಳ ಗ್ರಾಮದಲ್ಲಿ ಕಳೆದ ವಿಧಾನ ಸಭೆ ಚುನಾವಣೆಯಲ್ಲಿ ಕೆಲ ಕಿಡೀಗೆಡಿಗಳು ಇವಿಎಂ ಮಷಿನ್‍ಗಳನ್ನು ಧ್ವಸಂ ಮಾಡಿರುವ ಘಟನೆ ಸಂಭವಿಸಿರುವ ಹಿನ್ನಲೆಯಲ್ಲಿ ಗ್ರಾಮದಲ್ಲಿ ಬಿಗಿ ಪೊಲೀಸ್ ಬಂದೊ ಬಸ್ತ ಏರ್ಪಡಿಸಲಾಗಿತ್ತು.