ಭಾಗ್ಯನಗರ :ದಿ.10 ರಿಂದ ಶಂಕರಾಚಾರ್ಯರ ಜಾತ್ರಾ ಮಹೋತ್ಸವ ಮತ್ತುಅಕ್ಷರಭ್ಯಾಸಕಾರ್ಯಕ್ರಮ
ಸಂಜೆವಾಣಿ ವಾರ್ತೆ
ಕೊಪ್ಪಳ, ಮೇ.07: ಪಕ್ಕದ ಸುಕ್ಷೇತ್ರ ಭಾಗ್ಯನಗರದ ಶ್ರೀ ಶಾರದಾ ಪೀಠಜಗದ್ಗುರು ಶಂಕರಾಚಾರ್ಯರ ಮಠದಜಾತ್ರಾ ಮಹೋತ್ಸವವನ್ನುಇದೇ ತಿಂಗಳ 10 ರಿಂದ 12 ವರೆಗೆ ವಿಜೃಂಭಣೆಯಾಗಿಜರುಗಿಸಲಾಗುವುದು. ಇದೇ ಸಂದರ್ಭದಲ್ಲಿ ವಿವಿಧಧಾರ್ಮಿಕ ಕಾರ್ಯಕ್ರಮಗಳು ಸೇರಿದಂತೆಅಕ್ಷರಭ್ಯಾಸಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ.
ದಿ.10ರ ಶುಕ್ರವಾರದಂದು ಬ್ರಾಹ್ಮಿ ಮುಹೂರ್ತದಲ್ಲಿಗುರುದೇವತಾ ಮೂರ್ತಿಗಳಿಗೆ ವಿಶೇಷ ಪಂಚಾಮೃತಅಭಿಷೇಕ, ಅಲಂಕಾರ ಪೂಜೆ ನಂತರಧ್ವಜಾರೋಹಣ ನೆರವೇರಿಸಲಾಗುವುದು.ನಂತರ ಶ್ರೀ ಶಾರದಾ ಮಾತೆಗೆ ಹಾಗೂ ಮುತ್ತೈದೆಯರಿಗೆ ಉಡಿ ತುಂಬುವಕಾರ್ಯಕ್ರಮ ಮತ್ತು ಮಕ್ಕಳಿಗೆ ಅಕ್ಷರಭ್ಯಾಸಕಾರ್ಯಕ್ರಮವನ್ನು ನಡೆಸಲಾಗುವುದು.
ದಿ.11ರ ಶನಿವಾರದಂದು ವಿವಿಧಧಾರ್ಮಿಕ ಕಾರ್ಯಕ್ರಮಗಳೊಂದಿಗೆ ಬೆಳಿಗ್ಗೆ 7 ಗಂಟೆಗೆ ಭಾಗ್ಯನಗರದ ಮಹಿಳೆಯರು ಹಾಗೂ ಶ್ರೀ ಶಾರದಾಂಬಾ ಶಾಲೆಯ ವಿದ್ಯಾರ್ಥಿಗಳಿಂದ ಸಾಮೂಹಿಕ ಶ್ರೀರುದ್ರ ಪಠಣದೊಂದಿಗೆ ಶಿವಸಾಲಿಗ್ರಾಮಕ್ಕೆ ರುದ್ರಾಭಿಷೇಕ ನಡೆಸಲಾಗುವುದು.ನಂತರಸಂಜೆ 5 ಗಂಟೆಗೆ ಲಘು (ಉಚ್ಛಾಯ) ರಥೋತ್ಸವವನ್ನು ಹಮ್ಮಿಕೊಳ್ಳಲಾಗಿದೆ.
ದಿ.12 ರವಿವಾರ ಬೆಳಿಗ್ಗೆ 7 ಗಂಟೆಗೆ ಭಾಗ್ಯನಗರದ ಮಹಿಳೆಯರು ಹಾಗೂ ಶ್ರೀ ಶಾರದಾಂಬಾ  ಶಾಲೆಯ ವಿದ್ಯಾರ್ಥಿಗಳಿಂದ ಸಾಮೂಹಿಕ ಶ್ರೀ ಲಲಿತಾ ಸಹಸ್ರನಾಮ ಪಾರಾಯಣ ಸೇರಿದಂತೆ ವಿವಿಧಧಾರ್ಮಿಕ  ಕಾರ್ಯಕ್ರಮಗಳು ನಡೆಯಲಿದ್ದು, ನಂತರ 8.30ಕ್ಕೆ ಮಡಿತೇರು ಎಳೆಯಲಾಗುವುದು. ಇದಲ್ಲದೆ ವಿವಿಧಧಾರ್ಮಿಕ ಚಿಂತನೆಗಳು ಸೇರಿದಂತೆ ವಿವಿಧ ಕಾರ್ಯಕ್ರಮಗಳು ನಂತರ ಮಹಾಪ್ರಸಾದಜರುಗುವುದು.ನಂತರ ಸಂಜೆ 5.30ಕ್ಕೆ ಜಗದ್ಗುರು ಶ್ರೀ ಶಂಕರಾಚಾರ್ಯರ ಮಹಾರಥೋತ್ಸವಜರುಗುವುದು.ಹಾಗೂ ಸಂಜೆ ವಿವಿಧ ಸಾಂಸ್ಕೃತಿಕ,ಧಾರ್ಮಿಕ ಕಾರ್ಯಕ್ರಮಗಳು ಜರುಗುವುವು. ಎಲ್ಲಾ ಕಾರ್ಯಕ್ರಮಗಳು ಶ್ರೀ ಶಿವರಾಮಕೃಷ್ಣಾನಂದ ಭಾರತಿ ಸ್ವಾಮಿಇವರ ನೇತೃತ್ವದಲ್ಲಿ ನಡೆಯುವುದುಎಂದು ಶ್ರೀ ಶಾರದಾ ಪೀಠ, ಜಗದ್ಗುರು ಶ್ರೀ ಶಂಕರಾಚಾರ್ಯರ ಮಠ ಪ್ರಕಟಣೆಯಲ್ಲಿ ತಿಳಿಸಿ ಸರ್ವರು ಈ ಜಾತ್ರಾ ಮಹೋತ್ಸವದಲ್ಲಿ ಪಾಲ್ಗೊಂಡುಜಗದ್ಗುರು ಶಂಕರಾಚಾರ್ಯರ ಕೃಪೆಗೆ ಪಾತ್ರರಾಗಲುಕೋರಲಾಗಿದೆ.
One attachment • Scanned by Gmail