ಬಸವಣ್ಣನವರು ಮಾನವ ಧರ್ಮದ ಪ್ರತಿಪಾದಕರು :ನೀಲಮ್ಮ ಪಾಟೀಲ
ಕಲಬುರಗಿ,ಮೇ.7:12ನೇ ಶತಮಾನವು ಪ್ರಜಾಪ್ರಭುತ್ವ ಹಾಗೂ ಸಂವಿಧಾನದ ಬಗ್ಗೆ ಜಗತ್ತಿಗೆ ಪರಿಚಯಿಸಿದ ಅಪರೂಪದ ಶತಮಾನವಾಗಿದೆ ಎಂದು ಅರ್ಥಶಾಸ್ತ್ರದ ಉಪನ್ಯಾಸಕರಾದ ಪ್ರೊ. ನೀಲಮ್ಮ ಪಾಟೀಲ ಹೆಬ್ಬಾಳ ಹೇಳಿದರು.ಸೋಮವಾರ ನಗರದಲ್ಲಿರುವ ಭವಾನಿ ನಗರದ ಬಬಲಾದ ಮಠದಲ್ಲಿ 209ನೇ ಶಿವಾನುಭೋಗೋಷ್ಠಿ ಕಾರ್ಯಕ್ರಮದಲ್ಲಿ ವಿಶೇಷ ಉಪನ್ಯಾಸ ನೀಡಿ ಮಾತನಾಡುತ್ತ ಬಸವಣ್ಣನವರು ಕೇವಲ ಒಂದು ಜಾತಿ ಜನಾಂಗಕ್ಕೆ ಸೀಮಿತವಾಗಿಲ್ಲ ಇಡೀ ಮಾನವ ಕುಲವನ್ನೇ ಒಳಿತು ಬಯಸಿ ಉದ್ಧಾರ ಮಾಡಿ ಮಾನವ ಧರ್ಮದ ಪ್ರತಿಪಾದಕರಾಗಿದ್ದಾರೆ. ಶರಣರ ಜಯಂತಿಗಳು ಆಚರಣೆಯೊಂದಿಗೆ ಅವರ ವಿಚಾರಗಳು ನಮ್ಮ ಜೀವನದಲ್ಲಿ ಅಳವಡಿಸಿಕೊಂಡು ಜೀವನ ಸಾಗಿಸಬೇಕು ಅಂದಾಗ ಮಾತ್ರ ನಮ್ಮ ಮಕ್ಕಳಿಗೆ ನಾವು ಆದರ್ಶವಾಗುತ್ತೆವೆ. ಬಸವಣ್ಣನವರ ವಚನಗಳು ಸಮೃದ್ಧ ಸಮಾಜದ ನಿರ್ಮಾಣಕ್ಕೆ ಅಡಿಪಾಯವಾಗುತ್ತವೆ ಎಂದು ಮಾರ್ಮಿಕವಾಗಿ ನುಡಿದರು. ಮುಖ್ಯ ಅತಿಥಿಗಳಾಗಿ ಏ ಕೆ ಆರ್ ದೇವಿ ಪಿಯು ಕಾಲೇಜಿನ ಆಡಳಿತ ಅಧಿಕಾರಿ ಹಾಗೂ ಪ್ರಾಂಶುಪಾಲರಾದ ವಿದ್ಯಾಸಾಗರ ದೇಶಮುಖ ಆಗಮಿಸಿದರು. ನ್ಯಾಯವಾದಿ ಹಣಮಂತರಾಯ ಅಟ್ಟೂರ ಸ್ವಾಗತಿಸಿದರು. ಸಂಗಮೇಶ ಹೂಗಾರ ನಿರೂಪಿಸಿ, ವಂದಿಸಿದರು.
ಕಾರ್ಯಕ್ರಮದಲ್ಲಿ ಶರಣು ಪೊಲೀಸ ಪಾಟೀಲ, ರೇವಣಸಿದ್ದಯ್ಯ ಶಾಸ್ತ್ರಿ, ಗುರುರಾಜ ಹಸರಗುಂಡಗಿ, ಸಿದ್ದಣ್ಣ ವಾಡಿ, ನಿರ್ಮಲಾ ಹಿರೇಮಠ, ಡಾ. ಶಿವಶರಣಪ್ಪ ಪಾಟೀಲ, ನಾಗೇಂದ್ರ ಪಾಟೀಲ ಹೆಬ್ಬಾಳ, ಶಿವಕುಮಾರ ಸಾವಳಗಿ, ಕಿರಣ ಗೊಡಬೆಲೆ, ಅಮರೇಶ್ವರಿ ಹೂಗಾರ ಸೇರಿದಂತೆ ಅನೇಕ ಜನ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉಪನ್ಯಾಸಕರಿಗೂ, ಅತಿಥಿಗಳಿಗೂ ಗೌರವಿಸಲಾಯಿತು.