ಗುದ್ನೇಪ್ಪನಮಠ  ದಲ್ಲಿ ನೀರಸ ಮತದಾನ
ಸಂಜೆವಾಣಿ ವಾರ್ತೆ
ಕುಕನೂರು, ಮೇ.07:  ಪಟ್ಟಣದ 19ನೇ ವಾರ್ಡಿನ ಗುಡ್ನೆಶ್ವರ ಮಠ ದಲ್ಲಿ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಮತ ದಾನ ಬಹಿಷ್ಕಾರ ನೀರಸ ಪ್ರತಿಕ್ರಿಯೆ ವ್ಯಕ್ತವಾಗಿದೆ.
ಬೆಳಿಗ್ಗೆ ಯಿಂದ ೧೧ ಈವರೆಗೆ ಯಾವುದೇ ರೀತಿಯ  ಮತದಾನ ಮಾಡಿದ್ದಿಲ್ಲ್ಲ.೧೧ ರ.ನಂತರ ಜನರು ಗುಂಪು ಕಟ್ಟಿಕೊಂಡು ಬಂದು ಮತದಾನ ನಡೆಸಿದರು.
ಪಟ್ಟಣದ ಗುದ್ನೇಪ್ಪನಮಠದ ದೇವಸ್ಥಾನದ ಜಾಗದಲ್ಲಿ ಸರ್ಕಾರಿ ಕಟ್ಟಡ ಕಟ್ಟುವ ಆದೇಶ ಹಿಂಪಡೆಯಬೇಕು ಎಂದು ಮತದಾನ ಬಹಿಷ್ಕಾರ  ಹಾಕುವ ನಿದಾ೯ರ ಮಾಡಿದ್ದರು.
ತಾಲೂಕಾಡಳಿತ ಸೌಧ, ಕೋರ್ಟ್, ಬುದ್ಧ, ಬಸವ ಅಂಬೇಡ್ಕರ್ ಭವನ ಕಟ್ಟಡಕ್ಕೆ ಜಾಗ ನಿಗದಿ
ಧಾರ್ಮಿಕ ದತ್ತಿ ಇಲಾಖೆ ಯಿಂದ ಬಾಡಿಗೆ ರೂಪದಲ್ಲಿ ಕಟ್ಟಡಕ್ಕೆ ಆದೇಶ ಹಿನ್ನೆಲೆಯಲ್ಲಿ ಗ್ರಾಮಸ್ಥರ ವಿರೋಧ ವ್ಯಕ್ತ ಪಡಿಸಿದ್ದರು.
ಗುದ್ನೇಪ್ಪನಮಠ ದೇವಸ್ಥಾನದ ಜಾಗ ಕೈ ಬಿಡುವಂತೆ ಗ್ರಾಮಸ್ಥರ ಆಗ್ರಹ ಮತದಾನ ಮಾಡದೆ ಬಹಿಷ್ಕರಿಸಿದ ನಿವಾಸಿಗಳು ಕ್ರಮೇಣ ಮತ ಚಲಾಯಿಸಿದರು.
1040 ಮತಗಳಿರುವ ಗುದ್ನೇಪ್ಪನಮಠದ ಬೂತ್ ನಲ್ಲಿ ಮೊದಲು ಗ್ರಾಮಸ್ಥರ ನಡುವೆ ಚಕಮಕಿ ನಡೆದಿದೆ, ಜಿಲ್ಲಾ ಹೆಚ್ಚು ವರಿ ಪೊಲೀಸ್ ವರಿಷ್ಟಾಧಿಕಾರಿ , ವೃತ್ತ ಪೊಲೀಸ್ ನಿರೀಕ್ಷಕರು , ಪಿಎಸ್ ಅಯ್  ಸ್ಥಳದಲ್ಲಿ ಬಿಡಾರ ಹೂಡಿ ಶಾಂತಿ ಸುವ್ಯವಸ್ಥೆ  ಕಾಪಾಡಿದರು.