ಮತ ಚಲಾಯಿಸಿದ ಮದುಮಗ
ಸಂಜೆವಾಣಿ ವಾರ್ತೆ,
ವಿಜಯಪುರ,ಮೇ.8 :ವಿಜಯಪುರ ಮೀಸಲು ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಸಿಂದಗಿ ತಾಲ್ಲೂಕಿನ ಬ್ರಹ್ಮದೇವನಮಡು ಗ್ರಾಮದ ಯುವಕನೊಬ್ಬ ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ತೆರಳಿ ಮತದಾನ ಮಾಡಿದ ಘಟನೆ ನಡೆದಿದೆ.
ಇರ್ಫಾನ ಚಂಡ್ರಿಕಿ ಅವರು ಮತದಾನ ಮಾಡಿದ ಮದುಮಗ. ಈತ ಮದುವೆ ಮಂಟಪದಿಂದ ನೇರವಾಗಿ ಮತಗಟ್ಟೆಗೆ ತೆರಳಿ ಮತ ಚಲಾಯಿಸಿ ಕರ್ತವ್ಯ ಪ್ರಜ್ಞೆ ಮೆರೆದರು.